ETV Bharat / sports

ಆಸ್ಟ್ರೇಲಿಯಾ ಓಪನ್​.. ಎರಡನೇ ಸುತ್ತು ಪ್ರವೇಶಿಸಿದ ಜೋಕೊವಿಕ್​,ಥೀಮ್​..

ಈಗಾಗಲೇ ಜೋಕೊವಿಕ್ 8 ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿರುವುದರಿಂದ ಈ ಬಾರಿಯೂ ಅವರೇ ನೆಚ್ಚಿನ ಆಟಗಾರರಾಗಿದ್ದಾರೆ. ಜೋಕೊವಿಕ್​ ಮುಂದಿನ ಸುತ್ತಿನಲ್ಲಿ ಅಮೆರಿಕಾದ ಫ್ರಾನ್ಸಿಸ್ ಟಿಯಾಫೊ ಸವಾಲನ್ನು ಎದುರಿಸಲಿದ್ದಾರೆ..

author img

By

Published : Feb 8, 2021, 8:38 PM IST

ಆಸ್ಟ್ರೇಲಿಯಾ ಓಪನ್
ನೊವಾಕ್ ಜೋಕೊವಿಕ್​

ಮೆಲ್ಬೋರ್ನ್ ​: ವಿಶ್ವದ ನಂಬರ್​ ಒನ್ ಟೆನ್ನಿಸ್ ಪ್ಲೇಯರ್​ ನೊವಾಕ್ ಜೋಕೊವಿಕ್​ 2021ರ ಆಸ್ಟ್ರೇಲಿಯನ್ ಓಪನ್​ನಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ.

ಹಾಲಿ ಚಾಂಪಿಯನ್ ಆಗಿರುವ ಸೆರ್ಬಿಯನ್ ತಾರೆ ಇಂದು ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್​ನ ಜೆರೆಮಿ ಚಾರ್ಡಿ ವಿರುದ್ಧ 6-3, 6-1, 6-2ರಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು.

ಇದಕ್ಕೂ ಮುನ್ನ ಈ ಇಬ್ಬರು ಆಟಗಾರರು 13 ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲೂ ಹಾಲಿ ಚಾಂಪಿಯನ್ನರು ಗೆಲುವು ಸಾಧಿಸಿದ್ದಾರೆ.

18ನೇ ಗ್ರ್ಯಾಂಡ್​ ಸ್ಲಾಮ್​ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ಗರಿಷ್ಠ ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಪಡೆದಿರುವ ನಡಾಲ್(20) ಮತ್ತು ಫೆಡರರ್(20)​ ದಾಖಲೆಗೆ ತುಂಬಾ ಹತ್ತಿರವಾಗಲಿದ್ದಾರೆ.

ಈಗಾಗಲೇ ಜೋಕೊವಿಕ್ 8 ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿರುವುದರಿಂದ ಈ ಬಾರಿಯೂ ಅವರೇ ನೆಚ್ಚಿನ ಆಟಗಾರರಾಗಿದ್ದಾರೆ. ಜೋಕೊವಿಕ್​ ಮುಂದಿನ ಸುತ್ತಿನಲ್ಲಿ ಅಮೆರಿಕಾದ ಫ್ರಾನ್ಸಿಸ್ ಟಿಯಾಫೊ ಸವಾಲನ್ನು ಎದುರಿಸಲಿದ್ದಾರೆ.

ಇವರ ಜೊತೆಗೆ ಟೂರ್ನಿಯ ಆರಂಭದ ದಿನ 3ನೇ ಶ್ರೇಯಾಂಕದ ಯುಎಸ್ ಓಪನ್ ಚಾಂಪಿಯನ್​ ಡೊಮೆನಿಕ್ ಥೀಮ್, ಕಜಕಿಸ್ತಾನದ ಮಿಖಾಯಿಲ್ ಕುಕುಷ್ಕಿನ್ ಅವರನ್ನು ಮೊದಲ ಸುತ್ತಿನ ಪಂದ್ಯದಲ್ಲಿ 7-6(2), 6-2, 6-3 ರಲ್ಲಿ ಮಣಿಸಿ ದ್ವಿತೀಯ ಸುತ್ತು ಪ್ರವೇಶಿಸಿದರು. ಜರ್ಮನಿಯ ಅಲೆಕ್ಸಾಂಡರ್​ ಜ್ವರೆವ್ 6-7(8) 7-6 (5), 6-3, 6-2 ರಲ್ಲಿ ಅಮೆರಿಕಾದ ಮಾರ್ಕೋಸ್​ ಗಿರಾನ್ ಮಣಿಸಿದರು.

ಇದನ್ನು ಓದಿ:24 ನೇ ಗ್ರ್ಯಾಂಡ್ ಸ್ಲ್ಯಾಮ್​ನತ್ತ ಚಿತ್ತ: ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ಸೆರೆನಾ ವಿಲಿಯಮ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.