ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ನ ಸೆಮಿಫೈನಲ್ ಪಂದ್ಯದಲ್ಲಿ 20 ಗ್ರ್ಯಾಂಡ್ಸ್ಲಾಮ್ ಒಡೆಯ ರೋಜರ್ ಫೆಡರರ್ ಅವರನ್ನು ನೇರಸೆಟ್ಗಳ ಹಂತರದಲ್ಲಿ ಮಣಿಸಿದ ನೊವಾಕ್ ಜೊಕೊವಿಕ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಲಿ ಚಾಂಪಿಯನ್ ಆಗಿರುವ ಸರ್ಬಿಯಾದ ವಿಶ್ವದ 2ನೇ ಶ್ರೇಯಾಂಕದ ಆಟಗಾರ ಜೊಕೊವಿಕ್ 7-6(7-1), 6-4, 6-3 ರ ನೇರ ಸೆಟ್ಗಳಲ್ಲಿ ಸ್ವಿಸ್ ಆಟಗಾರನ ವಿರುದ್ಧ ಪ್ರಾಬಲ್ಯ ಸಾಧಿಸಿದರು.
ಮೊದಲ ಸೆಟ್ನಲ್ಲಿ ಸಮಾನ ಹೋರಾಟ ನಡೆಸಿದ ಫೆಡೆರೆರ್ ಟೈಬ್ರೇಕರ್ನಲ್ಲಿ ಸೋಲು ಕಂಡು ಹಿನ್ನಡೆ ಅನುಭವಿಸಿದರು. ನಂತರದ ಸೆಟ್ನಲ್ಲೂ ಉತ್ತಮ ಪೈಪೋಟಿ ನೀಡಿದರಾದರೂ 4-6ರಲ್ಲಿ 2ನೇ ಸೆಟ್ ಕೂಡ ಕಳೆದುಕೊಂಡರು.
ನಿರ್ಣಾಯಕ ಸೆಟ್ನಲ್ಲಿ ಆಕ್ರಮಣ ಆಟ ಪ್ರದರ್ಶನ ತೋರಿದ ಜೊಕೊವಿಕ್ 2-2 ರಲ್ಲಿದ್ದ ಸಮಬಲ ಸಾಧಿಸಿಕೊಂಡಿದ್ದ ಫಡರೆರ್ರರ ಸರ್ವೀಸ್ ಮುರಿಯುವಲ್ಲಿ ಯಶಸ್ವಿಯಾಗಿದ್ದಲ್ಲದೆ 6-2 ರಲ್ಲಿ ಸೆಟ್ಅನ್ನು ಸುಲಭವಾಗಿ ಗೆದ್ದುಕೊಂಡರು.
ಈಗಾಗಲೆ 7 ಬಾರಿ ಪೈನಲ್ ತಲುಪಿ, 7 ಬಾರಿಯೂ ಚಾಂಪಿಯನ್ ಆಗಿರುವ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಅಥವಾ ಆಸ್ಟ್ರೀಯಾದ ಡೊಮೆನಿಕ್ ಥೀಮ್ ಅವರನ್ನು ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದ್ದಾರೆ. ಶುಕ್ರವಾರ ಥೀಮ್-ಜ್ವರೆವ್ ಎರಡನೇ ಸೆಮಿಫೈನಲ್ನಲ್ಲಿ ಕಾದಾಡಲಿದ್ದಾರೆ.