ಸಿಡ್ನಿ: ಫೆಬ್ರವರಿ 8 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆಸಲು, ಆಸ್ಟ್ರೇಲಿಯಾ ಓಪನ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
2021ರಲ್ಲಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಎಟಿಪಿ ಕಪ್, ಎರಡು ಡಬ್ಲ್ಯೂಟಿಎ 500 ಈವೆಂಟ್‌ಗಳು ಮತ್ತು ಎರಡು ಎಟಿಪಿ 250 ಪಂದ್ಯಗಳನ್ನು ಆಯೋಜಿಲು ನಿರ್ಧರಿಸಿದೆ ಎಂದು ಆಸ್ಟ್ರೇಲಿಯಾ ಟೆನಿಸ್ ಭಾನುವಾರ ಮಾಹಿತಿ ನೀಡಿದೆ.
"ಹಲವಾರು ತಿಂಗಳಿಂದ ಆಸ್ಟ್ರೇಲಿಯನ್ ಓಪನ್‌ಗಾಗಿ ಯೋಜನೆಗಳನ್ನು ರೂಪಿಸಲಾಗಿದೆ. ಹೆಚ್ಚು ಹೆಚ್ಚು ಸ್ಪರ್ಧೆಯನ್ನು ಆಯೋಜಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಆಸ್ಟ್ರೇಲಿಯಾ ಓಪನ್ ಡೈರೆಕ್ಟರ್ ಕ್ರೇಗ್ ಟಿಲ್ಲೆ ತಿಳಿಸಿದ್ದಾರೆ.
ಓದಿ : ಗಂಗೂಲಿಗೆ ಕೊರೊನರಿ ಆಂಜಿಯೋಗ್ರಫಿ, ಸ್ಟಂಟ್ ಅಳವಡಿಕೆ: ಆಸ್ಪತ್ರೆಯಿಂದ ಮಾಹಿತಿ
ಎಟಿಪಿ ಕಪ್ ಫೆಬ್ರವರಿ 1 ರಿಂದ 5 ರವರೆಗೆ ನಡೆಯಲಿದ್ದು, 12 ದೇಶಗಳ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಅದೇ ಸಮಯದಲ್ಲಿ, ಜನವರಿ 31 ರಿಂದ ಫೆಬ್ರವರಿ 6 ರವರೆಗೆ ನಡೆಯಲಿರುವ ಎರಡು ಡಬ್ಲ್ಯುಟಿಎ ಪಂದ್ಯಾವಳಿಗಳು ಮತ್ತು ಎರಡು ಎಟಿಪಿ 250 ಪಂದ್ಯಾವಳಿಗಳಲ್ಲಿ 64 ಸಿಂಗಲ್ಸ್ ಆಟಗಾರರು ಮತ್ತು 32 ಡಬಲ್ಸ್ ಆಟಗಾರರು ಭಾಗವಹಿಸಲಿದ್ದಾರೆ.
ಮತ್ತೊಂದೆಡೆ ಡಬ್ಲ್ಯೂಟಿಎ 250 ಪಂದ್ಯಾವಳಿ ಫೆಬ್ರವರಿ 13 ರಿಂದ 19 ರವರೆಗೆ ನಡೆಯಲಿದ್ದು, ಫೆಬ್ರವರಿ 8 ರಿಂದ 21 ರವರೆಗೆ ಆಸ್ಟ್ರೇಲಿಯನ್ ಓಪನ್ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆಯಲಿದೆ.