ಮೆಲ್ಬೋರ್ನ್(ಆಸ್ಟ್ರೇಲಿಯಾ) : ಮೆಲ್ಬೋರ್ನ್‌ನಲ್ಲಿ ನಡೆದ ಫಿಲಿಪ್ ಐಲ್ಯಾಂಡ್ ಟ್ರೋಫಿ ಡಬ್ಲ್ಯುಟಿಎ 250 ಟೆನಿಸ್ ಪಂದ್ಯಾವಳಿಯ ಡಬಲ್ಸ್ ವಿಭಾಗದಲ್ಲಿ ಭಾರತದ ಅಂಕಿತಾ ರೈನಾ ಮತ್ತು ರಷ್ಯಾದ ಕಮಿಲ್ಲಾ ರಾಖಿಮೋವಾ ಜೋಡಿ ತಮ್ಮ ಮೊದಲನೇಯ ಡಬ್ಲ್ಯೂಟಿಎ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಜೋಡಿ ರಷ್ಯಾದ ಅನ್ನಾ ಬ್ಲಿಂಕೋವಾ ಮತ್ತು ಅನಸ್ತಾಸಿಯಾ ಪೊಟಪೋವಾ ಅವರನ್ನ ಮಣಿಸಿ ಈ ಪ್ರಶಸ್ತಿಯನ್ನ ಗೆದ್ದುಕೊಂಡಿತು.
-
India's #AnkitaRaina and her Russian partner #KamillaRakhimova on Friday won the Phillip Island Trophy #WTA 250 tennis tournament in #Melbourne. The pair beat Russia's Anna Blinkova and Anastasia Potapova 2-6, 6-4, 10-7. This is Ankita's first title on the @WTA tour. pic.twitter.com/9Y8CjUDPp5
— IANS Tweets (@ians_india) February 19, 2021 " class="align-text-top noRightClick twitterSection" data="
">India's #AnkitaRaina and her Russian partner #KamillaRakhimova on Friday won the Phillip Island Trophy #WTA 250 tennis tournament in #Melbourne. The pair beat Russia's Anna Blinkova and Anastasia Potapova 2-6, 6-4, 10-7. This is Ankita's first title on the @WTA tour. pic.twitter.com/9Y8CjUDPp5
— IANS Tweets (@ians_india) February 19, 2021India's #AnkitaRaina and her Russian partner #KamillaRakhimova on Friday won the Phillip Island Trophy #WTA 250 tennis tournament in #Melbourne. The pair beat Russia's Anna Blinkova and Anastasia Potapova 2-6, 6-4, 10-7. This is Ankita's first title on the @WTA tour. pic.twitter.com/9Y8CjUDPp5
— IANS Tweets (@ians_india) February 19, 2021
ಫೈನಲ್‌ನಲ್ಲಿ ಅಂಕಿತಾ - ಕಮಿಲ್ಲಾ ಜೋಡಿ ರಷ್ಯಾದ ಅನ್ನಾ ಬ್ಲಿಂಕೋವಾ ಮತ್ತು ಅನಸ್ತಾಸಿಯಾ ಪೊಟಪೋವಾ ಅವರನ್ನು 2-6, 6-4, 10-7 ಸೆಟ್‌ಗಳಿಂದ ಸೋಲಿಸಿ ಈ ಪ್ರಶಸ್ತಿಗೆ ಭಾಜನವಾಯ್ತು.
ಓದಿ : ಸೆಮಿಫೈನಲ್‌ನಲ್ಲಿ ಸೋತು ಕಣ್ಣೀರಿಟ್ಟ ಸೆರೆನಾ ವಿಲಿಯಮ್ಸ್: ವಿಡಿಯೋ
ಈ ಗೆಲುವಿನೊಂದಿಗೆ 28 ರ ಹರೆಯದ ಅಂಕಿತಾಗೆ ಡಬಲ್ಸ್‌ನಲ್ಲಿ ಡಬ್ಲ್ಯುಟಿಎ ಶ್ರೇಯಾಂಕದ ಅಗ್ರ 100 ರೊಳಗೆ ಪ್ರವೇಶ ಪಡೆದರು. ಸಾನಿಯಾ ಮಿರ್ಜಾ ನಂತರ ಟಾಪ್ -100 ರಲ್ಲಿ ಸ್ಥಾನ ಪಡೆದ ಎರಡನೇ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇಂಡೋ-ರಷ್ಯಾದ ಜೋಡಿ ಸೆಮಿಫೈನಲ್‌ನಲ್ಲಿ ಫ್ರಾನ್ಸಿಸ್ಕಾ ಜೋನ್ಸ್ ಮತ್ತು ನಾಡಿಯಾ ಪೊಡೊರೊಸ್ಕಾ ವಿರುದ್ಧ 4-6, 6-4, 11-9ರಿಂದ ಗೆಲವು ಕಂಡಿತು.