ETV Bharat / sports

T-20 World Cup: ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಪಾಕ್​ಗೆ ಶಾಕ್​..ಇಬ್ಬರು ಪ್ರಮುಖ ಆಟಗಾರರು ಹೊರಕ್ಕೆ..? - ಪಾಕ್ ಆಟಗಾರರು ಹೊರಕ್ಕೆ

ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಪಾಕ್​ ತಂಡಕ್ಕೆ ಆಘಾತ ಉಂಟಾಗಿದೆ. ಇಬ್ಬರು ಪ್ರಮುಖ ಆಟಗಾರರು ಜ್ವರದ ಕಾರಣದಿಂದಾಗಿ ಇಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

t20-world-cup-pakistans-rizwan-malik-down-with-flu-may-miss-semis-against-australia
ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಪಾಕ್​ಗೆ ಶಾಕ್​..ಇಬ್ಬರು ಪ್ರಮುಖ ಆಟಗಾರರು ಹೊರಕ್ಕೆ..?
author img

By

Published : Nov 11, 2021, 1:43 PM IST

Updated : Nov 11, 2021, 2:44 PM IST

ದುಬೈ: ಟಿ-20 ವಿಶ್ವಕಪ್ ಟೂರ್ನಿಯ (T20 World Cup) ಸೆಮಿಫೈನಲ್ ಪಂದ್ಯದಲ್ಲಿಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ (AUSvsPAK) ಮುಖಾಮುಖಿಯಾಗಲಿವೆ. ಈಗಾಗಲೇ ಆಡಿರುವ ಎಲ್ಲ ಪಂದ್ಯಗಳಲ್ಲೂ ಭರ್ಜರಿ ಜಯದಾಖಲಿಸಿರುವ ಪಾಕ್​ ತಂಡಕ್ಕೆ ಆಘಾತ ಉಂಟಾಗಿದೆ.

ಪಾಕ್​ನ ಇಬ್ಬರು ಪ್ರಮುಖ ಆಟಗಾರರು ಇಂದು ನಡೆಯುವ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ತಂಡದ ಬ್ಯಾಟ್ಸ್​​ಮನ್​ಗಳಾದ ಮೊಹಮ್ಮದ್ ರಿಜ್ವಾನ್ ಹಾಗೂ ಶೋಯೆಬ್​ ಮಲಿಕ್​ ಅವರಿಗೆ ಜ್ವರ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಆಡುವ 11ರ ಬಳಗದಿಂದ (Pakistan playing eleven) ಹೊರಗುಳಿಯುವ ಆತಂಕ ತಂಡಕ್ಕೆ ಎದುರಾಗಿದೆ.

ಫೈನಲ್ (ICC T20 Final) ತಲುಪಲು ನಿರ್ಣಾಯಕ ಪಂದ್ಯವಾಗಿದ್ದು, ಆದರೆ ಪ್ರಾಕ್ಟಿಸ್ ಸೆಷನ್​ನಲ್ಲಿ ಈ ಇಬ್ಬರು ಆಟಗಾರರು ಕಾಣಿಸಿಕೊಂಡಿಲ್ಲ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ. ಇದೆ ವೇಳೆ, ಇಬ್ಬರಿಗೂ ಕೋವಿಡ್ ಟೆಸ್ಟ್ (Covid Test) ನಡೆಸಲಾಗಿದ್ದು, ಇಬ್ಬರ ವರದಿಯೂ ನೆಗೆಟಿವ್ ಬಂದಿದೆ. ಆದರೆ, ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ.

ಇಬ್ಬರು ಆಟಗಾರರು ಸಹ ಪಾಕಿಸ್ತಾನ ಬ್ಯಾಟಿಂಗ್ ಕ್ರಮಾಂಕದಲ್ಲಿ ಅತ್ಯುತ್ತಮ ಆಟಗಾರರಾಗಿದ್ದಾರೆ. ಹಲವು ಬಾರಿ ತಂಡವನ್ನ ಆಪತ್ತಿನಿಂದ ಪಾರು ಮಾಡಿದವರಾಗಿದ್ದಾರೆ. ಆದರೆ, ಇಬ್ಬರು ತಂಡದ 11ರಲ್ಲಿ ಕಾಣಿಸಿಕೊಳ್ಳಲಿದ್ದಾರಾ.? ಅಥವಾ ವಿಶ್ರಾಂತಿ ನೀಡಲಾಗಿದ್ಯಾ ಎಂಬುದನ್ನು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ (Pakistan Cricket Board)​ ಇನ್ನೂ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ: ಯಶಸ್ಸಿನ ಶಿಖರದಲ್ಲಿ ಕಿವೀಸ್: ಸತತ 3 ಐಸಿಸಿ ಟೂರ್ನಿಗಳಲ್ಲಿ ಫೈನಲ್​ ತಲುಪಿದ ವಿಲಿಯಮ್ಸನ್​ ಪಡೆ

Last Updated : Nov 11, 2021, 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.