ದುಬೈ: ಐಸಿಸಿ ಟಿ-20 ವಿಶ್ವಕಪ್ನ ಗ್ರೂಪ್ 1ರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆಂಗ್ಲ ಪಡೆಯ ಸೆಮಿಫೈನಲ್ ಹಾದಿ ಮತ್ತಷ್ಟು ಸುಗಮಗೊಂಡಿದೆ. ಜೊತೆಗೆ ತಾನು ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
-
A magnificent bowling performance helps England restrict Australia to 125.
— T20 World Cup (@T20WorldCup) October 30, 2021 " class="align-text-top noRightClick twitterSection" data="
Can the Australian attack defend this total? 🤔#T20WorldCup | #AUSvENG | https://t.co/82wjRVDecK pic.twitter.com/ieq02k34l3
">A magnificent bowling performance helps England restrict Australia to 125.
— T20 World Cup (@T20WorldCup) October 30, 2021
Can the Australian attack defend this total? 🤔#T20WorldCup | #AUSvENG | https://t.co/82wjRVDecK pic.twitter.com/ieq02k34l3A magnificent bowling performance helps England restrict Australia to 125.
— T20 World Cup (@T20WorldCup) October 30, 2021
Can the Australian attack defend this total? 🤔#T20WorldCup | #AUSvENG | https://t.co/82wjRVDecK pic.twitter.com/ieq02k34l3
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 125ರನ್ ಮಾತ್ರಗಳಿಕೆ ಮಾಡಿತು. ತಂಡದ ಪರ ನಾಯಕ ಆ್ಯರೋನ್ ಫಿಂಚ್ 49 ಎಸೆತಗಳಲ್ಲಿ 4 ಬೌಂಡರಿ ಸಹಿತ 44 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆಷ್ಟನ್ ಅಗರ್ 20 ಎಸೆತಗಳಲ್ಲಿ 20, ಪ್ಯಾಟ್ ಕಮಿನ್ಸ್ 12, ಮಿಚೆಲ್ ಸ್ಟಾರ್ಕ್ 13 ರನ್ಗಳಿಸಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು.
-
England put on a show in Dubai to thump Australia to go 🔝 of Group 1 🔥#AUSvENG report 👇 #T20WorldCup https://t.co/eN7Oww0PuY
— T20 World Cup (@T20WorldCup) October 30, 2021 " class="align-text-top noRightClick twitterSection" data="
">England put on a show in Dubai to thump Australia to go 🔝 of Group 1 🔥#AUSvENG report 👇 #T20WorldCup https://t.co/eN7Oww0PuY
— T20 World Cup (@T20WorldCup) October 30, 2021England put on a show in Dubai to thump Australia to go 🔝 of Group 1 🔥#AUSvENG report 👇 #T20WorldCup https://t.co/eN7Oww0PuY
— T20 World Cup (@T20WorldCup) October 30, 2021
ಇದನ್ನೂ ಓದಿರಿ: ಶ್ರೀಲಂಕಾ ಪಾಲಿಗೆ ಕಿಲ್ಲರ್ ಆದ ಮಿಲ್ಲರ್.. ದಕ್ಷಿಣ ಆಫ್ರಿಕಾಗೆ 4 ವಿಕೆಟ್ಗಳ ರೋಚಕ ಜಯ..
ಸ್ಟಾರ್ ಬ್ಯಾಟರ್ಗಳಾದ ಡೇವಿಡ್ ವಾರ್ನರ್(1), ಸ್ಟೀವನ್ ಸ್ಮಿತ್(1), ಗ್ಲೇನ್ ಮ್ಯಾಕ್ಸ್ವೆಲ್(6), ಮಾರ್ಕಸ್ ಸ್ಟೋಯ್ನಿಸ್(0) ಮ್ಯಾಥ್ಯೂವೇಡ್(18) ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದರು.ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 23ಕ್ಕೆ 2, ಆದಿಲ್ ರಶೀದ್ 19ಕ್ಕೆ1, ಕ್ರಿಸ್ ಜೋರ್ಡನ್ 17ಕ್ಕೆ3, ಲಿಯಾಮ್ ಲಿವಿಂಗ್ಸ್ಟೋನ್ 15ಕ್ಕೆ1, ತೈಮಲ್ ಮಿಲ್ಸ್ 45ಕ್ಕೆ 2 ವಿಕೆಟ್ ಪಡೆದು ಮಿಂಚಿದರು.
126ರನ್ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ವಿಕೆಟ್ ಕೀಪರ್ ಜೋಶ್ ಬಟ್ಲರ್ ಸ್ಪೋಟಕ 71ರನ್ ನೇರವಿನಿಂದ ಕೇವಲ 11.4 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 126ರನ್ಗಳಿಕೆ ಮಾಡಿತು. ಬಟ್ಲರ್ಗೆ ಆರಂಭಿಕ ಬ್ಯಾಟರ್ ಜಾಸನ್ ರಾಯ್ 22ರನ್ ಹಾಗೂ ಬೈರ್ಸ್ಟೋ ಅಜೇಯ 16ರನ್ಗಳಿಸಿ ಉತ್ತಮ ಸಾಥ್ ನೀಡಿದರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಾನಾಡಿರುವ ಮೂರು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿ 6 ಪಾಯಿಂಟ್ಗಳಿಕೆ ಮಾಡಿದೆ. ಜೊತೆಗೆ ಉತ್ತಮ ನೆಟ್ ರನ್ರೇಟ್ ಕಾಯ್ದುಕೊಂಡಿರುವ ಕಾರಣ ಸೆಮಿಫೈನಲ್ ಹಾದಿ ಮತ್ತಷ್ಟು ಸುಲಭವಾಗಿಸಿಕೊಂಡಿದೆ. ಉಳಿದಂತೆ ಆಸ್ಟ್ರೇಲಿಯಾ ಇಂದಿನ ಪಂದ್ಯದಲ್ಲಿ ಸೋಲು ಕಾಣುವ ಮೂಲಕ 3ನೇ ಸ್ಥಾನಕ್ಕೆ ಕುಸಿತಗೊಂಡಿದೆ.
ಆಸ್ಟ್ರೇಲಿಯಾ ತಂಡದ ಪರ ಜಂಪಾ ಹಾಗೂ ಆಗರ್ ತಲಾ 1 ವಿಕೆಟ್ ಪಡೆದುಕೊಂಡರೆ, ಉಳಿದಂತೆ ಯಾವೊಬ್ಬ ಬೌಲರ್ ಹೇಳಿಕೊಳ್ಳುವಂತಹ ಬೌಲಿಂಗ್ ಪ್ರದರ್ಶನ ನೀಡಲಿಲ್ಲ.