ದುಬೈ: ಐಸಿಸಿ ಟಿ20 (ICC T20 World Cup) ಮಹಾಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಚುಟುಕು ಕ್ರಿಕೆಟ್ ಜಗತ್ತಿನ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ(ICC) 12 ಕೋಟಿ ರೂ. ನಗದು ಬಹುಮಾನ ಸಿಕ್ಕಿದೆ.
![champions Australia](https://etvbharatimages.akamaized.net/etvbharat/prod-images/13639635_thumbn.jpg)
ಐಸಿಸಿ ಟಿ20 ಫೈನಲ್ (T20 World Cup final) ಪಂದ್ಯದಲ್ಲಿ ಎದುರಾಳಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ತಂಡಕ್ಕೆ ಪ್ರಶಸ್ತಿ ಜೊತೆಗೆ 12 ಕೋಟಿ ರೂ. ನಗದು ಬಹುಮಾನ ಸಿಕ್ಕಿದ್ದು, ರನ್ನರ್ ಅಪ್ ತಂಡ ನ್ಯೂಜಿಲ್ಯಾಂಡ್ಗೆ 6 ಕೋಟಿ ರೂ. ನಗದು ನೀಡಲಾಗಿದೆ. ಉಳಿದಂತೆ ಸೆಮಿಫೈನಲ್ನಲ್ಲಿ ಸೋತು ಹೊರನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಕ್ರಮವಾಗಿ 3 ಕೋಟಿ ರೂ. ಬಹುಮಾನ ಹಣ ಪಡೆದುಕೊಂಡಿವೆ.
![New Zealand](https://etvbharatimages.akamaized.net/etvbharat/prod-images/13639635_thumbn-2.jpg)
ಐಸಿಸಿ ಟಿ20 ವಿಶ್ವಕಪ್ನ ಸೂಪರ್ 12ನಲ್ಲಿ ಭಾಗಿಯಾಗಿರುವ ಎಲ್ಲ ತಂಡಗಳಿಗೂ 52 ಲಕ್ಷ ರೂ. ನಗದು ನೀಡಲಾಗಿದ್ದು, ರೌಂಡ್ ವಿಭಾಗದ ತಂಡಗಳಿಗೆ 29.76 ಲಕ್ಷ ರೂ. ನೀಡಲಾಗಿದೆ. ಇದರ ಜೊತೆಗೆ ಸೂಪರ್ 12ನಲ್ಲಿ ಪ್ರತಿ ಪಂದ್ಯದಲ್ಲೂ ಗೆಲುವು ಸಾಧಿಸಿರುವ ತಂಡಕ್ಕೆ ಹೆಚ್ಚುವರಿಯಾಗಿ 29.76 ಲಕ್ಷ ರೂ ನೀಡಲಾಗಿದೆ.
![Team india](https://etvbharatimages.akamaized.net/etvbharat/prod-images/13639635_thum.jpg)
ಐಸಿಸಿ ಟೂರ್ನಮೆಂಟ್‌ನಲ್ಲಿ (ICC Tournament) ಭಾಗಿಯಾಗಿದ್ದ ಟೀಂ ಇಂಡಿಯಾ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಪ್ರತಿ ಗೆದ್ದ ಪಂದ್ಯದಿಂದ 29.76 ಲಕ್ಷ ರೂ. ಹಾಗೂ ಸೂಪರ್ 12 ಹಂತದಲ್ಲಿ ಭಾಗಿಯಾಗಿದ್ದಕ್ಕಾಗಿ 52 ಲಕ್ಷ ರೂ. ನಗದು ಬಹುಮಾನ ಸೇರಿ ಒಟ್ಟು 1.41 ಕೋಟಿ ರೂ. ಪಡೆದುಕೊಂಡಿದೆ.