ETV Bharat / sports

ICC T - 20 ವಿಶ್ವಕಪ್: ದಕ್ಷಿಣ ಆಫ್ರಿಕಾ ತಂಡಕ್ಕೆ 144 ರನ್​ ಟಾರ್ಗೆಟ್ ನೀಡಿದ ಕೆರಿಬಿಯನ್ ಪಡೆ

ವಿಂಡೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಲಿಂಡ್ಲ ಸಿಮನ್ಸ್ ಹಾಗೂ ಇವಿನ್ ಲೆವಿಸ್ ಉತ್ತಮ ಆರಂಭ ನೀಡಿದರು. ಆದರೆ, ಸಿಮನ್ಸ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ 35 ಬಾಲ್​ನಲ್ಲಿ ಕೇವಲ 16 ರನ್​ ಗಳಿಸಿದರು.

south-africa-need-144-runs-to-win-against-windies
ದಕ್ಷಿಣ ಆಫ್ರಿಕಾ ತಂಡಕ್ಕೆ 144 ರನ್​ ಟಾರ್ಗೆಟ್ ನೀಡಿದ ಕೆರಿಬಿಯನ್ ಪಡೆ
author img

By

Published : Oct 26, 2021, 5:23 PM IST

ದುಬೈ: ಐಸಿಸಿ ಟಿ-20 ವಿಶ್ವಕಪ್​ನ ಸೂಪರ್​-12 ಹಂತದ ಗ್ರೂಪ್​​ 1ರ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್​ ಇಂಡೀಸ್ ನಡುವಿನ ಪಂದ್ಯದಲ್ಲಿ ವಿಂಡೀಸ್ ತಂಡ ಸಾಧಾರಣ ಮೊತ್ತ ಕಲೆಹಾಕಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್​​ಗೆ ಇಳಿದ ವಿಂಡೀಸ್ ಪಡೆ ಉತ್ತಮ ಆರಂಭ ಪಡೆಯಿತ್ತಾದರೂ, ಹರಿಣ ಪಡೆಯ ಬೌಲಿಂಗ್​​ ದಾಳಿಗೆ ವಿಂಡೀಸ್​ ನೆಲಕ್ಕಚ್ಚಿತು.

ವಿಂಡೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಲಿಂಡ್ಲ ಸಿಮನ್ಸ್ ಹಾಗೂ ಇವಿನ್ ಲೆವಿಸ್ ನಿಧಾನಗತಿಯ ಆರಂಭ ನೀಡಿದರು. ಆದರೆ, ಸಿಮನ್ಸ್ ನಿಧಾನ ಗತಿಯ ಬ್ಯಾಟಿಂಗ್ ನಡೆಸಿ 35 ಬಾಲ್​ನಲ್ಲಿ ಕೇವಲ 16 ರನ್​ ಗಳಿಸಿದರು. ಆದರೆ, ಇನ್ನೋರ್ವ ಆಟಗಾರ ಲೆವಿಸ್ ಅಬ್ಬರದ ಬ್ಯಾಟಿಂಗ್ ನಡೆಸಿ 35 ಎಸೆತದಲ್ಲಿ 6 ಸಿಕ್ಸರ್, 3 ಬೌಂಡರಿ ನೆರವಿನಿಂದ 56 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಕ್ರೀಸ್​​ಗಳಿದವರು ತಂಡದ ಮೊತ್ತ ಏರಿಸುವಲ್ಲಿ ನೆರವಾದರು. ಪೂರನ್ 12 (7), ಕ್ರಿಸ್ ಗೇಲ್ 12 (12),​ ಆಂಡ್ರೆ ರಸೆಲ್ 5 (4), ಶಿಮ್ರಾನ್ ಹೆಟ್ಮಾಯರ್ 1 (2) ಪೊಲಾರ್ಡ್ 26 (20), ಹೇಡನ್ ವಾಲ್ಷ್ 0 (1) ಬ್ರಾವೊ ಔಟಾಗದೇ 8 (5) ರನ್​ಗಳಿಸಿದರು.

ನಿಗದಿತ 20 ಓವರ್ ಅಂತ್ಯಕ್ಕೆ ವಿಂಡೀಸ್ ತಂಡ 8 ವಿಕೆಟ್​ ಕಳೆದುಕೊಂಡು 143 ರನ್​ ಕಲೆಹಾಕಿದೆ.

ದಕ್ಷಿಣ ಆಫ್ರಿಕಾ ಪರ ಡ್ವೇನಿ ಪ್ರಿಟೋರಿಸ್ 3 ಕೇಶವ್ ಮಹರಾಜ್ 2, ಕಗಿಸೋ ರಬಡಾ, ಅನ್ರಿಚ್ ನೊರ್ಟ್ಜ್ ತಲಾ ಒಂದು ವಿಕೆಟ್ ಪಡೆದರು.

ಓದಿ: ಟಿ-20 ವಿಶ್ವಕಪ್‌: ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ ಹಾರ್ದಿಕ್ ಪಾಂಡ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.