ದುಬೈ: ಐಸಿಸಿ ಟಿ20 ವಿಶ್ವಕಪ್ (T20 World Cup)ನ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ (AUS vs PAK) ತಂಡ ಮುಖಾಮುಖಿಯಾಗುತ್ತಿದ್ದು, ಭರ್ಜರಿ ಫಾರ್ಮ್ನಲ್ಲಿರುವ ಪಾಕ್ ತಂಡಕ್ಕೆ ಮತ್ತಷ್ಟು ಶುಭ ಸುದ್ದಿ ದೊರೆತಿದೆ.
ಪಾಕ್ ತಂಡದ ಇಬ್ಬರು ಪ್ರಮುಖ ಬ್ಯಾಟರ್ಗಳಾದ ಮೊಹಮ್ಮದ್ ರಿಜ್ವಾನ್ ಹಾಗೂ ಶೋಯೆಬ್ ಮಲಿಕ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತಗೊಂಡಿದ್ದು, ಪಂದ್ಯ ಆಡಲು ಫಿಟ್ ಆಗಿದ್ದಾರೆಂದು ವೈದ್ಯಕೀಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ (Pakistan Cricket Board) ಬೋರ್ಡ್ನಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಪಾಕ್ ತಂಡದ ಬ್ಯಾಟರ್ಗಳಾದ ಮೊಹಮ್ಮದ್ ರಿಜ್ವಾನ್ ಹಾಗೂ ಶೋಯೆಬ್ ಮಲಿಕ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಅಭ್ಯಾಸ ಸೆಷನ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರು ಪ್ರಮುಖ ಆಟಗಾರರು ಇಂದು ನಡೆಯುವ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು.
-
Medical panel has allowed Muhammad Rizwan and Shoaib Malik to play against Australia. Officially fit 😎#PAKVSAUS #PAKvAUS #T20WorldCup #SemiFinals
— Wajahat Kazmi (@KazmiWajahat) November 11, 2021 " class="align-text-top noRightClick twitterSection" data="
">Medical panel has allowed Muhammad Rizwan and Shoaib Malik to play against Australia. Officially fit 😎#PAKVSAUS #PAKvAUS #T20WorldCup #SemiFinals
— Wajahat Kazmi (@KazmiWajahat) November 11, 2021Medical panel has allowed Muhammad Rizwan and Shoaib Malik to play against Australia. Officially fit 😎#PAKVSAUS #PAKvAUS #T20WorldCup #SemiFinals
— Wajahat Kazmi (@KazmiWajahat) November 11, 2021
ಈಗಾಗಲೇ ಇಬ್ಬರು ಬ್ಯಾಟರ್ಗಳಿಗೆ ಕೋವಿಡ್ ಟೆಸ್ಟ್ (Covid Test) ನಡೆಸಲಾಗಿದ್ದು, ವರದಿಯೂ ನೆಗೆಟಿವ್ ಬಂದಿದೆ. ಇಬ್ಬರು ಆಟಗಾರರು ಪಾಕಿಸ್ತಾನ ಬ್ಯಾಟಿಂಗ್ ಕ್ರಮಾಂಕದಲ್ಲಿ ಅತ್ಯುತ್ತಮ ಆಟಗಾರರಾಗಿದ್ದಾರೆ. ಹಲವು ಬಾರಿ ತಂಡವನ್ನ ಆಪತ್ತಿನಿಂದ ಪಾರು ಮಾಡಿದ್ದು, ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿರುವ ಕಾರಣ ತಂಡಕ್ಕೆ ಮತ್ತಷ್ಟು ಶಕ್ತಿ ಬಂದಿದೆ.
ಮೊಹಮ್ಮದ್ ರಿಜ್ವಾನ್ 2021ರಲ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 1650 ರನ್ಗಳಿಕೆ ಮಾಡಿದ್ದು, ಅಲ್ಲದೆ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ 5 ಪಂದ್ಯಗಳಿಂದ ಎರಡು ಅರ್ಧಶತಕ ಸಹಿತ 214 ರನ್ಗಳಿಸಿದ್ದಾರೆ. ಮಲಿಕ್ 3 ಇನ್ನಿಂಗ್ಸ್ ಮೂಲಕ 99 ರನ್ಗಳಿಸಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ 54 ರನ್ ಸಿಡಿಸಿದ್ದರು.