ETV Bharat / sports

ಸೆಮೀಸ್ ತಲುಪಿದ ಇಂಗ್ಲೆಂಡ್‌ಗೆ ಆಘಾತ: ಗಾಯಾಳು ಜಾಸನ್ ರಾಯ್‌ ವಿಶ್ವಕಪ್‌ನಿಂದ ಔಟ್ - ಇಂಗ್ಲೆಂಡ್​ ತಂಡ

ಜಾಸನ್​ ರಾಯ್​ ಸ್ಥಾನಕ್ಕೆ ಜೇಮ್ಸ್​ ವಿನ್ಸಿ ಬಂದರೂ ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ನಲ್ಲಿ ಸ್ಯಾಮ್​ ಬಿಲ್ಲಿಂಗ್ಸ್​ರನ್ನು ತಂಡ ಕಣಕ್ಕಿಳಿಸಲಿದೆ ಎನ್ನಲಾಗಿದೆ. ಬಟ್ಲರ್​ ಜತೆ ಆರಂಭಿಕರಾಗಿ ಡೇವಿಡ್​ ಮಲಾನ್​ ಅಥವಾ ಜಾನಿ ಬೈರ್​ಸ್ಟೋವ್​ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿ ಇದೆ.

Jason Roy ruled out of the T20 World Cup
ಗಾಯಗೊಂಡ ಜಾಸನ್​ ರಾಯ್​ ವಿಶ್ವಕಪ್​ನಿಂದ ಹೊರಕ್ಕೆ
author img

By

Published : Nov 8, 2021, 7:22 PM IST

ದುಬೈ: ಇಂಗ್ಲೆಂಡ್​ ತಂಡದ ಆರಂಭಿಕ ಆಟಗಾರ ಜಾಸನ್​ ರಾಯ್​ ಗಾಯಗೊಂಡ ಪರಿಣಾಮ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ. ಇದರಿಂದ ರಾಯ್​ ಸ್ಥಾನಕ್ಕೆ ಮೀಸಲು ಆಟಗಾರನಾಗಿದ್ದ ಜೇಮ್ಸ್​ ವಿನ್ಸಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಶಾರ್ಜಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಲೀಗ್​ನ ಕೊನೆಯ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ಜಾಸನ್​ ರಾಯ್​ ಒಂಟಿ ರನ್​ ಕದಿಯುವಾಗ ಗಾಯಗೊಂಡಿದ್ದರು. ಗಾಯ ತೀವ್ರವಾದ ಹಿನ್ನೆಲೆಯಲ್ಲಿ ಅಂಗಳದಿಂದ ಹೊರನಡೆಯಬೇಕಾಯಿತು. ಇದೀಗ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

'ಟೂರ್ನಿಯಿಂದ ಹೊರಬಿದ್ದರೂ ತಂಡವನ್ನು ಹುರಿದುಂಬಿಸುವ ಕೆಲಸ ಮಾಡುವೆ. ತಂಡ ಎಲ್ಲ ಪಂದ್ಯಗಳನ್ನು ಗೆದ್ದು ಟ್ರೋಫಿ ಎತ್ತಿಹಿಡಿಯಲಿದೆ ಎಂಬ ಆಶಾಭಾವವಿದೆ. ಗಾಯದಿಂದ ಚೇತರಿಸಿಕೊಂಡು ವೆಸ್ಟ್​ ಇಂಡೀಸ್​ ವಿರುದ್ಧ ಮುಂದಿನ ವರ್ಷ ನಡೆಯುವ ಟಿ20 ಪಂದ್ಯಾವಳಿಗೆ ಮರಳುವೆ' ಎಂದು ಜಾಸನ್​ ರಾಯ್​ ತಿಳಿಸಿದ್ದಾರೆ.

ಜಾಸನ್​ ರಾಯ್​ ಸ್ಥಾನಕ್ಕೆ ಜೇಮ್ಸ್​ ವಿನ್ಸಿ ಬಂದರೂ ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ನಲ್ಲಿ ಸ್ಯಾಮ್​ ಬಿಲ್ಲಿಂಗ್ಸ್​ರನ್ನು ತಂಡ ಕಣಕ್ಕಿಳಿಸಲಿದೆ ಎನ್ನಲಾಗಿದೆ. ಬಟ್ಲರ್​ ಜತೆ ಆರಂಭಿಕರಾಗಿ ಡೇವಿಡ್​ ಮಲಾನ್​ ಅಥವಾ ಜಾನಿ ಬೈರ್​ಸ್ಟೋವ್​ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಜೋಫ್ರಾ ಆರ್ಚರ್​, ಬೆನ್​ಸ್ಟ್ರೋಕ್​, ಸ್ಯಾಮ್​ ಕರನ್​ ಜೊತೆಗೆ ಜಾಸನ್​ ರಾಯ್​ ಗಾಯಗೊಂಡಿದ್ದು ಇಂಗ್ಲೆಂಡ್​ ತಂಡಕ್ಕೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.