ದುಬೈ: ಐಸಿಸಿ ಟಿ-20 ವಿಶ್ವಕಪ್ನ ಸೂಪರ್-12 ಗ್ರೂಪ್ 1ರಲ್ಲಿಂದು ಬಲಿಷ್ಠ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಸೆಣಸಾಟ ನಡೆಸಲಿದೆ. ಐಸಿಸಿ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವ ಕಾರಣ ಕುತೂಹಲ ಮೂಡಿಸಿದೆ.
ಅಬುಧಾಬಿ ಮೈದಾನದಲ್ಲಿ ಮಧ್ಯಾಹ್ನ 3:30ಕ್ಕೆ ಉಭಯ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ತಂಡ ಈಗಾಗಲೇ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿಕೊಂಡು ಉತ್ತಮ ಲಯದಲ್ಲಿದ್ದರೆ, ಬಾಂಗ್ಲಾ ತಾನು ಶ್ರೀಲಂಕಾ ವಿರುದ್ಧ ಆಡಿರುವ ಪಂದ್ಯದಲ್ಲಿ ಸೋಲು ಕಂಡು, ನಿರಾಸೆಗೊಳಗಾಗಿದೆ.
ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ ಬಾಂಗ್ಲಾ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಹೀಗಾಗಿ ಆರಂಭಿಕ ಬ್ಯಾಟರ್ಗಳು ರನ್ ಮಳೆ ಹರಿಸುವ ಅವಶ್ಯಕತೆ ಇದೆ. ಇಂಗ್ಲೆಂಡ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದ್ದು, ಎದುರಾಳಿ ತಂಡವನ್ನ ಸಂಕಷ್ಟಕ್ಕೆ ಸಿಲುಕಿಸುವ ಎಲ್ಲ ಯೋಜನೆ ಹಾಕಿಕೊಂಡು ಕಣಕ್ಕಿಳಿಯಲಿದೆ.
ಆಡುವ ಸಂಭವನೀಯ ಆಟಗಾರರು
ಇಂಗ್ಲೆಂಡ್: ಜೆಸನ್ ರಾಯ್, ಜೋಸ್ ಬಟ್ಲರ್(ವಿ.ಕೀ), ಡೆವಿಡ್ ಮಲನ್, ಜಾನಿ ಬೈರ್ಸ್ಟೋವ್, ಇಯಾನ್ ಮಾರ್ಗನ್(ಕ್ಯಾಪ್ಟನ್),ಲಿವಿಗ್ ಸ್ಟೋನ್,ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡನ್, ಆದಿಲ್ ರಾಶೀದ್, ಮಿಲ್ನೆ
ಬಾಂಗ್ಲಾದೇಶ: ಮೊಹಮ್ಮದ್ ನೈಮ್, ಲಿಟನ್ ದಾಸ್/ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್, ಮುಸ್ತುಫಿಜುರ್ ರೆಹಮಾನ್, ಮೊಹಮ್ಮದುಲ್ಲಾ(ಕ್ಯಾಪ್ಟನ್), ಹುಸೈನ್, ನುರುಲಾ ಹಸನ್(ವಿ.ಕೀ), ರುಬೆಲ್ ಹುಸೇನ್, ಅಹ್ಮದ್, ಮುಸ್ತುಫಿಜುರ್ ರೆಹಮಾನ್
ಸ್ಕಾಟ್ಲೆಂಡ್-ನಮೀಬಿಯಾ ಮುಖಾಮಿಖಿ
ಸೂಪರ್ 12 ಹಂತದ ಗ್ರೂಪ್ 2ರಲ್ಲಿ ಕ್ರಿಕೆಟ್ ಶಿಶುಗಳಾದ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ಮುಖಾಮುಖಿಯಾಗಲಿವೆ. ಸ್ಕಾಟ್ಲೆಂಡ್ ಈಗಾಗಲೇ ತಾನು ಆಡಿರುವ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ ಸೋಲು ಕಂಡಿದ್ದರೆ, ನಮೀಬಿಯಾ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಇರಾದೆ ಹೊಂದಿದೆ. ಟಿ-20 ವಿಶ್ವಕಪ್ನಲ್ಲಿ ಉಭಯ ತಂಡಗಳು ಎರಡು ಸಲ ಮುಖಾಮುಖಿಯಾಗಿದ್ದು, ನಮೀಬಿಯಾ ಗೆಲುವಿನ ನಗೆ ಬೀರಿದೆ.