ETV Bharat / sports

T20 world cup: ಅಫ್ಘಾನ್ vs ನಮೀಬಿಯಾ ಫೈಟ್​... 2ನೇ ಗೆಲುವಿನ ತವಕದಲ್ಲಿ ಉಭಯ ತಂಡ

ವಿಶ್ವಕಪ್​ ಮಹಾಟೂರ್ನಿಯಲ್ಲಿಂದು ಅಬುಧಾಬಿ ಮೈದಾನದಲ್ಲಿ ನಮೀಬಿಯಾ-ಅಫ್ಘಾನಿಸ್ತಾನ ತಂಡ ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳು ಎರಡನೇ ಪಂದ್ಯದಲ್ಲಿ ಗೆಲ್ಲುವ ಇರಾದೆ ಇಟ್ಟುಕೊಂಡಿವೆ.

Afghanistan vs Namibia
Afghanistan vs Namibia
author img

By

Published : Oct 31, 2021, 3:10 AM IST

ಅಬುಧಾಬಿ: ಐಸಿಸಿ ಟಿ-20 ವಿಶ್ವಕಪ್​ನ ಸೂಪರ್​​-12ರ ಗ್ರೂಪ್​ 2ರ ಪಂದ್ಯದಲ್ಲಿಂದು ಅಫ್ಘಾನಿಸ್ತಾನ ತಂಡ ನಮೀಬಿಯಾ ಸವಾಲು ಎದುರಿಸಲಿದೆ. ಈಗಾಗಲೇ ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಉಭಯ ತಂಡಗಳು ಇಂದಿನ ಮ್ಯಾಚ್​​ನಲ್ಲಿ ಗೆದ್ದು ಮತ್ತಷ್ಟು ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ತವಕದಲ್ಲಿವೆ.

ಮಧ್ಯಾಹ್ನ 3:30ಕ್ಕೆ ಅಬುಧಾಬಿ ಮೈದಾನದಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಸ್ಕಾಟ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದ ಅಫ್ಘಾನಿಸ್ತಾನ ತಂಡ ನಂತರ ಪಾಕಿಸ್ತಾನದ ವಿರುದ್ಧ ಹೋರಾಡಿ ಸೋಲು ಕಂಡಿದೆ. ಆದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ, ಜಯದ ಲಯಕ್ಕೆ ಮರಳುವ ಇರಾದೆ ಇಟ್ಟುಕೊಂಡಿದೆ.

ಇನ್ನು ಇದೇ ಮೊದಲ ಬಾರಿ ವಿಶ್ವಕಪ್​ ಟೂರ್ನಿಯಲ್ಲಿ ಆಡುತ್ತಿರುವ ನಮೀಬಿಯಾ ತಂಡ ಆಲ್​ರೌಂಡ್ ಆಟದ ಮೂಲಕ ಸ್ಕಾಟ್ಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ, ಸತತ ಎರಡನೇ ಜಯದ ತವಕದಲ್ಲಿದೆ. ಅಫ್ಘಾನಿಸ್ತಾನದಲ್ಲಿ ರಾಶೀದ್ ಖಾನ್​, ಮುಜೀಬ್​ ಉರ್ ರಹಮಾನ್​, ಮೊಹಮ್ಮದ್​ ನಬಿ ಸೇರಿದಂತೆ ಸ್ಪಿನ್ನರ್​​ಗಳಿದ್ದು, ಹಜರುತುಲ್ಲಾ ಝಜೈ, ಮೊಹಮ್ಮದ್​​ ಸಹ್ಜಾದ್​, ಮೊಹಮ್ಮದ್ ನಬಿ, ರಹಮದುಲ್ಲಾ ಗುರ್ಬಾಜ್ ಸೇರಿದಂತೆ ಅನೇಕ ಸ್ಫೋಟಕ ಬ್ಯಾಟರ್​ಗಳಿದ್ದಾರೆ.

ಇದನ್ನೂ ಓದಿರಿ: ವಿರಾಟ್​​ vs ವಿಲಿಯಮ್ಸನ್​: ಇಂದಿನ ಪಂದ್ಯ ಗೆಲ್ಲುವ ತಂಡಕ್ಕೆ ಸೆಮಿಫೈನಲ್​ ಹಾದಿ ಸುಗಮ

ನಮೀಬಿಯಾ ಕೂಡ ಆಲ್​ರೌಂಡ್​ ತಂಡವಾಗಿದ್ದು, ತಂಡದಲ್ಲಿ ವಿಲಿಯಮ್ಸ್​​, ಮೈಕಲ್​ ವಾನ್​​ ಗ್ರಿನ್, ಡೇವಿಡ್​ ವೈಸ್​​ ಹಾಗೂ ಗ್ರಿಲ್ಯಾಂಡ್​​ ಸ್ಫೋಟಕ ಬ್ಯಾಟಿಂಗ್ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಬೌಲಿಂಗ್​ನಲ್ಲಿ ರೂಬೆನ್​ ಟ್ರಂಪೆಲ್​​ಮನ್​, ಜಾನ್​ ಫ್ರಿಲಿಂಕ್​​, ಡೇವಿಡ್​ ವೈಸ್​​ನಂತಹ ಬೌಲರ್​ಗಳಿದ್ದಾರೆ.

ಆಡುವ 11ರ ಬಳಗ ಇಂತಿದೆ

ನಮೀಬಿಯಾ: ವಿಲಿಯಮ್ಸ್​, ಜೇನ್ ಗ್ರೀನ್​, ಗ್ರಿಲ್ಯಾಂಡ್​​, ಎರಾಸ್ಮಸ್​​(ಕ್ಯಾಪ್ಟನ್​) ಡೇವಿಡ್​ ವೈಸ್​, ಮೈಕಲ್ ವ್ಯಾನ್​, ಸ್ಮಿಟ್​, ಜಾನ್​ ಫ್ರಿಲಿಂಕ್​​, ಫ್ರಾನ್ಸ್​, ಜಾನ್​ ನಿಕೋಲ್​​, ರೊಬೆನ್​ ಟ್ರಂಪೆಲ್​ಮನ್​, ಬರ್ನಾರ್ಡ್​​​

ಅಫ್ಘಾನಿಸ್ತಾನ: ಹಜರತುಲ್ಲಾ ಝಜೈ, ಮೊಹಮ್ಮದ್​ ಶಹ್ಜಾದ್​, ರಹಮನುಲ್ಲಾ ಗುರ್ಬಾಜ್​, ಮೊಹಮ್ಮದ್ ನಬಿ(ಕ್ಯಾಪ್ಟನ್​) ಅಸ್ಗರ್​ ಅಫ್ಘಾನ್​, ಗುಲ್ಬದಿನ್​ ನೈಬ್​, ರಾಶೀದ್ ಖಾನ್​,ಕರೀಂ ಜನತ್​/ಫರಿದ್​ ಅಹ್ಮದ್​,ಮುಜೀಬ್ ಉರ್ ರಹಮಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.