ETV Bharat / sports

T20 World Cup: ಫೈನಲ್​ಗೆ ಕ್ರೀಡಾಂಗಣದ ಶೇ100ರಷ್ಟು ಆಸನ ಭರ್ತಿ - Dubai international stadium

ಕ್ರೀಡಾಂಗಣದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಮೂಲಕ, ಈ ಬಾರಿಯ ಟಿ20 ಫೈನಲ್ ಪಂದ್ಯಕ್ಕೆ ಸ್ಟೇಡಿಯಂನಲ್ಲಿರುವ ಎಲ್ಲಾ 25 ಸಾವಿರ ಆಸನಗಳನ್ನು ಭರ್ತಿಗೊಳಿಸಲು ನಿರ್ಧರಿಸಲಾಗಿದೆ.

icc-t20-wc-100-per-cent-attendance-approved-for-final-in-dubai
T20 World Cup: ಫೈನಲ್​ಗೆ ಕ್ರೀಡಾಂಗಣದ ಶೇಕಡಾ ನೂರರಷ್ಟು ಆಸನ ಭರ್ತಿ
author img

By

Published : Nov 9, 2021, 8:27 PM IST

ದುಬೈ: ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಸ್ಟೇಡಿಯಂನಲ್ಲಿರುವ ಎಲ್ಲಾ 25 ಸಾವಿರ ಆಸನಗಳನ್ನು ಭರ್ತಿಗೊಳಿಸಲು ನಿರ್ಧಾರ ಮಾಡಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್​ನ ಸರ್ಕಾರಿ ಪ್ರಾಧಿಕಾರಗಳು ಅನುಮತಿ ನೀಡಿವೆ.

ಕ್ರೀಡಾಂಗಣದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತದೆ. ಈಗಲೂ ಐಸಿಸಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿದೆ. ಫೈನಲ್ ಪಂದ್ಯವನ್ನು ಯಶಸ್ವಿಯಾಗಿ ನಡೆಸಿಕೊಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದ ಬಿಬಿಸಿಐ ಮೂಲಗಳು ಎಎನ್​ಐಗೆ ಮಾಹಿತಿ ನೀಡಿವೆ.

ಟೀಂ ಇಂಡಿಯಾ ಸೆಮಿಫೈನಲ್ ತಲುಪಲು ವಿಫಲವಾದರೂ, ತಮ್ಮ ಅವಧಿಯಲ್ಲಿ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ವಿಶ್ವದ ಕ್ರಿಕೆಟ್ ತಂಡಗಳಲ್ಲಿ ಟೀಂ ಇಂಡಿಯಾ ಕೂಡಾ ಒಂದು ಎಂದು ಟೀಂ ಇಂಡಿಯಾದ ಕೋಚ್ ಆಗಿದ್ದ ರವಿಶಾಸ್ತ್ರಿ ಹೇಳಿದ್ದರು.

ಅಷ್ಟೇ ಅಲ್ಲದೇ ಏಳು ವರ್ಷಗಳಿಂದ ನಾನು ತಂಡದ ಭಾಗವಾಗಿದ್ದು, ನಾವು ಈ ವಿಶ್ವಕಪ್ ಅನ್ನು ಗೆಲ್ಲದೇ ಇರಬಹುದು, ಆದರೆ ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಬಲಿಷ್ಟರಾಗುತ್ತೇವೆ ಎಂದು ರವಿಶಾಸ್ತ್ರಿ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗ ಸದ್ಯಕ್ಕೆ ನವೆಂಬರ್ 14ರಂದು ರಾತ್ರಿ 7.30ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಟಿ20 ನಾಯಕನ ಪಟ್ಟಕ್ಕೆ ರೋಹಿತ್​ ಶರ್ಮಾ ಸೂಕ್ತ ಅಭ್ಯರ್ಥಿ: ಗವಾಸ್ಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.