ETV Bharat / sports

ನಾನು ನನ್ನ ತಾಯ್ನಾಡಿನಲ್ಲಿ ನಿವೃತ್ತಿ ಘೋಷಿಸುತ್ತೇನೆ: ಕ್ರಿಸ್ ​ಗೇಲ್​ - ಕ್ರಿಸ್​ ಗೇಲ್​ ನಿವೃತ್ತಿ ಘೋಷಣೆ

ಜಮೈಕಾದಲ್ಲಿ ತಮ್ಮ ತವರು ಅಭಿಮಾನಿಗಳ ಮುಂದೆ (farewell game at his hometown Jamaica) ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡುವ ಮೂಲಕ ನಿವೃತ್ತಿ ಘೋಷಿಸುತ್ತೇನೆ ಎಂಬ ಬಯಕೆಯನ್ನು ಯುನಿವರ್ಸ್​ ಬಾಸ್​ ಕ್ರಿಸ್​ ಗೇಲ್​ (Chris Gayle) ವ್ಯಕ್ತಪಡಿಸಿದ್ದಾರೆ.

Gayle was a force across all three formats, farewell game at his hometown Jamaica, ನಾನು ನನ್ನ ತಾಯ್ನಾಡಿನಲ್ಲಿ ನಿವೃತ್ತಿ ಘೋಷಿಸುತ್ತೇನೆ, ನಾನು ನನ್ನ ತಾಯ್ನಾಡಿನಲ್ಲಿ ನಿವೃತ್ತಿ ಘೋಷಿಸುತ್ತೇನೆ ಎಂದ ಕ್ರಿಸ್​ಗೇಲ್​, not officially announced Gayle retirement,  ಕ್ರಿಸ್​ ಗೇಲ್​ ಅಧಿಕೃತವಾಗಿ ವಿದಾಯ ಘೋಷಿಸಿಲ್ಲ, Chris Gayle retirement,  Chris Gayle retirement news,  ಕ್ರಿಸ್​ ಗೇಲ್​ ನಿವೃತ್ತಿ ಘೋಷಣೆ,  ಕ್ರಿಸ್​ ಗೇಲ್​ ನಿವೃತ್ತಿ ಘೋಷಣೆ ಸುದ್ದಿ
ನಾನು ನನ್ನ ತಾಯ್ನಾಡಿನಲ್ಲಿ ನಿವೃತ್ತಿ ಘೋಷಿಸುತ್ತೇನೆ
author img

By

Published : Nov 19, 2021, 11:19 AM IST

Updated : Nov 19, 2021, 11:32 AM IST

ಹೊಸದಿಲ್ಲಿ: 2021ರ ಟಿ 20 ವಿಶ್ವಕಪ್‌ನಲ್ಲಿ ಆಡಿದ್ದ ಕ್ರಿಸ್​ ಗೇಲ್ (Chris Gayle), ಜಮೈಕಾದ ತವರು ಅಭಿಮಾನಿಗಳ ಮುಂದೆ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್​​​ ಬಳಿಕ ವೆಸ್ಟ್ ಇಂಡೀಸ್​ ತಂಡದ ಆಲ್​ರೌಂಡರ್ ಡ್ವೇನ್ ಬ್ರಾವೋ (Dwayne Bravo) ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡ ಬ್ರಾವೋ ಗೌರವಪೂರ್ವಕ ವಿದಾಯ ಪಡೆದರು.

ಅನುಮಾನಕ್ಕೆ ತೆರೆ

ಇದೇ ಪಂದ್ಯದ ಮೂಲಕ ಕ್ರಿಸ್ ಗೇಲ್ (Chris Gayle) ಕೂಡ ವಿದಾಯ ಹೇಳುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಏಕೆಂದರೆ ಗೇಲ್ ಪಂದ್ಯ ಆರಂಭಕ್ಕೂ ಮುನ್ನ ತಮ್ಮ ನಿವೃತ್ತಿಯನ್ನು ಘೋಷಿಸಿರಲಿಲ್ಲ. ಔಟ್ ಆಗಿ ಪೆವಿಲಿಯನ್ ಕಡೆ ಹಿಂತಿರುಗುತ್ತಿದ್ದ ವೇಳೆ ಗೇಲ್ ಪ್ರೇಕ್ಷಕರತ್ತ ಬ್ಯಾಟ್ ಬೀಸುತ್ತಾ ಹೆಜ್ಜೆ ಹಾಕಿದ್ದರು. ಇತ್ತ ಪ್ರೇಕ್ಷಕರು ಕೂಡ ಎದ್ದು ನಿಂತು ಗೇಲ್​ಗೆ ಗೌರವ ಸೂಚಿಸಿದರು. ಹೀಗಾಗಿ ಗೇಲ್​ ಸಹ ವಿದಾಯ ಹೇಳಿದ್ರಾ (not officially announced Gayle retirement) ಎಂಬ ಸಣ್ಣ ಅನುಮಾನ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿತ್ತು. ಆದ್ರೆ ಇದಕ್ಕೆಲ್ಲ ತೆರೆ ಬಿದ್ದಿದೆ.

ವೆಸ್ಟ್ ಇಂಡೀಸ್‌ನ ಕೊನೆಯ ಪಂದ್ಯದ ನಂತರ ಆರಂಭಿಕ ಆಟಗಾರ ಗೇಲ್​ ತಮ್ಮ ತವರು ನೆಲ ಜಮೈಕಾದಲ್ಲಿ ವಿದಾಯ ಪಂದ್ಯವನ್ನು (farewell game at his hometown Jamaica) ಆಡಲು ಬಯಸುತ್ತಿದ್ದಾರೆ. ಈ ಕಾರಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಇನ್ನೂ ಒಂದು ವಿಶ್ವಕಪ್ ಆಡಲು ಇಷ್ಟಪಡುತ್ತೇನೆ. ಆದರೆ, ಅವರು ನನಗೆ ಅವಕಾಶ ನೀಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಯಾವುದೇ ನಿವೃತ್ತಿ ಘೋಷಿಸಲಿಲ್ಲ. ಆದರೆ, ಅವರು ಜಮೈಕಾದಲ್ಲಿ ನನಗೆ ಒಂದು ಪಂದ್ಯವನ್ನಾಡಲು ಅವಕಾಶ ಕಲ್ಪಿಸಿದ್ದಾರೆ. ನನ್ನ ಮನೆಯ ಜನರ (ಜಮೈಕಾ) ಮುಂದೆ ನಾನು ವಿದಾಯ ಹೇಳಲು ಇಚ್ಛಿಸುತ್ತೇನೆ ಎಂದು ಐಸಿಸಿಯ ಪಂದ್ಯದ ನಂತರದ ಫೇಸ್‌ಬುಕ್ ಲೈವ್ ಶೋನಲ್ಲಿ ಗೇಲ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಪರ 79 ಟಿ-20 ಅಂತಾರಾಷ್ಟ್ರೀಯ ಪಂದ್ಯವಾಡಿರುವ ಯೂನಿವರ್ಸ್​ ಬಾಸ್​ 1899 ರನ್ ಕಲೆಹಾಕಿದ್ದಾರೆ. ಇದರಲ್ಲಿ 2 ಶತಕ ಹಾಗೂ 14 ಅರ್ಧಶತಕಗಳು ಮೂಡಿಬಂದಿವೆ. 103 ಟೆಸ್​​ ಪಂದ್ಯಗಳನ್ನಾಡಿರುವ ಅವರು ಒಟ್ಟು 7,215 ರನ್​ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ತ್ರಿಶತಕ, ಮೂರು ದ್ವಿಶತಕ ಮತ್ತು 15 ಶತಕ ಒಳಗೊಂಡಿವೆ. 301 ಏಕದಿನ ಪಂದ್ಯಗಳಲ್ಲಿ 10,480 ರನ್​ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ದ್ವಿಶತಕ ಮತ್ತು 25 ಶತಕ ಸೇರಿವೆ.

Last Updated : Nov 19, 2021, 11:32 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.