ಶಾರ್ಜಾ(ದುಬೈ) : ವಿಶ್ವಕಪ್ ಟೂರ್ನಿಯ ಗ್ರೂಪ್ ಎ ಸೂಪರ್ 12 ಹಂತದ ಇಂದಿನ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ ನಿಗದಿತ ಓವರ್ ಮುಕ್ತಾಯಕ್ಕೆ 142 ರನ್ಗಳಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬಾಂಗ್ಲಾ ತಂಡ ವಿಂಡೀಸ್ ಪಡೆಯನ್ನ ಕಟ್ಟಿ ಹಾಕಿತು. ಆರಂಭಿಕರಾದ ಕ್ರಿಸ್ ಗೇಲ್ ಹಾಗೂ ಲೆವಿಸ್ ಬಹುಬೇಗ ವಿಕೆಟ್ ಒಪ್ಪಿಸಿದರೆ. ಬಳಿಕ ಕ್ರೀಸ್ಗಿಳಿದ ರೋಸ್ಟನ್ ಚೇಸ್ 46 ಎಸೆತದಲ್ಲಿ 39ರನ್ ಗಳಿಸಿ ತಂಡಕ್ಕೆ ನೆರವಾದರು.
ಇವರಾದ ಬಳಿಕ ಪೂರನ್ ಅಬ್ಬರ ಬ್ಯಾಟಿಂಗ್ ನಡೆಸಿ 22 ಬಾಲ್ನಲ್ಲಿ 1 ಬೌಂಡರಿ 4 ಸಿಕ್ಸರ್ ನೆರವಿನಿಂದ 40ರನ್ ಕಲೆಹಾಕಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ವಿಂಡೀಸ್ ಪಡೆ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು 142 ರನ್ಗಳಿಸಿತು.
ಬಾಂಗ್ಲಾ ಪರವಾಗಿ ಮೆಹದಿ ಹಸನ್, ಮುಸ್ತಫಿಜುರ್, ಶೋರಿಫುಲ್ ಇಸ್ಲಾಮ್ ತಲಾ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ: ಕಿವೀಸ್ ವಿರುದ್ಧ ಹಾರ್ದಿಕ್, ಭುವಿ ಕೈಬಿಟ್ಟು ಈ ಇಬ್ಬರಿಗೆ ಅವಕಾಶ ನೀಡಿ ಎಂದ ಗವಾಸ್ಕರ್