ದುಬೈ: ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಭರ್ಜರಿ ಆಟದಿಂದ ಮಿಂಚಿ 'ಪ್ಲೇಯರ್ ಆಫ್ ಟೂರ್ನಮೆಂಟ್' (Player of the tournament) ಆಗಿ ಹೊರಹೊಮ್ಮಿದ್ದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಬಗ್ಗೆ ಎರಡು ತಿಂಗಳ ಹಿಂದೆನೇ ಭವಿಷ್ಯ (predicted) ನುಡಿದಿದ್ದರು.
ಆಕ್ರಮಣಕಾರಿ ಎಡಗೈ ಆಟಗಾರ ತನ್ನ ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ನಿಂದ (sunrisers hyderabad) ಅನಧಿಕೃತವಾಗಿ ಹೊರ ನಡೆದ ನಂತರ ವಿಶ್ವಕಪ್ ಪಂದ್ಯಾವಳಿಯಲ್ಲಿ 289 ರನ್ ಗಳಿಸಿ ಮಿಂಚಿದರು. ಫೈನಲ್‌ನಲ್ಲಿ ವಾರ್ನರ್ 38 ಬಾಲ್ಗೆ 53 ಗಳಿಸಿ 'ಪ್ಲೇಯರ್ ಆಫ್ ಟೂರ್ನಮೆಂಟ್' (Player of the tournament) ಪ್ರಶಸ್ತಿಗೆ ಭಾಜನರಾದರು. ಮಿಚೆಲ್ ಮಾರ್ಷ್ 50 ಎಸೆತಗಳಲ್ಲಿ 77 ರನ್ ಗಳಿಸಿ ಅಜೇಯರಾಗಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಸೇರಿಸಿ 'ಪ್ಲೇಯರ್ ಆಫ್ ದಿ ಮ್ಯಾಚ್' (Player of the Match) ಪ್ರಶಸ್ತಿ ಪಡೆದರು.
ಒಂದೆರಡು ವಾರಗಳ ಹಿಂದೆ ವಾರ್ನರ್ ವಿರುದ್ಧವಾಗಿ ಜನರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅವರ ಬಗ್ಗೆ ಬರೆದಿದ್ದಾರೆಂದು ನನಗೆ ನಂಬಲಾಗುತ್ತಿಲ್ಲ. ಆ ಬರಹಗಳು ವಾರ್ನರ್ ಮನಸ್ಸಿಗೆ ಗಾಯಗೊಳಿಸುವಂತಿತ್ತು (poking the bear) ಎಂದು ಪಂದ್ಯದ ನಂತರದ ಮಾಧ್ಯಮಗಳೊಂದಿಗೆ ನಾಯಕ ಆರೋನ್ ಫಿಂಚ್ ಹೇಳಿದರು.
ಓದಿ: Zero to Hero: 'ಬಹುಪಾಲು ಆಸ್ಟ್ರೇಲಿಯಾ ಜನರು ನನ್ನನ್ನು ಧ್ವೇಷಿಸುತ್ತಾರೆ' ಎಂದಿದ್ದ ಮಾರ್ಷ್ ಇಂದು ಆ ದೇಶಕ್ಕೆ ಹೀರೋ
ಎರಡು ತಿಂಗಳ ಹಿಂದೆ ಒಂದು ದಿನ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ನನಗೆ ಕರೆ ಮಾಡಿ ಡೇವಿಡ್ ವಾರ್ನರ್ ಫಾರ್ಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ನಾನು ವಾರ್ನರ್ ಫಾರ್ಮ್ ಬಗ್ಗೆ ಯೋಚಿಸಬೇಡಿ ಎಂದು ಅವರಿಗೆ ಧೈರ್ಯ ಹೇಳಿದೆ ಎಂದು ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ (Australia captain Aaron Finch) ವಾರ್ನರ್ (Warner) ಬಗ್ಗೆ ಭವಿಷ್ಯ ನುಡಿದಿದ್ದರು. ಈಗ ಆ ಭವಿಷ್ಯ ನಿಜವಾಗಿದೆ.
ಇದು ನಮಗೆ ದೊಡ್ಡ ಗೆಲುವು. ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ಟಿ-20 ವಿಶ್ವಕಪ್ಗೆ (T20I world cup) ಮುತ್ತಿಕ್ಕಿದೆ. ತಂಡದ ಆಟದ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ ಎಂದು ಫಿಂಚ್ ಹೇಳಿದರು.
ನನಗೆ ಝಂಪಾ 'ಪ್ಲೇಯರ್ ಆಫ್ ಟೂರ್ನಮೆಂಟ್'(Player of the tournament). ಅವರು ಆಟವನ್ನು ನಿಯಂತ್ರಿಸಿದರು. ಪ್ರಮುಖರ ವಿಕೆಟ್ಗಳನ್ನು ಪಡೆದು ಝಂಪಾ ಸೂಪರ್ ಆಟಗಾರರಾದರು. ಮಿಚೆಲ್ ಮಾರ್ಷ್ (Mitchell Marsh) ಆಟ ಅದ್ಭುತವಾಗಿತ್ತು. ಆರಂಭದಿಂದಲೇ ಒತ್ತಡ ತೆಗೆದುಕೊಂಡು ತಂಡವನ್ನು ಮುನ್ನಡೆಸುತ್ತಿದ್ದರು. ವೇಡ್ ಗಾಯದ ಅಡಿ ಬಂದರೂ ಸಹ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದರು. ಅವರು ಸೆಮಿ - ಫೈನಲ್‌ನಲ್ಲಿ ಮಾರ್ಕಸ್ ಸ್ಟೊಯಿನಿಸ್ ಜೊತೆಗೆ ಬಂದು ಮಿಂಚಿದರು ಎಂದು ಫಿಂಚ್ ತಂಡದ ಬಗ್ಗೆ ಹೇಳಿದರು. ಹೀಗೆ ತಂಡದ ಗೆಲುವಿನ ಬಗ್ಗೆ ಆರೋನ್ ಫಿಂಚ್ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಓದಿ: T20I world cup: ನ್ಯೂಜಿಲ್ಯಾಂಡ್ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
ಡೇವಿಡ್ ವಾರ್ನರ್(David Warner) ಮತ್ತು ಮಿಚೆಲ್ ಮಾರ್ಷ್(Mitchell Marsh) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ(Australia) ತಂಡ ನ್ಯೂಜಿಲ್ಯಾಂಡ್(New Zealand) ವಿರುದ್ಧ 8 ವಿಕೆಟ್ಗಳ ಸುಲಭ ಜಯ ಸಾಧಿಸಿ ಚೊಚ್ಚಲ ಟಿ20 ವಿಶ್ವಕಪ್(T20I world cup) ಎತ್ತಿ ಹಿಡಿಯಿತು.