ETV Bharat / sports

ಪ್ರತಿಭಟನೆ ವಾಪಸ್ ಪಡೆದಿಲ್ಲ, FIR ಹಿಂತೆಗೆದುಕೊಂಡಿಲ್ಲ: ಕುಸ್ತಿಪಟುಗಳ ಸ್ಪಷ್ಟನೆ - ನ್ಯಾಯಕ್ಕಾಗಿ ಹೋರಾಟದಲ್ಲಿ ನಾವೇನೂ ಹಿಂದೆ ಸರಿದಿಲ್ಲ

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಪೈಕಿ ಭಜರಂಗ್​ ಪೂನಿಯಾ ಮತ್ತು ಸಾಕ್ಷಿ ಮಲಿಕ್​ ಇಂದು ರೈಲ್ವೆಯಲ್ಲಿ ಉದ್ಯೋಗಕ್ಕೆ ಮರಳಿದರು. ಆದರೆ ಇದೇ ವೇಳೆ ಪ್ರತಿಭಟನೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.

wrestler sakshi malik and Bajrang Punia join railway job
ಮತ್ತೆ ರೈಲ್ವೆ ಉದ್ಯೋಗಕ್ಕೆ ಸೇರಿದ ಸಾಕ್ಷಿ ಮಲ್ಲಿಕ್​, ಬಜರಂಗ್​ ಪೋನಿಯಾ
author img

By

Published : Jun 5, 2023, 4:34 PM IST

ನವದೆಹಲಿ: ಬಿಜೆಪಿ ಸಂಸದ ಹಾಗೂ ಕುಸ್ತಿ ಸಂಸ್ಥೆಯ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಬಂಧನಕ್ಕಾಗಿ ಹೋರಾಟ ನಡೆಸುತ್ತಿರುವ ಸಾಕ್ಷಿ ಮಲಿಕ್‌ ಹಾಗು ಇತರೆ ಕುಸ್ತಿಪಟುಗಳು ಚಳವಳಿಯಿಂದ ಹಿಂದೆ ಸರಿದಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಇಂದು ಸುದ್ದಿ ಬಿತ್ತರವಾಗಿತ್ತು. ಇದನ್ನು ತಳ್ಳಿ ಹಾಕಿರುವ ಕುಸ್ತಿಪಟುಗಳು ಈ ಸುದ್ದಿ ಸುಳ್ಳು ಎಂದು ತಿಳಿಸಿದ್ದಾರೆ. ಅಲ್ಲದೇ, ನಾವು ಪ್ರತಿಭಟನೆ ವಾಪಸ್ ಪಡೆದಿಲ್ಲ, FIR ಕೂಡಾ ಹಿಂತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದು, ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಕ್ಷಿ ಮಲ್ಲಿಕ್​ ಮತ್ತು ಬಜರಂಗ್​ ಪೂನಿಯಾ ಟ್ವೀಟ್​ ಮಾಡಿ ಸ್ಪಷ್ಟಪಡಿಸಿದ್ದಾರೆ.

  • ये खबर बिलकुल ग़लत है। इंसाफ़ की लड़ाई में ना हम में से कोई पीछे हटा है, ना हटेगा। सत्याग्रह के साथ साथ रेलवे में अपनी ज़िम्मेदारी को साथ निभा रही हूँ। इंसाफ़ मिलने तक हमारी लड़ाई जारी है। कृपया कोई ग़लत खबर ना चलाई जाए। pic.twitter.com/FWYhnqlinC

    — Sakshee Malikkh (@SakshiMalik) June 5, 2023 " class="align-text-top noRightClick twitterSection" data=" ">

ಸಾಕ್ಷಿ ಮಲಿಕ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಮಾಧ್ಯಮವೊಂದು ಪ್ರತಿಭಟನೆಯಿಂದ ಕುಸ್ತಿಪಟುಗಳು ಹಿಂದೆ ಸರಿದಿದ್ದಾರೆ ಎಂಬ ಸುದ್ದಿಯ ಫೋಟೋ ಹಂಚಿಕೊಂಡು, "ಈ ಸುದ್ದಿ ಸಂಪೂರ್ಣ ಸುಳ್ಳು. ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ನಾವು ಹಿಂದೆ ಸರಿದಿಲ್ಲ, ಹಿಂದೆ ಸರಿಯುವುದೂ ಇಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೆಯಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿಗಳನ್ನು ಹಬ್ಬಿಸಬೇಡಿ" ಎಂದು ಮನವಿ ಮಾಡಿದ್ದಾರೆ.

  • आंदोलन वापस लेने की खबरें कोरी अफ़वाह हैं. ये खबरें हमें नुक़सान पहुँचाने के लिए फैलाई जा रही हैं.

    हम न पीछे हटे हैं और न ही हमने आंदोलन वापस लिया है. महिला पहलवानों की एफ़आईआर उठाने की खबर भी झूठी है.

    इंसाफ़ मिलने तक लड़ाई जारी रहेगी 🙏🏼 #WrestlerProtest pic.twitter.com/utShj583VZ

    — Bajrang Punia 🇮🇳 (@BajrangPunia) June 5, 2023 " class="align-text-top noRightClick twitterSection" data=" ">

ಬಜರಂಗ್ ಪುನಿಯಾ ಟ್ವೀಟ್​ನಲ್ಲಿ, "ಚಳವಳಿ ಹಿಂಪಡೆಯುವ ಸುದ್ದಿ ಕೇವಲ ವದಂತಿ. ನಮಗೆ ಹಾನಿ ಮಾಡಲು ಈ ಸುದ್ದಿ ಹಬ್ಬಿಸಲಾಗುತ್ತಿದೆ. ನಾವು ಹಿಂದೆ ಸರಿದಿಲ್ಲ ಅಥವಾ ಚಳವಳಿಯನ್ನು ಹಿಂತೆಗೆದುಕೊಂಡಿಲ್ಲ. ಮಹಿಳಾ ಕುಸ್ತಿಪಟುಗಳು ಎಫ್‌ಐಆರ್‌ ವಾಪಸ್ ಪಡೆದಿದ್ದಾರೆ ಎಂಬ ಸುದ್ದಿಯೂ ಸುಳ್ಳು. ನ್ಯಾಯ ಸಿಗುವವರೆಗೂ ಹೋರಾಟ ನಡೆಯುತ್ತದೆ" ಎಂದು ತಿಳಿಸಿದ್ದಾರೆ.

ಉದ್ಯೋಗಕ್ಕೆ ಮರಳಿದ ಕುಸ್ತಿಪಟುಗಳು: ಪ್ರತಿಭಟನಾನಿರತ ಕುಸ್ತಿಪಟುಗಳು ಹೋರಾಟವನ್ನು ಕೈ ಬಿಟ್ಟಿಲ್ಲ. ಆದರೆ ಅವರು ಮತ್ತೆ ಉದ್ಯೋಗಕ್ಕೆ ಮರಳಿದ್ದಾರೆ. ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಅವರು ಭಾರತೀಯ ರೈಲ್ವೇಯಲ್ಲಿ ಒಎಸ್​ಡಿ (Officer on Special Duty-OSD-Sports) ಆಗಿ ತಮ್ಮ ಹುದ್ದೆಗಳಿಗೆ ಮರುಸೇರ್ಪಡೆಯಾಗಿದ್ದಾರೆ. ಈ ಹಿಂದೆ ಇವರಿಗೆ ಸ್ಪೋರ್ಟ್​ ಕೋಟಾದಲ್ಲಿ ಈ ಉದ್ಯೋಗ ನೀಡಲಾಗಿತ್ತು.

39 ದಿನಗಳಿಂದ ನಿರಂತರ ಪ್ರತಿಭಟನೆ: ಲೈಂಗಿಕ ಕಿರುಕುಳ ಆರೋಪ ಹೊತ್ತ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕುಸ್ತಿಪಟುಗಳು ದೆಹಲಿಯ ಜಂತರ್​ ಮಂತರ್​ನಲ್ಲಿ ಏಪ್ರಿಲ್‌ ಕೊನೆ ವಾರದಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಮೇ 28 ರಂದು ನೂತನ ಸಂಸತ್​ ಭವನದ ಉದ್ಘಾಟನೆಯ ದಿನ ಪ್ರತಿಭಟನಾ ಮೆರವಣಿಗೆ ಮಾಡಲು ಮುಂದಾದಾಗ ಕುಸ್ತಿಪಟುಗಳು ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿ ಜಂತರ್​ ಮಂತರ್ ಪ್ರದೇಶವನ್ನು ತೆರವುಗೊಳಿಸಿದ್ದರು.

ಪದಕಗಳನ್ನು ಗಂಗಾನದಿಗೆ ಎಸೆಯಲು ಮುಂದಾಗಿದ್ದರು: ಕುಸ್ತಿಪಟುಗಳು ಬಂಧನದ ನಂತರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶಗೊಂಡು ತಮ್ಮ ಪದಕಗಳನ್ನು ಗಂಗೆಗೆ ಅರ್ಪಿಸುವುದಾಗಿ ಹರಿದ್ವಾರಕ್ಕೆ ತೆರಳಿದ್ದರು. ಆದರೆ ರೈತ ಮುಖಂಡ ರಾಕೇಶ್​ ಟಿಕಾಯಾತ್​ ಕ್ರೀಡಾಪಟುಗಳ ಮನವೊಲಿಸಿ ಸಿಂಗ್ ಬಂಧನಕ್ಕೆ ಕೇಂದ್ರ ಸರ್ಕಾರಕ್ಕೆ 7 ದಿನಗಳ ಗಡುವು ಕೊಟ್ಟರು. ಈ ಗಡುವನ್ನು ಸರ್ಕಾರ ಮೀರಿದಲ್ಲಿ ರೈತ ಸಂಘಟನೆಯ ಮೂಲಕ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಗಂಗಾನದಿಗೆ ಪದಕ ಸಮರ್ಪಿಸಲು ಹರಿದ್ವಾರ ತಲುಪಿದ ಕುಸ್ತಿಪಟುಗಳು: ನಿರ್ಧಾರ ಬದಲಿಸಿ ಸರ್ಕಾರಕ್ಕೆ ಐದು ದಿನಗಳ ಗಡುವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.