ETV Bharat / sports

WWE ಕುಸ್ತಿಪಟು ದಿ ಗ್ರೇಟ್ ಖಲಿ ತಾಯಿ ನಿಧನ - ಡಬ್ಲ್ಯೂಡಬ್ಲ್ಯೂಇ ಸ್ಟಾರ್​ ದಿ ಗ್ರೇಟ್ ಖಲಿ

ಕಳೆದ ಎರಡು ವರ್ಷಗಳಿಂದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಬಳಿಕ ಕಳೆದ ವಾರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಲೂಧಿಯಾನಾದ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗುತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಭಾನುವಾರ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ..

ಕುಸ್ತಿಪಟು ದಿ ಗ್ರೇಟ್ ಖಲಿ ತಾಯಿ ನಿಧನ
ಕುಸ್ತಿಪಟು ದಿ ಗ್ರೇಟ್ ಖಲಿ ತಾಯಿ ನಿಧನ
author img

By

Published : Jun 21, 2021, 4:16 PM IST

ಲೂಧಿಯಾನ(ಪಂಜಾಬ್): WWE ಕುಸ್ತಿಪಟು ದಿ ಗ್ರೇಟ್ ಖಲಿ ಎಂದೇ ಖ್ಯಾತರಾಗಿರುವ ದಲೀಪ್ ಸಿಂಗ್ ರಾಣಾ ಅವರ ತಾಯಿ ತಾಂಡಿ ದೇವಿ ಭಾನುವಾರ ಬಹು ಅಂಗಾಂಗ ವೈಫಲ್ಯದಿಂದ ಲೂದಿಯಾನದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ದಲೀಪ್ ಸಿಂಗ್ ತಾಯಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಬಳಿಕ ಕಳೆದ ವಾರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಲೂಧಿಯಾನಾದ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗುತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಭಾನುವಾರ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.

ಪಂಜಾಬ್ ಪೊಲೀಸ್​ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ದಲೀಪ್ ಸಿಂಗ್ ರಾಣಾ ಅಲಿಯಾಸ್ ಖಲಿ 2000ರಲ್ಲಿ ವೃತ್ತಿಪರ ಕುಸ್ತಿಗೆ ಪದಾರ್ಪಣೆ ಮಾಡಿದ್ದರು. ನಂತರ ಪ್ರಸಿದ್ಧ WWEನಲ್ಲಿ ಅವಕಾಶ ಪಡೆದ ಅವರು 2007ರಲ್ಲಿ ಚಾಂಪಿಯನ್ ಆಗಿದ್ದರು.

ಕುಸ್ತಿಯಲ್ಲದೆ ಸಿನಿಮಾ ರಂಗದಲ್ಲೂ ಮಿಂಚಿರುವ ಖಲಿ 4 ಹಾಲಿವುಡ್ ಮತ್ತು 2 ಬಾಲಿವುಡ್ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. 2021ರ WWE ಹಾಲ್ ಆಫ್ ಫೇಮ್‍ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನು ಓದಿ:ಚಿಕ್ಕಬಳ್ಳಾಪುರಕ್ಕೆ ಬಂದ 'ದಿ ಗ್ರೇಟ್​ ಖಲಿ'... ನೆಚ್ಚಿನ ಕುಸ್ತಿಪಟು ನೋಡಲು ಅಭಿಮಾನಿಗಳ ನೂಕುನುಗ್ಗಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.