ವಾರ್ಸಾ (ಪೋಲೆಂಡ್): ಪೋಲೆಂಡ್‌ನ ಟೆನಿಸ್ ಸೆನ್ಸೇಷನ್ ಮತ್ತು ವಿಶ್ವದ ಅಗ್ರ ಮಹಿಳಾ ಆಟಗಾರ್ತಿ ಇಗಾ ಸ್ವಿಯೆಟೆಕ್ ಭಾನುವಾರ ನಡೆದ ವಾರ್ಸಾ ಓಪನ್ ಪಂದ್ಯಾವಳಿಯಲ್ಲಿ ಲಾರಾ ಸೀಗೆಮಂಡ್ ವಿರುದ್ಧ 6-0, 6-1 ಅಂತರದ ಜಯದೊಂದಿಗೆ ಈ ವರ್ಷದ 4ನೇ ಪ್ರಶಸ್ತಿಯನ್ನು ಗೆದ್ದುಕೊಂಡರು. ಫ್ರೆಂಚ್ ಓಪನ್ ಚಾಂಪಿಯನ್ ಇಗಾ ಈ ವರ್ಷ ದೋಹಾ ಮತ್ತು ಸ್ಟಟ್‌ಗಾರ್ಟ್‌ನಲ್ಲಿಯೂ ಪ್ರಶಸ್ತಿ ಜಯಿಸಿದ್ದಾರೆ.
ತವರಿನಲ್ಲಿ ಉತ್ತಮ ಲಯ ಪ್ರದರ್ಶಿಸಿದ ಇಗಾ ಪಂದ್ಯಾವಳಿಯ ಅವಧಿಯಲ್ಲಿ ಒಂದು ಸೆಟ್ ಅನ್ನೂ ಕಳೆದುಕೊಳ್ಳಲಿಲ್ಲ. ಪಂದ್ಯದುದ್ದಕ್ಕೂ ಸ್ವಿಯೆಟೆಕ್‌ನ ಅಸಾಧಾರಣ ಪ್ರಾಬಲ್ಯ ಸಾಧಿಸಿದ್ದು ಈವೆಂಟ್ ಹೈಲೈಟ್ ಆಗಿತ್ತು. ವಾರ್ಸಾ ಓಪನ್‌ನಲ್ಲಿ ಸ್ವಿಯೆಟೆಕ್‌ನ ವಿಜಯ ಆಕೆಯ ವೃತ್ತಿಜೀವನದ 15ನೇ ಪ್ರಶಸ್ತಿಯಾಗಿದೆ. ಹಾಗೆಯೇ ಇಗಾಗೆ ಲಾರಾ ಸೀಗೆಮಂಡ್ ವಿರುದ್ಧ 5ನೇ ಗೆಲುವು ಇದಾಗಿದೆ.
-
💛Nie ma to jak w domu...🏆
— Iga Świątek (@iga_swiatek) July 30, 2023 " class="align-text-top noRightClick twitterSection" data="
💛Home, sweet home...🏆 pic.twitter.com/PfPejppTRg
">💛Nie ma to jak w domu...🏆
— Iga Świątek (@iga_swiatek) July 30, 2023
💛Home, sweet home...🏆 pic.twitter.com/PfPejppTRg💛Nie ma to jak w domu...🏆
— Iga Świątek (@iga_swiatek) July 30, 2023
💛Home, sweet home...🏆 pic.twitter.com/PfPejppTRg
"ನಾನು ನನ್ನ ತಂಡ ಮತ್ತು ನನ್ನ ಕುಟುಂಬಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ವಾರ್ಸಾದಲ್ಲಿ ಆಡುವುದು ಸುಲಭವಲ್ಲ. ನಿನ್ನೆ ಸಂಜೆಯವರೆಗೆ ಮೈದಾನದಲ್ಲಿ ದಣಿದು ಇಂದು ಮತ್ತೆ ಆಡುವುದು ಚಾಲೆಂಜ್ ಆಗಿತ್ತು. ಆದರೆ ಈ ನೆಲದಲ್ಲಿ ಅದು ತುಂಬಾ ಸರಳ ಎನಿಸಿತು. ಗೆಲುವು ತುಂಬಾ ಸಂತೋಷ ನೀಡಿದೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಬಯಸುತ್ತೇನೆ. ಎಲ್ಲರಿಗೂ ಧನ್ಯವಾದಗಳು" ಎಂದು ಪಂದ್ಯದ ನಂತರ ಇಗಾ ಮನದಾಳ ಹೇಳಿಕೊಂಡಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ನಂತರ ದಿನದ ಬಿಡುವಿಲ್ಲದೇ ಭಾನುವಾರ ನಡೆದ ಫೈನಲ್ನಲ್ಲಿ 68 ನಿಮಿಷಗಳ ಕಾಲ ತಮ್ಮ ಪ್ರಾಭಲ್ಯದ ಆಟವನ್ನು ಇಗಾ ವಾರ್ಸಾದ ಮೈದಾನದಲ್ಲಿ ತೋರಿದರು. ಜರ್ಮನ್ ಎದುರಾಳಿ ಲಾರಾ ಸೀಗೆಮಂಡ್ ಅವರಿಗೆ ಒಂದು ಅಂಕ ಮಾತ್ರ ಬಿಟ್ಟುಕೊಟ್ಟ ಇಗಾ ಜಯಭೇರಿ ಬಾರಿಸಿದರು.
ಶನಿವಾರ ಸೆಮಿಫೈನಲ್ನಲ್ಲಿ ಯಾನಿನಾ ವಿಕ್‌ಮೇಯರ್ ವಿರುದ್ಧ ಇಗಾ ಕಠಿಣ ಹೋರಾಟ ಎದುರಿಸಿದರು. ಸ್ವಿಯೆಟೆಕ್ 6-1 ಮತ್ತು 5-5 ರಿಂದ ಮುನ್ನಡೆಯಲ್ಲಿದ್ದಾಗ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಪುನರಾರಂಭದ ನಂತರ, ಟೈ-ಬ್ರೇಕ್‌ನಲ್ಲಿ ಮೂರು ಮ್ಯಾಚ್ ಪಾಯಿಂಟ್ ಮತ್ತು ಮತ್ತೊಂದು ಸುತ್ತಿನ ಜಯ ಸಾಧಿಸಿ ಫೈನಲ್ಗೆ ಪ್ರವೇಶಿಸಿದ್ದರು.
2017ರ ಪೋರ್ಷೆ ಟೆನಿಸ್ ಗ್ರ್ಯಾಂಡ್ ಪ್ರಿಕ್ಸ್ ಸೀಗೆಮಂಡ್ ಅವರ ಕೊನೆಯ ಪ್ರದರ್ಶನ ಎಂದು ಪರಿಗಣಿಸಲಾಗಿತ್ತು. ನಂತರ ಅವರು ಈ ವರ್ಷದ ವಾರ್ಸಾ ಓಪನ್‌ನಲ್ಲಿ ಮತ್ತೆ ಭಾಗವಹಿಸಿದ್ದರು. ಎರಡನೇ ಸುತ್ತಿನಲ್ಲಿ 4ನೇ ಶ್ರೇಯಾಂಕದ ಝು ಲಿನ್ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು. ಬ್ಯಾಕ್-ಟು-ಬ್ಯಾಕ್ ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್ ವಿಜಯಗಳ ಪಡೆದ ಸೀಗೆಮಂಡ್ ಫೈನಲ್ನಲ್ಲಿ ಇಗಾ ವಿರುದ್ಧ ಸೋಲುಂಡರು.
ಇದನ್ನೂ ಓದಿ: FIFA Women's World Cup: ಫಿಲಿಪ್ಪೀನ್ಸ್ ವಿರುದ್ಧ ನಾರ್ವೆಗೆ ಭರ್ಜರಿ ಗೆಲುವು; ಟೂರ್ನಿಯಿಂದ ಹೊರಬಿದ್ದ ನ್ಯೂಜಿಲೆಂಡ್