ಟೋಕಿಯೋ: ಬಿಡಬ್ಲೂಎಫ್(ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಕಂಚಿನ ಪದಕ ಗೆದ್ದಿದ್ದಾರೆ. 76 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ ಚಿರಾಗ್-ಸಾತ್ವಿಕ್ ಸಾಯಿರಾಜ್ ಜೋಡಿ ಮಲೇಷ್ಯಾದ ಆರೋನ್ ಚಿಯಾ ಹಾಗೂ ಸೊಹ್ ವೂಯಿ ಯಿಕ್ ವಿರುದ್ಧ 22-20, 18-21, 16-21 ಗೇಮ್ ಗಳಿಂದ ಸೋಲುಂಡಿದೆ.
ಈ ತಿಂಗಳ ಆರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸೋತಿದ್ದ ಸಾತ್ವಿಕ್ ಮತ್ತು ಚಿರಾಗ್‌ಗೆ ಇದು ಮಲೇಷ್ಯಾದ ಜೋಡಿ ವಿರುದ್ಧ ಸತತ 6ನೇ ಸೋಲು.
ಬಿಡಬ್ಲೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಡಬಲ್ಸ್ ಈವೆಂಟ್‌ನ ಸೆಮಿಫೈನಲ್‌ಗೆ ತಲುಪಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಚಿರಾಗ್ ಹಾಗೂ ಸಾತ್ವಿಕ್ ರಾಜ್ ಶುಕ್ರವಾರ ಭಾರತಕ್ಕೆ ಪದಕದ ಭರವಸೆ ನೀಡಿತ್ತು. ಡಬಲ್ಸ್‌ನಲ್ಲಿ ಭಾರತಕ್ಕೆ ಇದು ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪದಕವಾಗಿದೆ. 2011ರಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಕಂಚಿನ ಪದಕ ಜಯಿಸಿದ್ದರು.
ಇದನ್ನೂ ಓದಿ: ವಿಶ್ವ ಚಾಂಪಿಯನ್‌ಶಿಪ್.. ಇತಿಹಾಸ ನಿರ್ಮಿಸಿದ ಚಿರಾಗ್, ಸಾತ್ವಿಕ್ ಜೋಡಿ