ETV Bharat / sports

World Athletics Championships 2023: 200 ಮೀ ಓಟದಲ್ಲಿ ಜಮೈಕಾದ ಶೆರಿಕಾ ಜಾಕ್ಸನ್​​ಗೆ​ ಚಿನ್ನ.. - ETV Bharath Kannada news

ಜಮೈಕಾದ ಶೆರಿಕಾ ಜಾಕ್ಸನ್​ 200 ಮೀಟರ್​ ಓಟವನ್ನು 21.41 ಸೆಕೆಂಡ್​ನಲ್ಲಿ ಪೂರೈಸಿ ತಮ್ಮ ದಾಖಲೆಯನ್ನೇ ಮುರಿದಿದ್ದಾರೆ.

World Athletics Championships 2023
World Athletics Championships 2023
author img

By ETV Bharat Karnataka Team

Published : Aug 26, 2023, 1:40 PM IST

ಬುಡಾಪೆಸ್ಟ್ (ಹಂಗೇರಿ): ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2023ರ 7ನೇ ದಿನ ಜಮೈಕಾದ ಶೆರಿಕಾ ಜಾಕ್ಸನ್ 200 ಮೀಟರ್​ ಓಟದಲ್ಲಿ ದಾಖಲೆ ಬರೆದಿದ್ದಾರೆ. 21.41 ಸೆಕೆಂಡ್​ನಲ್ಲಿ 200 ಮೀಟರ್​ ಓಟವನ್ನು ಪೂರೈಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 1988ರ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಫ್ಲಾರೆನ್ಸ್ ಗ್ರಿಫಿತ್-ಜಾಯ್ನರ್ ಅವರು 21.34 ಸೆಕೆಂಡ್​ನಲ್ಲಿ 200 ಮೀಟರ್​ ಓಟವನ್ನು ಪೂರ್ಣಗೊಳಿಸಿ ಅತಿ ವೇಗದ ದಾಖಲೆ ಬರೆದಿದ್ದರು. ಶೆರಿಕಾ ಜಾಕ್ಸನ್ .07 ಸೆಕೆಂಡ್​ಗಳ ಮೊದಲ ವಿಜಯದ ಗೆರೆ ದಾಟಿದ್ದರೆ 35 ವರ್ಷದ ಹಿಂದಿನ ಈ ದಾಖಲೆ ಬ್ರೇಕ್​ ಆಗುತ್ತಿತ್ತು.

ಅಮೆರಿಕಾದ ಗ್ಯಾಬಿ ಥಾಮಸ್ 21.81 ಸೆಕೆಂಡ್​ಗೆ ಓಡಿ ಬೆಳ್ಳಿ ಪದಕ ಗೆದ್ದುಕೊಂಡರು. ಸೋಮವಾರದ 100 ಮೀಟರ್ ಓಟದಲ್ಲಿ ಪ್ರಶಸ್ತಿ ಗೆದ್ದಿದ್ದ ಶಾಕಾರಿ ರಿಚರ್ಡ್‌ಸನ್ 21.92 ಸೆಕೆಂಡ್​ನಿಂದ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ನೋಹ್ ಲೈಲ್ಸ್ ಪುರುಷರ 200 ಮೀ ಓಟದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು . 100 ಮೀ ಓಟದ ನಂತರ ಬುಡಾಪೆಸ್ಟ್‌ನಲ್ಲಿ ತಮ್ಮ ಎರಡನೇ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದರು. 26ರ ಹರೆಯದ ನೋಹ್ ಲೈಲ್ಸ್ 19.52 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಎರಿಯಾನ್ ನೈಟನ್ 19.75 ಸೆಕೆಂಡುಗಳಲ್ಲಿ ಎರಡನೇ ಸ್ಥಾನ ಪಡೆದರೆ, ಲೆಟ್ಸೈಲ್ ಟೆಬೊಗೊ ಅವರು 19.81 ಸೆಕೆಂಡುಗಳಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಜಾವೆಲಿನ್​ ಎಸೆತ: ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಜಪಾನ್‌ನ ಹರುಕಾ ಕಿಟಾಗುಚಿ 66.73 ಮೀ ದೂರ ಎಸೆದು ವಿಶ್ವ ಪ್ರಶಸ್ತಿ ಗೆದ್ದರು. ಫ್ಲೋರ್ ಡೆನಿಸ್ ರುಯಿಜ್ ಹರ್ಟಾಡೊ 65.47 ಮೀ ಎಸೆದು ಎರಡನೇ ಸ್ಥಾನ ಪಡೆದರು. ಆಸ್ಟ್ರೇಲಿಯಾದ ಮೆಕೆಂಜಿ ಲಿಟಲ್ 63.38 ಮೀ ಎಸೆದು ಕಂಚಿಗೆ ತೃಪ್ತಿ ಪಟ್ಟರು.

ಟ್ರಿಪಲ್ ಜಂಪ್‌: ವೆನೆಜುವೆಲಾದ ಯುಲಿಮರ್ ರೋಜಾಸ್ ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ 15.08 ಮೀಟರ್‌ಗಳ ಅದ್ಭುತ ಜಿಗಿತದೊಂದಿಗೆ ಚಿನ್ನ ಗೆದ್ದರು. ಮರೀನಾ ಬೆಖ್-ರೊಮಾನ್ಚುಕ್ 15:00 ಮೀ ಜಿಗಿತದೊಂದಿಗೆ ಎರಡನೇ ಸ್ಥಾನ ಪಡೆದರು. ಲೆಯಾನಿಸ್ ಪೆರೆಜ್ ಹೆರ್ನಾಂಡೆಜ್ 14.96 ಮೀ ಜಿಗಿತದೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಪುರುಷರ ಜಾವೆಲಿನ್​ ಎಸೆತದಲ್ಲಿ ಭಾರತದ ಮೂವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಅರ್ಹತೆ ಪಡೆದುಕೊಂಡಿದ್ದಾರೆ. ನಿನ್ನೆ ನಡೆದ ಅರ್ಹತಾ ಸುತ್ತಿನಲ್ಲಿ ನೀರಜ್​ ಚೋಪ್ರಾ 88.77 ಮೀ ದೂರಕ್ಕೆಸೆದು ಪ್ಯಾರಿಸ್​ ಒಲಂಪಿಕ್ಸ್​ ಮತ್ತು ವಿಶ್ವ ಅಥ್ಲೆಟಿಕ್ಸ್​ಗೆ ಅರ್ಹತೆ ಪಡೆದು ಕೊಂಡರು. ಡಿಪಿ ಮನು ಮತ್ತು ಕಿಶೋರ್ ಜೆನಾ ಕೂಡ ಉತ್ತಮ ಪ್ರದರ್ಶನವನ್ನು ನೀಡಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಅರ್ಹತೆ ಸಾಧಿಸಿದ್ದಾರೆ.

ಇದನ್ನೂ ಓದಿ: ಒಂದೇ ಎಸೆತ 2 ಅರ್ಹತೆ! ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ನೀರಜ್​ ಚೋಪ್ರಾ ಕಮಾಲ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.