ವಿಂಬಲ್ಡನ್: ದಾಖಲೆಯ 24ನೇ ಗ್ರ್ಯಾಂಡ್ಸ್ಲಾಂ ಮೇಲೆ ಕಣ್ಣಿಟ್ಟಿರುವ ನೊವಾಕ್ ಜೊಕೊವಿಕ್ ಮತ್ತು ಫ್ರೆಂಚ್ ಓಪನ್ ಚಾಂಪಿಯನ್ ಹಾಗು ವಿಶ್ವದ ನಂಬರ್ 1 ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರು ಪ್ರತಿಷ್ಟಿತ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ನೇರ ಸೆಟ್ಗಳಿಂದ ಗೆದ್ದು ಶುಭಾರಂಭ ಮಾಡಿದ್ದಾರೆ. ಇಬ್ಬರ ಸೊಗಸಾದ ಆಟಕ್ಕೆ ಮಳೆ ಅಡ್ಡಿಪಡಿಸಿದ್ದು, ಕೊಂಚ ನಿರಾಸೆ ತಂದಿತು.
-
A flawless start for the world No.1 👌@iga_swiatek powers into the second round moving past Lin Zhu 6-1, 6-3 👏#Wimbledon pic.twitter.com/xu6EFOmtRW
— Wimbledon (@Wimbledon) July 3, 2023 " class="align-text-top noRightClick twitterSection" data="
">A flawless start for the world No.1 👌@iga_swiatek powers into the second round moving past Lin Zhu 6-1, 6-3 👏#Wimbledon pic.twitter.com/xu6EFOmtRW
— Wimbledon (@Wimbledon) July 3, 2023A flawless start for the world No.1 👌@iga_swiatek powers into the second round moving past Lin Zhu 6-1, 6-3 👏#Wimbledon pic.twitter.com/xu6EFOmtRW
— Wimbledon (@Wimbledon) July 3, 2023
ಮಳೆ ಅಡ್ಡಿ ಮಧ್ಯೆಯೇ ವಿಶ್ವದ 2ನೇ ಶ್ರೇಯಾಂಕಿತ ಸರ್ಬಿಯಾದ ಜೊಕೊವಿಕ್ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮ್ಯಾರಥಾನ್ನಲ್ಲಿ ಪೆಡ್ರೊ ಕ್ಯಾಚಿನ್ರನ್ನು 6-3, 6-3, 7-6 (4) ಸೆಟ್ಗಳಿಂದ ಸೋಲಿಸಿದರು. ಮೊದಲೆರಡು ಸೆಟ್ಗಳನ್ನು ನಿರಾಯಾಸವಾಗಿ ಗೆದ್ದ ನೊವಾಕ್ಗೆ ಮೂರನೇ ಸೆಟ್ನಲ್ಲಿ ಸವಾಲು ಎದುರಾಯಿತು. ಸುಲಭವಾಗಿ ಸೋಲೊಪ್ಪದೆ ತಿರುಗೇಟು ನೀಡಿದ ಪೆಡ್ರೊ ಮೂರನೇ ಸೆಟ್ನಲ್ಲಿ 6-6ರಲ್ಲಿ ಸಮಬಲ ಸಾಧಿಸಿದರು. ಇದರಿಂದ ಟೈ ಬ್ರೇಕರ್ ನಡೆಸಲಾಯಿತು.
-
Up and running.@DjokerNole records his 29th consecutive match win at #Wimbledon, beating Pedro Cachin 6-3, 6-3, 7-6(4) pic.twitter.com/W78EBnwtzi
— Wimbledon (@Wimbledon) July 3, 2023 " class="align-text-top noRightClick twitterSection" data="
">Up and running.@DjokerNole records his 29th consecutive match win at #Wimbledon, beating Pedro Cachin 6-3, 6-3, 7-6(4) pic.twitter.com/W78EBnwtzi
— Wimbledon (@Wimbledon) July 3, 2023Up and running.@DjokerNole records his 29th consecutive match win at #Wimbledon, beating Pedro Cachin 6-3, 6-3, 7-6(4) pic.twitter.com/W78EBnwtzi
— Wimbledon (@Wimbledon) July 3, 2023
ವಿಂಬಲ್ಡನ್ನಲ್ಲಿ ಸತತ 28 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ನೊವಾಕ್ ಟೈ ಬ್ರೇಕರ್ ಅನ್ನು 7-4 ರಲ್ಲಿ ಗೆಲ್ಲುವ ಮೂಲಕ ಗೆಲುವಿನ ಸಂಖ್ಯೆಯನ್ನು 29ಕ್ಕೆ ಹೆಚ್ಚಿಸಿಕೊಂಡರು. ಸಾರ್ವಕಾಲಿಕ ಪ್ರಶಸ್ತಿಗಳ ದಾಖಲೆ ಸೃಷ್ಟಿಸುವ ಹಾದಿಯಲ್ಲಿರುವ ಸರ್ಬಿಯಾ ಆಟಗಾರನ ಮುಂದೆ ಪೆಡ್ರೊ ಆಟ ಸಾಕಾಗಲಿಲ್ಲ. ಈಗಾಗಲೇ ಆಸ್ಟ್ರೇಲಿಯನ್, ಫ್ರೆಂಚ್ ಗ್ರ್ಯಾಂಡ್ಸ್ಲಾಂ ಗೆದ್ದಿರುವ ಜೊಕೊ ವಿಂಬಲ್ಡನ್ ಗೆದ್ದು ಈ ಋತುವಿನ ಎಲ್ಲ ಪ್ರಶಸ್ತಿ ಜಯಿಸುವ ಗುರಿ ಹೊಂದಿದ್ದಾರೆ.
-
Moving on to the second round.@ElinaSvitolina beats five-time champion Venus Williams, 6-4, 6-3#Wimbledon pic.twitter.com/0JXnOuFxFX
— Wimbledon (@Wimbledon) July 3, 2023 " class="align-text-top noRightClick twitterSection" data="
">Moving on to the second round.@ElinaSvitolina beats five-time champion Venus Williams, 6-4, 6-3#Wimbledon pic.twitter.com/0JXnOuFxFX
— Wimbledon (@Wimbledon) July 3, 2023Moving on to the second round.@ElinaSvitolina beats five-time champion Venus Williams, 6-4, 6-3#Wimbledon pic.twitter.com/0JXnOuFxFX
— Wimbledon (@Wimbledon) July 3, 2023
ಇಗಾ ಚಾಂಪಿಯನ್ ಆಟ: ಮಹಿಳಾ ವಿಭಾಗದಲ್ಲಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿಶ್ವ ನಂಬರ್ 1 ಆಟಗಾರ್ತಿ ಇಗಾ ಸ್ವಿಯಾಟೆಕ್ ಮೊದಲ ಸವಾಲಿನಲ್ಲಿ ಚೀನಾದ ಝ ಲಿನ್ ವಿರುದ್ಧ 6-1, 6-3 ನೇರ ಸೆಟ್ಗಳಿಂದ ಸುಲಭ ಜಯ ಸಾಧಿಸಿದರು. ಫ್ರೆಂಚ್ ಓಪನ್ ಗೆದ್ದು ಟೆನಿಸ್ ಲೋಕದ ಹೊಸ ಕಣ್ಮಣಿಯಾಗಿರುವ ಇಗಾ ಮೊದಲ ವಿಂಬಲ್ಡನ್ ಗೆಲ್ಲುವ ಮಹಾದಾಸೆಯಲ್ಲಿದ್ದಾರೆ. ಇವರೆಗೂ ಅವರು ಟೂರ್ನಿಯಲ್ಲಿ 4ನೇ ಹಂತ ತಲುಪಿಲ್ಲ.
ಇದಲ್ಲದೇ, 4ನೇ ಶ್ರೇಯಾಂಕಿತೆ ಅಮೆರಿಕದ ಜೆಸ್ಸಿಕಾ ಪೆಗುಲಾ, 2019ರ ಸೆಮಿಫೈನಲಿಸ್ಟ್ ಬಾರ್ಬೊರಾ ಸ್ಟ್ರೈಕೋವಾ, ಪುರುಷರ ವಿಭಾಗದಲ್ಲಿ ಏಳನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ಗೆಲುವು ಸಾಧಿಸುವ ಮೂಲಕ 2ನೇ ಸುತ್ತಿಗೇರಿದರು.
-
Stunning Sofia 🌟
— Wimbledon (@Wimbledon) July 3, 2023 " class="align-text-top noRightClick twitterSection" data="
Qualifier @SofiaKenin prevails in a high-quality battle against fellow American Coco Gauff, 6-4, 4-6, 6-2 🙌 #Wimbledon pic.twitter.com/vgewwv2RSl
">Stunning Sofia 🌟
— Wimbledon (@Wimbledon) July 3, 2023
Qualifier @SofiaKenin prevails in a high-quality battle against fellow American Coco Gauff, 6-4, 4-6, 6-2 🙌 #Wimbledon pic.twitter.com/vgewwv2RSlStunning Sofia 🌟
— Wimbledon (@Wimbledon) July 3, 2023
Qualifier @SofiaKenin prevails in a high-quality battle against fellow American Coco Gauff, 6-4, 4-6, 6-2 🙌 #Wimbledon pic.twitter.com/vgewwv2RSl
ವೀನಸ್ಗೆ ಸೋಲು: ಟೆನಿಸ್ನಿಂದ ಕೆಲ ಕಾಲ ದೂರ ಉಳಿದಿದ್ದ 7 ಗ್ರ್ಯಾಂಡ್ಸ್ಲಾಂಗಳ ಒಡತಿ ವೀನಸ್ ವಿಲಿಯಮ್ಸ್ನ ಉಕ್ರೇನ್ನ ಎಲಿನಾ ಸ್ವಿಟೋಲಿನಾ ಅವರ ವಿರುದ್ಧ 6-4, 6-3 ರಲ್ಲಿ ಸೋಲು ಕಂಡರು. ಅಮೆರಿಕದ ಇನ್ನೊಬ್ಬ ಆಟಗಾರ್ತಿ ಕೊಕೊ ಗೌಫ್ ಅವರು 2020ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅಮೆರಿಕದ ಸೋಫಿಯಾ ಕೆನಿನ್ ಅವರ ವಿರುದ್ಧ 6-4, 4-6, 6-2 ಸೆಟ್ಗಳಿಂದ ಪರಾಜಿತರಾದರು.
ಇದನ್ನೂ ಓದಿ: Wimbledon: ಇಂದಿನಿಂದ ವಿಂಬಲ್ಡನ್; 24ನೇ ಪ್ರಶಸ್ತಿ ಮೇಲೆ ನೊವಾಕ್ ಜೊಕೊವಿಕ್ ಕಣ್ಣು