ಲಂಡನ್: ಇಂದಿನಿಂದ ವಿಂಬಲ್ಡನ್ ಗ್ರ್ಯಾಂಡ್ಸ್ಲಾಮ್ ಆರಂಭವಾಗಲಿದೆ. ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಅತ್ಯಧಿಕ 23 ಗ್ರ್ಯಾಂಡ್ಸ್ಲಾಮ್ ಜಯಿಸಿದ ಸಾಧನೆ ಮಾಡಿರುವ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ದಾಖಲೆಯ 24ನೇ ಮತ್ತು 8ನೇ ವಿಂಬಲ್ಡನ್ ಪ್ರಶಸ್ತಿ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.
ವಿಶ್ವದ ನಂಬರ್ 1 ಟೆನಿಸ್ ಪ್ಲೇಯರ್ ನೊವಾಕ್ ತುಂಬು ಆತ್ಮವಿಶ್ವಾಸಲ್ಲಿದ್ದು, ಮೊದಲ ಸುತ್ತಿನಲ್ಲಿ 67ನೇ ಶ್ರೇಯಾಂಕಿತ ಆಟಗಾರ ಅರ್ಜೇಂಟಿನಾದ ಪೆಡ್ರಿ ಕಾಚಿನ್ ವಿರುದ್ಧ ಸೆಣಸಾಡುವರು. ಇದು ಈ ವರ್ಷದ ಮೂರನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯಾಗಿದ್ದು ಋತುವಿನ ಎಲ್ಲ ಪ್ರಶಸ್ತಿ ಜಯಿಸುವ ಗುರಿಯನ್ನು ಹೊಂದಬೇಕಾದರೆ, ಸರ್ಬಿಯನ್ ಆಟಗಾರ ಇಲ್ಲಿ ಗೆಲ್ಲುವುದು ಅನಿವಾರ್ಯ.
-
🌱🌱🌱🎾💪🏼 @andy_murray 📸 @Wimbledon pic.twitter.com/HKqQeXFn4T
— Novak Djokovic (@DjokerNole) July 1, 2023 " class="align-text-top noRightClick twitterSection" data="
">🌱🌱🌱🎾💪🏼 @andy_murray 📸 @Wimbledon pic.twitter.com/HKqQeXFn4T
— Novak Djokovic (@DjokerNole) July 1, 2023🌱🌱🌱🎾💪🏼 @andy_murray 📸 @Wimbledon pic.twitter.com/HKqQeXFn4T
— Novak Djokovic (@DjokerNole) July 1, 2023
ಈ ಋತುವಿನಲ್ಲಿ ಈಗಾಗಲೇ ಆಸ್ಟ್ರೇಲಿಯಾ, ಫ್ರೆಂಚ್ ಟೂರ್ನಿ ಗೆಲುವು ಸಾಧಿಸಿದ್ದು, ವಿಂಬಲ್ಡನ್ ಗೆದ್ದರೆ ಅಮೆರಿಕ ಓಪನ್ ಗೆಲ್ಲುವ ಗುರಿ ಹೊಂದಬಹುದು. ರಾಡ್ ಲೇವರ್ ಬಳಿಕ (1969 ರಲ್ಲಿ) ಯಾರೊಬ್ಬರೂ ಈವರೆಗೂ ಒಂದೇ ವರ್ಷದಲ್ಲಿ ನಾಲ್ಕು ಪ್ರಶಸ್ತಿ ಜಯಿಸಿದ ನಿದರ್ಶನವಿಲ್ಲ.
8ನೇ ವಿಂಬಲ್ಡನ್?: ಟೂರ್ನಿಯಲ್ಲಿ ಸರ್ಬಿಯಾದ ಆಟಗಾರ ನೊವಾಕ್ ಜಯಿಸಿದರೆ, 8ನೇ ಪ್ರಶಸ್ತಿ ಇದಾಗಲಿದೆ. ಈ ಮೂಲಕ ಇಲ್ಲಿ 8 ಗ್ರ್ಯಾಂಡ್ಸ್ಲಾಮ್ ಗೆದ್ದಿರುವ ಮಾಜಿ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಮಾರ್ಗರೇಟ್ ದಾಖಲೆ ಮುರಿಯುತ್ತಾ?: ಒಂದು ವೇಳೆ ನೊವಾಕ್ ಜೊಕೊವಿಕ್ ವಿಂಬಲ್ಡನ್ ಟೂರ್ನಿ ಗೆಲುವು ಸಾಧಿಸಿದರೆ, ಇದು ಅವರ 24 ನೇ ಗ್ರ್ಯಾಂಡ್ಸ್ಲಾಮ್ ಆಗಲಿದೆ. ಈ ಮೂಲಕ ಈವರೆಗೂ 24 ಪ್ರಶಸ್ತಿ ಗೆದ್ದು ಸಾರ್ವಕಾಲಿಕ ದಾಖಲೆ ಮಾಡಿರುವ ಮಾಜಿ ಟೆನಿಸ್ ಆಟಗಾರ್ತಿ ಮಾರ್ಗರೇಟ್ ಕೋರ್ಟ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಪುರುಷರ ವಿಭಾಗದಲ್ಲಿ ಈಗಾಗಲೇ ಅತ್ಯಧಿಕ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಕಳೆದ 20 ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿ 11 ಪ್ರಶಸ್ತಿ ಗೆಲುವು ಸಾಧಿಸಿದ್ದಾರೆ.
2008ರ ಆಸ್ಟ್ರೇಲಿಯನ್ ಪ್ರಶಸ್ತಿ ಗೆಲುವು ಮೊದಲ ಗ್ರ್ಯಾಂಡ್ಸ್ಲಾಮ್ ಆಗಿತ್ತು. ಅದಾದ ಬಳಿಕ ಅವರು ದೈತ್ಯ ಟೆನಿಸ್ಸಿಗರಾದ ರೋಜರ್ ಫೆಡರರ್, ರಾಫೆಲ್ ನಡಾಲ್ರ ಸವಾಲನ್ನು ಎದುರಿಸುತ್ತಾ ಈ ಸಾಧನೆಯ ಶಿಖರಕ್ಕೆ ಬಂದಿದ್ದಾರೆ. ಈ ಇಬ್ಬರ ಎದುರು 11 ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಅದರಲ್ಲಿ 4 ಫೆಡರರ್ ಎದುರಾದರೆ, ನಡಾಲ್ ವಿರುದ್ಧ 7 ಬಾರಿ ಪರಾಭವಗೊಂಡಿದ್ದಾರೆ.
ಮಹಿಳಾ ವಿಭಾಗ: ಮೊದಲ ವಿಂಬಲ್ಡನ್ ಪ್ರಶಸ್ತಿಯ ಹುಡುಕಾಟದಲ್ಲಿರುವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಚೀನಾದ ಝು ಲಿನ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು. ವಿಶ್ವದ ನಂ.2 ಆಟಗಾರ್ತಿ, ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅರಿನಾ ಸಬಲೆಂಕಾ ಹಂಗೇರಿಯ ಪನ್ನಾ ಯುಡ್ವಾರ್ಡಿ ವಿರುದ್ಧ ಸ್ಪರ್ಧೆ ಆರಂಭಿಸಲಿದ್ದಾರೆ.
ವೀನಸ್ ವಿಲಿಯಮ್ಸನ್ ಕಣಕ್ಕೆ: 43 ವರ್ಷದ ಹಿಡಿಯ ಆಟಗಾರ್ತಿ ಅಮೆರಿಕದ ವೀನಸ್ ವಿಲಿಯಮ್ಸ್ ಅವರು ಮತ್ತೆ ವಿಂಬಲ್ಡನ್‌ನಲ್ಲಿ ಆಡಲಿರುವುದು ಕುತೂಹಲ ಮೂಡಿಸಿದೆ. ವೀನಸ್ 26 ವರ್ಷಗಳ ಹಿಂದೆ ಇಲ್ಲಿ ಪದಾರ್ಪಣೆ ಮಾಡಿದ್ದರು. ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿರುವ ಅವರು ಮೊದಲ ಸುತ್ತಿನಲ್ಲಿ ಎಲಿನಾ ಸ್ವಿಟೊಲಿನಾ ಅವರ ಸವಾಲು ಎದುರಿಸುವರು.
ಇದನ್ನೂ ಓದಿ: Ashes Test : ಬೆನ್ ಸ್ಟೋಕ್ಸ್ ಶತಕ ವ್ಯರ್ಥ.. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 43 ರನ್ಗಳ ಜಯ