ETV Bharat / sports

ಒಲಿಂಪಿಕ್ಸ್​ ವೇಳೆ ಅಶಿಸ್ತಿನ ವರ್ತನೆ : ವಿನೇಶ್ ಫೋಗಟ್​ರನ್ನು ಅಮಾನತು ಮಾಡಿದ WFI

author img

By

Published : Aug 10, 2021, 7:53 PM IST

Updated : Aug 10, 2021, 8:30 PM IST

ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಒಲಿಂಪಿಕ್ಸ್​ನಲ್ಲಿ ಕುಸ್ತಿಪಟುಗಳ ವರ್ತನೆಯ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿ ಡಬ್ಲ್ಯುಎಫ್‌ಐಗೆ ಪತ್ರ ಬರೆದಿದ್ದು, ನೀವೇಕೆ ನಿಮ್ಮ ಕ್ರೀಡಾಪಟುಗಳನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ ಎಂದು WFI ಮೂಲ ತಿಳಿಸಿದೆ..

WFI suspends Vinesh Phogat
ವಿನೇಶ್ ಫೋಗಟ್​ ಅಮಾನತು

ನವದೆಹಲಿ : ಟೋಕಿಯೊ ಒಲಿಂಪಿಕ್ಸ್​ ವೇಳೆ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಪ್ರಸಿದ್ಧ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್ ಅವರನ್ನು ಭಾರತೀಯ ಕುಸ್ತಿ ಒಕ್ಕೂಟ ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಇವರ ಜೊತೆಗೆ ದುರ್ವರ್ತನೆ ತೋರಿದ ಯುವ ಕುಸ್ತಿಪಟು ಸೋನಮ್​ ಮಲಿಕ್ ಅವರಿಗೂ ನೋಟಿಸ್​ ಜಾರಿ ಮಾಡಿದೆ.

ಟೋಕಿಯೊ ಗೇಮ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಹೀನಾಯ ಸೋಲಿನಿಂದ ಹೊರಬಿದ್ದ ವಿನೀಶ್‌ಗೆ ನೀಡಲಾಗಿರುವ ಅಶಿಸ್ತಿನ ವರ್ತನೆಯ ನೋಟಿಸ್​ಗೆ ಉತ್ತರಿಸಲು ಆಗಸ್ಟ್ 16ರವರೆಗೆ ಸಮಯ ನೀಡಲಾಗಿದೆ ಎಂದು WFI ಮಾಧ್ಯಮಕ್ಕೆ ತಿಳಿಸಿದೆ.

ಒಲಿಂಪಿಕ್ಸ್​ಗೂ ಮುನ್ನ ವಿನೇಶ್​ ತರಬೇತಿ ಪಡೆಯುತ್ತಿದ್ದ ಹಂಗೇರಿಯಿಂದ ಟೋಕಿಯೊಗೆ ನೇರವಾಗಿ ಕೋಚ್​ ವಾಲರ್ ಅಕೊಸ್​ ಜೊತೆಗೆ​ ತೆರಳಿದ್ದರು. ಆದರೆ, ಅವರು ಭಾರತೀಯ ಕುಸ್ತಿಪಟುಗಳ ಜೊತೆಗೆ ತರಬೇತಿ ನಡೆಸಲು ಮತ್ತು ಕ್ರೀಡಾ ಗ್ರಾಮದಲ್ಲಿ ಉಳಿದುಕೊಳ್ಳಲು ತಿರಸ್ಕರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಜೊತೆಗೆ ವಿನೇಶ್​ ಭಾರತೀಯ ಕ್ರೀಡಾ ತಂಡದ ಅಧಿಕೃತ ಪ್ರಾಯೋಜಕರಾದ ಶಿವ್ ನರೇಶ್ ಲೋಗೋವಿದ್ದ ಕುಸ್ತಿ ಧಿರಿಸನ್ನು ಧರಿಸಿರಲಿಲ್ಲ. ಅವರು ತಮ್ಮ ಪಂದ್ಯಗಳಲ್ಲಿ ನೈಕ್ ಲೋಗೋ ಇದ್ದ ಕುಸ್ತಿ ಧಿರಿಸನ್ನು ಧರಿಸುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದಲ್ಲದೆ ಕ್ರೀಡಾ ಗ್ರಾಮದಲ್ಲಿ ಇತರೆ ಕುಸ್ತಿಪಟುಗಳಾದ ಸೀಮಾ ಬಿಸ್ಲಾ, ಸೋನಮ್ ಮಲಿಕ್​ ರೂಮಿನ ಪಕ್ಕದಲ್ಲಿ ಉಳಿದುಕೊಳ್ಳಲು ಕೂಡ ನಿರಾಕರಿಸಿದ್ದರು. ಈ ಕುಸ್ತಿ ಪಟುಗಳು ಭಾರತದಿಂತ ಪ್ರಯಾಣ ಮಾಡಿರುವುದರಿಂದ ತಮಗೆ ಕೊರೊನಾ ಸೋಂಕು ತಗುಲಬಹುದು ಎಂದು ವಾದ ಮಾಡಿದ್ದರು.

ಅಲ್ಲದೆ, ಒಂದು ದಿನ ಅವರ ತರಬೇತಿಗೆ ಭಾರತೀಯ ಹುಡುಗಿಯರ ಜೊತೆಗೆ ತರಬೇತಿ ನಡೆಸಲು ಸಮಯದ ಹೊಂದಾಣಿಕೆಯಾಗದಿದ್ದಕ್ಕಾಗಿ ಅವರು ಕ್ರೀಡಾಕೂಟದಲ್ಲಿ ಭಾರತೀಯ ಕುಸ್ತಿಪಟುಗಳ ಜೊತೆಗೆ ತರಬೇತಿ ನಡೆಸದಿರಲು ತೀರ್ಮಾನ ತೆಗೆದುಕೊಂಡಿದ್ದರೆಂದು WFI ಮಾಹಿತಿ ನೀಡಿದೆ.

"ಹಿರಿಯ ಕ್ರೀಡಾಪಟುವಾಗಿ ಈ ರೀತಿ ವರ್ತಿಸುವುದು ತಪ್ಪು, ಇದು ಸಂಪೂರ್ಣ ಅಶಿಸ್ತಿನ ವರ್ತನೆ. ಹಾಗಾಗಿ, ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಮತ್ತು ಎಲ್ಲಾ ಕುಸ್ತಿ ಚಟುವಟಿಕೆಗಳಿಂದ ನಿರ್ಬಂಧಿಸಲಾಗಿದೆ. ಅವರು ನೋಟಿಸ್​ಗೆ ಉತ್ತರಿಸುವವರೆಗೂ ಮತ್ತು ಡಬ್ಲ್ಯುಎಫ್‌ಐ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಯಾವುದೇ ರಾಷ್ಟ್ರೀಯ ಅಥವಾ ಇತರ ದೇಶೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಿಲ್ಲ" ಎಂದು ಡಬ್ಲ್ಯುಎಫ್‌ಐ ಮೂಲ ಪಿಟಿಐಗೆ ತಿಳಿಸಿದೆ.

ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಒಲಿಂಪಿಕ್ಸ್​ನಲ್ಲಿ ಕುಸ್ತಿಪಟುಗಳ ವರ್ತನೆಯ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿ ಡಬ್ಲ್ಯುಎಫ್‌ಐಗೆ ಪತ್ರ ಬರೆದಿದ್ದು, ನೀವೇಕೆ ನಿಮ್ಮ ಕ್ರೀಡಾಪಟುಗಳನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ ಎಂದು WFI ಮೂಲ ತಿಳಿಸಿದೆ.

ಇದನ್ನು ಓದಿ : Exclusive : ಗಾಯದ ಹೊರತಾಗಿಯೂ ಪದಕ ಗೆಲ್ಲುವುದಕ್ಕೆ ಗಮನ ನೀಡಿದ್ದೆ : ಬಜರಂಗ್ ಪೂನಿಯಾ

Last Updated : Aug 10, 2021, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.