ETV Bharat / sports

ಬಹ್ರೈನ್ ಗ್ರ್ಯಾಂಡ್ ಪ್ರಿಕ್ಸ್.. ರೊಮೈನ್ ಗ್ರೋಸ್ಜೀನ್ ಕಾರಿನಲ್ಲಿ ಬೆಂಕಿ ಅವಘಡ

author img

By

Published : Nov 30, 2020, 12:13 PM IST

ಬೆಂಕಿ ಆವರಿಸಿದ ನಂತರ ಗ್ರೋಸ್ಜೀನ್ ಸುಮಾರು 10 ಸೆಕೆಂಡ್​ಗಳ ಕಾಲ ಕಾರಿನೊಳಗೆ ಸಿಲುಕಿದ್ದರು. ಬಳಿಕ ಜ್ವಾಲೆಯಿಂದ ತಪ್ಪಿಸಿಕೊಂಡು ಬರುವಲ್ಲಿ ಅವರು ಯಶಸ್ವಿಯಾಗಿದ್ದಾರೆ..

ರೊಮೈನ್ ಗ್ರೋಸ್ಜೀನ್ ಕಾರಿನಲ್ಲಿ ಬೆಂಕಿ ಅವಘಡ
ರೊಮೈನ್ ಗ್ರೋಸ್ಜೀನ್ ಕಾರಿನಲ್ಲಿ ಬೆಂಕಿ ಅವಘಡ

ಮನಾಮ (ಬಹ್ರೈನ್​) : ಬಹ್ರೈನ್ ಗ್ರ್ಯಾಂಡ್ ಪ್ರಿಕ್ಸ್ ಭಾನುವಾರ ಪ್ರಾರಂಭಗೊಂಡಿದ್ದು, ಫಾರ್ಮುಲಾ ಒನ್​ನ ಸ್ಪರ್ಧಿ ರೊಮೈನ್ ಗ್ರೋಸ್ಜೀನ್ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಫ್ರೆಂಚ್​ನ ರೊಮೈನ್ ಗ್ರೋಸ್ಜೀನ್ ಕಾರು ಮೊದಲ ಲ್ಯಾಪ್‌ನಲ್ಲಿ ಟ್ರ್ಯಾಕ್‌ನಿಂದ ಜಾರಿದೆ. ಬಳಿಕ ತಡೆಗೋಡೆಗೆ ಗುದ್ದಿದ ರಭಸಕ್ಕೆ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಸದ್ಯ ಗ್ರೋಸ್ಜೀನ್​ರನ್ನು ತಕ್ಷಣವೇ ಹೆಲಿಕಾಪ್ಟರ್ ಮೂಲಕ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆವರ ಆರೋಗ್ಯ ಸ್ಥಿರವಾಗಿದೆ ಎಂದು ಆಡಳಿತ ಮಂಡಳಿ ಎಫ್ಐಎ ತಿಳಿಸಿದೆ.

ಬೆಂಕಿ ಆವರಿಸಿದ ನಂತರ ಗ್ರೋಸ್ಜೀನ್ ಸುಮಾರು 10 ಸೆಕೆಂಡ್​ಗಳ ಕಾಲ ಕಾರಿನೊಳಗೆ ಸಿಲುಕಿದ್ದರು. ಬಳಿಕ ಜ್ವಾಲೆಯಿಂದ ತಪ್ಪಿಸಿಕೊಂಡು ಬರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಮೊದಲು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.