ಸಿಡ್ನಿ: ಸ್ಪಿನ್ ದಂತಕಥೆ ಶೇನ್ ವಾರ್ನ್ ಅವರ ಸಾವಿನ ಬಗ್ಗೆ ಹರದಾಡುತ್ತಿರುವ ವದಂತಿ ಬಗ್ಗೆ ಅವರ ಮ್ಯಾನೇಜರ್ ಜೇಮ್ಸ್ ಎರ್ಸ್ಕಿನ್ ಸ್ಪಷ್ಟನೆ ನೀಡಿದ್ದಾರೆ. ಶೇನ್ ವಾರ್ನ್ ಅವರು ಪ್ರವಾಸಕ್ಕೆ ತೆರಳುವ ಮುನ್ನ ಎರಡು ವಾರಗಳಿಂದ ದ್ರವ ಪದಾರ್ಥ ಆಹಾರ ಮಾತ್ರ ಸೇವಿಸುತ್ತಿದ್ದರು. ಈ ಬಗ್ಗೆ ಕೇಳಿದಾಗ ತೂಕ ಕಡಿಮೆಗೊಳಿಸುವ ಸಲುವಾಗಿ ಈ ಆಹಾರ ಪದ್ಧತಿ ರೂಢಿಸಿಕೊಂಡಿರುವುದಾಗಿ ಹೇಳಿದ್ದರು.
ಆದರೆ, ಈ ಆಹಾರ ಪದ್ಧತಿ ಕ್ರಮ ಪಾಲಿಸುತ್ತಿರುವ ಜೊತೆಗೆ ತಮ್ಮಲ್ಲಿ ಇತ್ತೀಚೆಗೆ ಎದೆ ನೋವು ಮತ್ತು ಬೆವರುವಿಕೆ ಎಂದು ಸಹ ಹೇಳಿಕೊಂಡಿದ್ದರು. ಮತ್ತು ಥಾಯ್ಲೆಂಡ್‌ನಿಂದ ಹಿಂದಿರುಗಿದ ನಂತರ ವೈದ್ಯರನ್ನು ಭೇಟಿ ಮಾಡುವುದಾಗಿಯೂ ಹೇಳಿದ್ದರು. ರಜೆಯಲ್ಲಿದ್ದುದರಿಂದ ಹಾಗೂ ತಮ್ಮ ತೂಕವನ್ನು ಕಡಿಮೆಗೊಳಿಸುವ ಸಲುವಾಗಿ ಮದ್ಯಪಾನ ಸಹ ಮಾಡುತ್ತಿರಲಿಲ್ಲ. ಕಳೆದ ಎರುಡು ವಾರಗಳಿಂದ ಇದೇ ರೀತಿಯ ಆಹಾರ ಪದ್ಧತಿ ಕ್ರಮವನ್ನು ಪಾಲಿಸುತ್ತಾ ಬರುತ್ತಿದ್ದರು. ಧೂಮಪಾನ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ.
ಇದನ್ನೂ ಓದಿ: 'ಇದು ಸೂಕ್ತ ಸಮಯವಾಗಿರಲಿಲ್ಲ'..ವಾರ್ನ್ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಪಶ್ಚಾತ್ತಾಪ ಪಟ್ಟ ಗವಾಸ್ಕರ್!
ಇತ್ತೀಚೆನ ಜೀವನ ಶೈಲಿ ಬಗ್ಗೆ ನಾನು ಖಾತ್ರಿಯಾಗಿಯೇ ಹೇಳಬಲ್ಲೆ. ಅವರು ಸಾವು ಭಾರಿ ಪ್ರಮಾಣದ ಹೃದಯಾಘಾತದಿಂದಲೇ ಆಗಿದೆ ಎಂದು ನಾನು ಭಾವಿಸುತ್ತೇನೆ. ಪ್ರಾಥಮಿಕ ತನಿಖೆಗಳಲ್ಲಿಯೂ ಸಹ ಯಾವುದೇ ದುಷ್ಕೃತ್ಯದ ಸೂಚನೆ ದೊರೆತಿಲ್ಲ.
ಪೊಲೀಸರು ನೀಡಿದ ಮರಣೋತ್ತರ ಪರೀಕ್ಷೆಯ ಫಲಿತಾಂಶವೂ ಸಹ ಬಹಿರಂಗಗೊಂಡಿದೆ ಎಂದು ಅವರ ಇತ್ತೀಚಿನ ದಿನಚರಿ ಬಗ್ಗೆ ಹಾಗೂ ಅವರು ನಡೆಸಿಕೊಂಡು ಬರುತ್ತಿದ್ದ ಆಹಾರ ಕ್ರಮದ ಬಗ್ಗೆ ಸ್ಪಷ್ಟನೆ ನೀಡಿದರು ವಾರ್ನ್ ಅವರ ಮ್ಯಾನೇಜರ್ ಜೇಮ್ಸ್ ಎರ್ಸ್ಕಿನ್. ಅವರ ಸಾವಿಗೂ ಕೆಲವು ದಿನಗಳ ಮೊದಲು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದರು. ತಮ್ಮ ದೇಹದ ತೂಕವನ್ನು ತಗ್ಗಿಸಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದರು. ದೇಹದಂಡನೆ ಮಾಡುವ ಪ್ರಯತ್ನದಿಂದಲೇ ಈ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ.