ಜಲಂದರ್(ಪಂಜಾಬ್): ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ವಿನೇಶ್ ಫೋಗಟ್ ಹಾಗೂ ಸಾಕ್ಷಿ ಮಲ್ಲಿಕ್ ಅವರು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವರ್ಷದಲ್ಲಿ ವಿವಿಧ ಚಾಂಪಿಯನ್ಶಿಪ್ಗಳಲ್ಲಿ 5 ಚಿನ್ನದ ಪದಕ ಪಡೆದಿದ್ದ ವಿನೇಶ್ ಪೋಗಟ್ ಪಂಜಾಬ್ನ ಜಲಂದರ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ರೈಲ್ವೆ ಪ್ರತಿನಿಧಿಸುತ್ತಿರುವ ವಿನೇಶ್ 55 ಕೆಜಿ ವಿಭಾಗದಲ್ಲಿ 20 ವರ್ಷದ ಹರಿಯಾಣದ ಅಂಜು ಅವರನ್ನು 7-3 ಅಂಕಗಳಿಂದ ಮಣಿಸುವ ಮೂಲಕ ಸತತ 2ನೇ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಸಾಕ್ಷಿ ಮಲಿಕ್ 68 ಕೆಜಿ ವಿಭಾಗದಲ್ಲಿ ಹರಿಯಾಣದ ರಾಧಿಕಾ ಅವರ ವಿರುದ್ಧ 4-2 ಅಂತರದಿಂದ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದರು. ಆದರೆ, ತಂಡದ ವಿಭಾಗದಲ್ಲಿ ರೈಲ್ವೇಸ್ ವಿರುದ್ಧ ಹರಿಯಾಣ ತಂಡ 215-198 ರಿಂದ ಮಣಿಸಿ ಚಿನ್ನದ ಪದಕ ಪಡೆಯಿತು.