ETV Bharat / sports

ನೋಡಿ: ರಾಷ್ಟ್ರೀಯ ಕ್ರೀಡಾ ದಿನದಂದೇ ಬೆಳ್ಳಿ ಗೆದ್ದ ಭಾವಿನಾ ಗ್ರಾಮದಲ್ಲಿ ಸಂಭ್ರಮ

ಗುಜರಾತ್​ನ ಮೆಹ್ಸಾನಾ ಜಿಲ್ಲೆಯ ಸಂಧಿಯಾ ಗ್ರಾಮದ ಭಾವಿನಾ ಪಟೇಲ್ ಟೋಕಿಯೋ ಪ್ಯಾರಾಲಿಂಪಿಕ್ಸ್​​​ನ ಟೇಬಲ್​​ ಟೆನ್ನಿಸ್ ಪಂದ್ಯದಲ್ಲಿ ಬೆಳ್ಳಿ ಗೆದ್ದಿದ್ದು, ಸಾಂಪ್ರದಾಯಿಕ 'ಗರ್ಬಾ' ನೃತ್ಯ ಮಾಡಿ, ಪಟಾಕಿ ಸಿಡಿಸಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಖುಷಿ ಪಟ್ಟರು.

Villagers Celebrate Bhavina Patel's Historic Silver in Paralympics
ರಾಷ್ಟ್ರೀಯ ಕ್ರೀಡಾ ದಿನದಂದೇ ಬೆಳ್ಳಿ ಗೆದ್ದ ಭಾವಿನಾ ಗ್ರಾಮದಲ್ಲಿ ಸಂಭ್ರಮ ನೋಡಿ
author img

By

Published : Aug 29, 2021, 5:31 PM IST

ಮೆಹ್ಸಾನಾ (ಗುಜರಾತ್​): ರಾಷ್ಟ್ರೀಯ ಕ್ರೀಡಾ ದಿನವಾದ ಇಂದೇ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿ ದೇಶಕ್ಕೆ ಕೀರ್ತಿ ತಂದಿರುವ ಭಾರತದ ಟೇಬಲ್​​ ಟೆನ್ನಿಸ್​ ಆಟಗಾರ್ತಿ ಭಾವಿನಾ ಪಟೇಲ್​​ ಅವರ ಸ್ವಗ್ರಾಮದಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ.

ಬೆಳ್ಳಿ ಗೆದ್ದ ಭಾವಿನಾ ಗ್ರಾಮದಲ್ಲಿ ಸಂಭ್ರಮ

ಭಾವಿನಾ ಪಟೇಲ್, ಗುಜರಾತ್​​ನ ಮೆಹ್ಸಾನಾ ಜಿಲ್ಲೆಯ ಸಂಧಿಯಾ ಗ್ರಾಮದವರಾಗಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪೈನಲ್​ ಪಂದ್ಯದ ನೇರಪ್ರಸಾರವನ್ನು ಗ್ರಾಮದೊಳಗೆ ದೊಡ್ಡ ಸ್ರೀನ್​ ಅಳವಡಿಸಿ ನೋಡಿದ ಗ್ರಾಮಸ್ಥರು ಬೆಳ್ಳಿ ಗೆಲ್ಲುತ್ತಿದ್ದಂತೆಯೇ ಚಪ್ಪಾಳೆಯ ಸುರಿಮಳೆಗೈದಿದ್ದಾರೆ. ಭಾವಿನಾ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಸಾಂಪ್ರದಾಯಿಕ 'ಗರ್ಬಾ' ನೃತ್ಯ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ 'ರಾಷ್ಟ್ರೀಯ ಕ್ರೀಡಾ ದಿನಾಚರಣೆ' ಸಂಭ್ರಮ: ಈ ದಿನದ ಮಹತ್ವ ಗೊತ್ತೇ?

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾವಿನಾ ತಂದೆ ಹಸ್ಮುಖ್ ಪಟೇಲ್, "ಆಕೆ ದಿವ್ಯಾಂಗಳಾಗಿರಬಹುದು, ಆದರೆ ನಮಗೆಂದೂ ಹಾಗೆ ಕಾಣಿಸಲಿಲ್ಲ. ಅವಳು ನಮ್ಮ ದೇವಿ. ನಮ್ಮ ಗ್ರಾಮ, ರಾಜ್ಯ, ದೇಶಕ್ಕಾಗಿ ಬೆಳ್ಳಿ ಪದಕವನ್ನು ತಂದಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಆಕೆಗೆ ನಾವು ಭವ್ಯ ಸ್ವಾಗತ ಮಾಡಲಿದ್ದೇವೆ" ಎಂದರು.

ಇದನ್ನೂ ಓದಿ: Tokyo Paralympics: ಬೆಳ್ಳಿ ಗೆದ್ದ ಭಾವಿನಾ ಜೊತೆ ಪ್ರಧಾನಿ ಮಾತು: 3 ಕೋಟಿ ರೂ. ಘೋಷಿಸಿದ ಗುಜರಾತ್​ ಸರ್ಕಾರ

ಇನ್ನು ಭಾವಿನಾ ಪಟೇಲ್​ಗೆ ದೂರವಾಣಿ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಬೆಳ್ಳಿ ಗೆದ್ದ ತಮ್ಮ ರಾಜ್ಯದ ಕ್ರೀಡಾಪಟುವಿಗೆ 3 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಗುಜರಾತ್​ ಸರ್ಕಾರ ಘೋಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.