ETV Bharat / sports

ಟೋಕಿಯೊ ಒಲಿಂಪಿಕ್​ಗೆ ಅರ್ಹತೆ ಪಡೆದ  ಪೂಜಾ ರಾಣಿ, ವಿಕಾಸ್: ಕ್ರೀಡಾ ಸಚಿವರಿಂದ ಅಭಿನಂದನೆ - ಒಲಂಪಿಕ್​ಗೆ ಅರ್ಹತೆ ಪಡೆದ ವಿಕಾಸ್ ಕ್ರಿಶನ್

ಭಾರತೀಯ ಬಾಕ್ಸರ್ ಪೂಜಾ ರಾಣಿ ಜಪಾನ್‌ನ ಸೆವೊನ್ರೆಟ್ಸ್ ಒಕಾಜಾವಾ ವಿರುದ್ಧ 5-0 ಅಂಕಗಳಿಂದ ಜಯ ಸಾಧಿಸಿ ಟೋಕಿಯೊ ಒಲಿಂಪಿಕ್​ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Vikas Krishan, Pooja Rani qualify for Tokyo Olympics,ಟೊಕಿಯೋ ಒಲಂಪಿಕ್​ಗೆ ಅರ್ಹತೆ ಪಡೆದ ಪುಜಾ ರಾಣಿ, ವಿಕಾಸ್
ಟೊಕಿಯೋ ಒಲಂಪಿಕ್​ಗೆ ಅರ್ಹತೆ ಪಡೆದ ಪುಜಾ ರಾಣಿ, ವಿಕಾಸ್
author img

By

Published : Mar 8, 2020, 9:00 PM IST

Updated : Mar 8, 2020, 11:35 PM IST

ನವದೆಹಲಿ: 2020ರ ಟೋಕಿಯೊ ಒಲಿಂಪಿಕ್​ಗೆ ಅರ್ಹತೆ ಪಡೆದ ಭಾರತದ ಬಾಕ್ಸರ್‌ಗಳಾದ ವಿಕಾಸ್ ಕ್ರಿಶನ್ (69 ಕೆಜಿ) ಮತ್ತು ಪೂಜಾ ರಾಣಿ (75 ಕೆಜಿ) ಅವರನ್ನು ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಅಭಿನಂದಿಸಿದ್ದಾರೆ.

ಪೂಜಾ, ಥೈಲ್ಯಾಂಡ್‌ನ ಪೊಮ್ನಿಪಾ ಚುಟಿಯನ್ನು 5-0 ಅಂಕಗಳಿಂದ ಸೋಲಿಸಿ ಟೋಕಿಯೊ ಒಲಿಂಪಿಕ್​ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇತ್ತ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಸೆವೊನ್ರೆಟ್ಸ್ ಒಕಾಜಾವಾ ವಿರುದ್ಧ 5-0 ಅಂಕಗಳಿಂದ ಜಯ ಸಾಧಿಸಿದ ವಿಕಾಸ್, ಟೋಕಿಯೊ ಒಲಿಂಪಿಕ್​ಗೆ ಅರ್ಹತೆ ಪಡೆದುಕೊಂಡರು.

ಮುಂದಿನ ದಿನಗಳಲ್ಲಿ, ಲೋವ್ಲಿನಾ ಬೊರ್ಗೊಹೈನ್ (69 ಕೆಜಿ), ಆಶಿಶ್ ಕುಮಾರ್ (75 ಕೆಜಿ), ಸಚಿನ್ ಕುಮಾರ್ (81 ಕೆಜಿ), ಸತೀಶ್ ಕುಮಾರ್ (+ 91 ಕೆಜಿ) ಕ್ವಾರ್ಟರ್-ಫೈನಲ್ ಪಂದ್ಯಗಳನ್ನು ಆಡಲಿದ್ದು, ಒಲಿಂಪಿಕ್​ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದಾರೆ.

Last Updated : Mar 8, 2020, 11:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.