ETV Bharat / sports

ಅಮೆರಿಕ ವೃತ್ತಿಪರ ಬಾಕ್ಸಿಂಗ್​ನಲ್ಲೂ ಭಾರತದ ಬಾವುಟ ಹಾರಿಸಿದ ವಿಜೇಂದರ್​​​​​ ಸಿಂಗ್​​​ - ವಿಜೇಂದರ್​ ಸಿಂಗ್

ರಾಜಕೀಯಕ್ಕೆ ಬ್ರೇಕ್​ ನೀಡಿ ವೃತ್ತಿಪರ ಬಾಕ್ಸಿಂಗ್​ಗೆ ಕಮ್​ಬ್ಯಾಕ್ ಮಾಡಿದ್ದ ವಿಜೇಂದರ್​ ಸಿಂಗ್​ ಅಮೆರಿಕದ ಟಾಪ್​ ರ್ಯಾಂಕ್​ ಬಾಕ್ಸಿಂಗ್​ನಲ್ಲಿ ಮೊದಲ ಜಯದೊಂದಿಗೆ ವೃತ್ತಿ ಜೀವನದ ಸತತ 11ನೇ ಗೆಲುವು ಪಡೆದಿದ್ದಾರೆ.

Vijender Singh
author img

By

Published : Jul 14, 2019, 8:49 AM IST

ನ್ಯೂಯಾರ್ಕ್​: ಭಾರತದ ಸ್ಟಾರ್​ ಬಾಕ್ಸರ್​ ಹಾಗೂ ಒಲಿಂಪಿಕ್​ ಪದಕ ವಿಜೇತರಾಗಿರುವ ವಿಜೇಂದರ್​ ಸಿಂಗ್​ ತಮ್ಮ ವೃತ್ತಿಪರ ಬಾಕ್ಸಿಂಗ್​ನಲ್ಲಿ 11ನೇ ಜಯ ಸಾಧಿಸಿದ್ದಾರೆ.

2 ವರ್ಷಗಳ ನಂತರ ವೃತ್ತಿಪರ ಬಾಕ್ಸಿಂಗ್​ಗೆ ಮರಳಿದ್ದ 33 ವರ್ಷದ ವಿಜೇಂದರ್,​ ಶನಿವಾರ ತಮ್ಮ 11ನೇ ಪಂದ್ಯದಲ್ಲಿ ಅಮೆರಿಕದ ಅನುಭವಿ ಬಾಕ್ಸರ್​ ಮೈಕ್​ ಸ್ನಿಡರ್​ ವಿರುದ್ಧ ಸುಲಭದ ಜಯ ಸಾಧಿಸಿದರು.

8 ರೌಂಡ್​ ನಡೆಯಬೇಕಿದ್ದ ಈ ಪಂದ್ಯವನ್ನು ವಿಜಯ್​ ತಮ್ಮ ಬಲಿಷ್ಠ ಪಂಚ್​ಗಳಿಂದ ಮೈಕ್​ ಸ್ನಿಡರ್​ರನ್ನು ಹೈರಾಣಗೊಳಿಸಿ ಕೇಲವ 4ನೇ ರೌಂಡ್​ನಲ್ಲೇ ವಿಜಯ ಪತಾಕೆ ಹಾರಿಸಿದರು. 4ನೇ ಸುತ್ತಿನ 2ನೇ ನಿಮಿಷದಲ್ಲಿ ವಿಜೇಂದರ್​ ಹೊಡೆದ ಪಂಚ್​ಗೆ ನರಳಾಡಿದ ಸ್ನಿಡರ್​ ಮೇಲೇಳಲು ಕಷ್ಟ ಪಡುವಂತಾಗಿತ್ತು. ಈ ವೇಳೆ ವಿಜೇಂದರ್​ರನ್ನು ರೆಫ್ರಿ ವಿಜೇತರೆಂದು ಘೋಷಿಸಿದರು. ವಿಜೇಂದರ್​ ಈ ಪಂದ್ಯದಲ್ಲೂ ನಾಕೌಟ್​ ಹಂತದಲ್ಲೇ ಗೆಲುವು ಸಾಧಿಸುವ ಮೂಲಕ ವೃತ್ತಿ ಜೀವನದ 11 ಗೆಲುವಿನಲ್ಲಿ 8ನೇ ನಾಕೌಟ್​ ಜಯ ದಕ್ಕಿಸಿಕೊಂಡರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.