ಬೊಕಾರೊ (ಜಾರ್ಖಂಡ್): ಎಸ್ಎಐಎಲ್ (SAIL) ಮತ್ತು ಬಿಎಸ್ಎಲ್ (BSL) ಆಯೋಜಿಸಿರುವ ಹತ್ತೊಂಬತ್ತು ವರ್ಷದೊಳಗಿನವರ ಚಾಂಪಿಯನ್‌ಶಿಪ್ ಪಂದ್ಯಕ್ಕಾಗಿ ಭಾರತೀಯ ಫುಟ್ಬಾಲ್ ತಂಡದಲ್ಲಿ ವಿಜಯ್ ಮರಾಂಡಿ ಸ್ಥಾನ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 21 ರಿಂದ ಪ್ರಾರಂಭವಾಗುವ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ವಿಜಯ್ ಡಿಫೆಂಡರ್ ಆಗಿ ಆಡಲಿದ್ದಾರೆ. ಎಸ್ಎಐಎಲ್ ಫುಟ್ಬಾಲ್ ಅಕಾಡೆಮಿ, ಬೊಕಾರೊ ಸೇರಿದಂತೆ ಇಡೀ ಜಾರ್ಖಂಡ್ ಎಸ್ಎಐಎಲ್ ಸಾಧನೆಯ ಬಗ್ಗೆ ಹೆಮ್ಮೆಪಡುತ್ತದೆ.
ಗುಡ್ಡಗಾಡು ಪ್ರದೇಶದ ಹಿಂದುಳಿದ ಜಾಗವೆಂದೇ ಕರೆಸಿಕೊಳ್ಳುವ ಗೊಡ್ಡಾದ ಲಾಲ್ಮಾಟಿಯಾದ ಬಡಾ ಸಿಮ್ರಾದಿಂದ ಬಂದ ವಿಜಯ್ ಮರಾಂಡಿ, ಬಾಲ್ಯದಿಂದಲೂ ಫುಟ್‌ಬಾಲ್‌ನಲ್ಲಿ ಆಸಕ್ತಿ ಹೊಂದಿದ್ದರು. ಅವರ ಪ್ರತಿಭೆಯಿಂದಾಗಿ, ಅವರು 2021 ರಲ್ಲಿ ಎಸ್ಎಐಎಲ್ ಫುಟ್ಬಾಲ್ ಅಕಾಡೆಮಿಯ ತರಬೇತಿ ಕಾರ್ಯಕ್ರಮದ ಭಾಗವಾದರು. ಅಲ್ಲಿ ಅವರು ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ಪಡೆದರು ಮತ್ತು ಭಾರತೀಯ ಅಂಡರ್ -19 ತಂಡದಲ್ಲಿ ತಮ್ಮ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾದರು.
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF) ಚಾಂಪಿಯನ್‌ಶಿಪ್ ಸೆಪ್ಟೆಂಬರ್ 21 ರಿಂದ 30 ರವರೆಗೆ ಕಠ್ಮಂಡುವಿನ ದಶರಥ್ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಇದರಲ್ಲಿ ಆತಿಥೇಯ ನೇಪಾಳ, ಭಾರತ, ಮಾಲ್ಡೀವ್ಸ್, ಬಾಂಗ್ಲಾದೇಶ, ಭೂತಾನ್ ಮತ್ತು ಪಾಕಿಸ್ತಾನ ಸೇರಿವೆ.
ತಂಡವು ಶುಕ್ರವಾರ ಸೌದಿ ಅರೇಬಿಯಾದ ಟ್ರೇನಿಂಗ್ ಕ್ಯಾಂಪ್‌ಗೆ ತೆರಳಲಿದೆ. ಅಲ್ಲಿಂದ ಅವರು ಸೆಪ್ಟೆಂಬರ್ 19 ರಂದು ನೇಪಾಳದ ರಾಜಧಾನಿಗೆ ಪ್ರಯಾಣಿಸಲಿದ್ದಾರೆ. ಭಾರತವು ಭೂತಾನ್ ಮತ್ತು ಬಾಂಗ್ಲಾದೇಶ ಬಿ ಗುಂಪಿನಲ್ಲಿದ್ದರೆ, ಗುಂಪು ಎ ಆತಿಥೇಯ ನೇಪಾಳ, ಮಾಲ್ಡೀವ್ಸ್ ಮತ್ತು ಪಾಕಿಸ್ತಾನ ಇದೆ.
2022ರಲ್ಲಿ ಭುವನೇಶ್ವರದಲ್ಲಿ ನಡೆದ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಬಾಂಗ್ಲಾದೇಶವನ್ನು 05-02 ರಿಂದ ಸೋಲಿಸುವ ಮೂಲಕ ಭಾರತ ಚಾಂಪಿಯನ್ ಆಗಿತ್ತು.
SAFF U-19 ಚಾಂಪಿಯನ್‌ಶಿಪ್‌ಗಾಗಿ ಭಾರತ ತಂಡ: ಗೋಲ್‌ಕೀಪರ್‌ಗಳು: ಲಿಯೋನೆಲ್ ಡ್ಯಾರಿಲ್ ರಿಮ್ಮಿ, ದಿವ್ಯಾಜ್ ಧವಲ್ ಠಕ್ಕರ್ ಮತ್ತು ಮಂಜೋತ್ ಸಿಂಗ್ ಪರ್ಮಾರ್.
ಡಿಫೆಂಡರ್ಸ್: ಥಾಮಸ್ ಕನಮೂಟ್ಟಿಲ್ ಚೆರಿಯನ್, ಜಹಾಂಗೀರ್ ಅಹ್ಮದ್ ಶಾಗೂ, ವಿಜಯ್ ಮರಾಂಡಿ, ಎ ಸಿಬಾ ಪ್ರಸಾದ್, ಮನಬೀರ್ ಬಸುಮತರಿ, ಸೂರಜ್‌ಕುಮಾರ್ ಸಿಂಗ್ ನಂಗ್‌ಬಾಮ್ ಮತ್ತು ರಿಕಿ ಮೀಟೆ.
ಮಿಡ್‌ಫೀಲ್ಡರ್‌ಗಳು: ಮಂಗ್ಲೆಂಥೆಂಗ್ ಕಿಪ್‌ಗೆನ್, ಇಶಾನ್ ಶಿಶೋಡಿಯಾ, ಅರ್ಜುನ್ ಸಿಂಗ್ ಓನಮ್, ಯಶ್ ಚಿಕ್ರೊ, ಎಬಿಂದಾಸ್ ಯೇಸುದಾಸನ್, ರಾಜಾ ಹರಿಜನ್ ಮತ್ತು ಥಮ್ಸೋಲ್ ಟೊಂಗ್‌ಸಿನ್.
ಫಾರ್ವರ್ಡ್‌ಗಳು: ಗ್ವಾಯರಿ, ಸಾಹಿಲ್ ಕುರ್ಶಿದ್, ಲಿಂಕಿ ಮೈಟಿ ಚಬುಂಗ್ಬಾಮ್, ಕೆಲ್ವಿನ್ ಸಿಂಗ್ ಟಾರೆಮ್, ನೌಬ ಮೈಥಿ ಮತ್ತು ದಿನೇಶ್ ಸಿಂಗ್ ಸೌಬಮ್.
ಇದನ್ನೂ ಓದಿ: ICC ODI Rankings: ಪಾಕಿಸ್ತಾನದ ವಿರುದ್ಧ ಭಾರತದ ಅದ್ಭುತ ಆಟ.. 4 ವರ್ಷಗಳ ನಂತರ ತ್ರಿವಳಿ ಬ್ಯಾಟರ್ಗಳ ದಾಖಲೆ