ಲಂಡನ್: ಇತ್ತೀಚೆಗೆ 34ನೇ ಜನ್ಮದಿನವನ್ನಾಚರಿಸಿಕೊಂಡಿದ್ದ ಲೆಜೆಂಡರಿ ಸ್ಪ್ರಿಂಟರ್ ಉಸೇನ್ ಬೋಲ್ಟ್ಗೆ ಕೋರೋನಾ ಪಾಸಿಟಿವ್ ದೃಢಪಟ್ಟಿದ್ದು, ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಮಾಜಿ ಒಲಿಂಪಿಕ್ಸ್ ಚಾಂಪಿಯನ್ ತಮಗೆ ಕೊರೊನಾ ಪಾಸಿಟಿವ್ ದೃಡಪಟ್ಟಿರುವುದನ್ನು ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.
"ಎಲ್ಲರಿಗೂ ಶುಭೋದಯ , ಶನಿವಾರ ನಡೆಸಿದ ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಆದರೆ, ನನಗೆ ಯಾವುದೇ ರೋಗದ ಲಕ್ಷಣಗಳಿಲ್ಲ. ಹಾಗಾಗಿ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದೇನೆ" ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
-
Stay Safe my ppl 🙏🏿 pic.twitter.com/ebwJFF5Ka9
— Usain St. Leo Bolt (@usainbolt) August 24, 2020 " class="align-text-top noRightClick twitterSection" data="
">Stay Safe my ppl 🙏🏿 pic.twitter.com/ebwJFF5Ka9
— Usain St. Leo Bolt (@usainbolt) August 24, 2020Stay Safe my ppl 🙏🏿 pic.twitter.com/ebwJFF5Ka9
— Usain St. Leo Bolt (@usainbolt) August 24, 2020
ಇನ್ನು ಬೋಲ್ಟ್ ಬರ್ತಡೆ ಪಾರ್ಟಿಗೆ ಮ್ಯಾಂಚೆಸ್ಟರ್ ಸಿಟಿ ಮತ್ತು ಇಂಗ್ಲೆಂಡ್ ಪುಟ್ಬಾಲ್ ತಂಡದ ಆಟಗಾರ ರಹೀಮ್ ಸ್ಟರ್ಲಿಂಗ್, ಬೇಯರ್ ಲೆವರ್ಕುಸೆನ್ ತಂಡದ ಲಿಯಾನ್ ಬೈಲಿ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಕೂಡಾ ಭಾಗವಹಿಸಿದ್ದರು. ಇವರೆಲ್ಲ ನೃತ್ಯ ಮಾಡುತ್ತಿರುವುದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಿದ್ದವು. ಇದೀಗ ಬೋಲ್ಟ್ ಗೆ ಕೋವಿಡ್ ಪಾಸಿಟಿವ್ ಆಗಿರುವ ಕಾರಣ ಕ್ರಿಸ್ ಗೇಲ್ ಸೇರಿದಂತೆ ಎಲ್ಲ ಪಾರ್ಟಿಯಲ್ಲಿ ಭಾಗವಹಿಸಿದ್ದ ಎಲ್ಲ ಅತಿಥಿಗಳಿಗೂ ಆತಂಕ ಶುರುವಾಗಿದೆ. ಮುಂಬರುವ ಐಪಿಎಲ್ನಲ್ಲಿ ಗೇಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಲಿದ್ದಾರೆ.