ETV Bharat / sports

ಯೋಧ ವಿರುದ್ಧ ಸಿದ್ಧಾರ್ಥ್​ ದೇಸಾಯಿ ಭರ್ಜರಿ ರೈಡಿಂಗ್.. ಸೋಲುತ್ತಿದ್ದ ಪಂದ್ಯ ಗೆದ್ದ ಟೈಟನ್ಸ್​..

ನೋಯ್ಡಾದ ಶಹೀದ್​ ವಿಜಯ್​ಸಿಂಗ್​ ಪಥಿಕ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಪ್ರೋ ಕಬಡ್ಡಿ ಲೀಗ್​ನ 129ನೇ ಪಂದ್ಯದಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿರುವ ತೆಲುಗು ಟೈಟನ್ಸ್​ ಬಲಿಷ್ಠ ಯುಪಿ ಯೋಧ ತಂಡವನ್ನು 41-36ರಲ್ಲಿ ಮಣಿಸಿತು.

UP Yoddha vs Telugu Titans
author img

By

Published : Oct 9, 2019, 11:23 PM IST

ಗ್ರೇಟರ್​ ನೋಯ್ಡಾ: ಪ್ರೋ ಕಬಡ್ಡಿ ಲೀಗ್​ನ 7 ಸೀಸನ್​ನಲ್ಲಿ ಕೊನೆಯ ಪಂದ್ಯವಾಡಿದ ತೆಲುಗು ಟೈಟನ್ಸ್​ ಬಲಿಷ್ಠ ಯುಪಿ ಯೋದ ತಂಡವನ್ನು ಬಗ್ಗುಬಡಿದು ಗೆಲುವಿನ ಮೂಲಕ ಟೂರ್ನಿಗೆ ಗುಡ್​ ಬೈ ಹೇಳಿದೆ.

ನೋಯ್ಡಾದ ಶಹೀದ್​ ವಿಜಯ್​ಸಿಂಗ್​ ಪಥಿಕ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಪ್ರೋ ಕಬಡ್ಡಿ ಲೀಗ್​ನ 129ನೇ ಪಂದ್ಯದಲ್ಲಿ ಕೊನೆಯಿಂದ 2ನೇ ಸ್ಥಾನದಲ್ಲಿರುವ ತೆಲುಗು ಟೈಟನ್ಸ್​ ಬಲಿಷ್ಠ ಯುಪಿ ಯೋಧ ತಂಡವನ್ನು 41-36ರಲ್ಲಿ ಮಣಿಸಿತು.

ಮೊದಲಾರ್ಧದಲ್ಲಿ ಯೋಧ 20-14ರಲ್ಲಿ ಮುನ್ನಡೆ ಸಾಧಿಸಿತ್ತು. ಅಲ್ಲದೆ ದ್ವಿತೀಯಾರ್ಧದ 12ನೇ ನಿಮಿಷದಲ್ಲೂ 32-18ರಲ್ಲಿ ಮುನ್ನಡೆಯಲ್ಲೆ ಇತ್ತು. ಆದರೆ, ಕೊನೆಯ 8 ನಿಮಿಷ ಆಟದಲ್ಲಿ ಸಿದ್ದಾರ್ಥ್​ ದೇಸಾಯಿಯ ಆರ್ಭಟಕ್ಕೆ ನಲುಗಿ ಪಂದ್ಯವನ್ನು ಕಳೆದುಕೊಂಡಿತು.

ಅದ್ಭುತ ರೈಡಿಂಗ್​ ನಡೆಸಿದ ಸಿದ್ದಾರ್ಥ್​ ದೇಸಾಯಿ 15 ಅಂಕ ಸಂಪಾದಿಸಿ ಟಾಪ್​ ರೈಡರ್​ ಎನಿಸಿಕೊಂಡರು. ಫರಾದ್​ ಮಿಲಘರ್ದನ್​ 4 ಡಿಫೆಂಡರ್​ಗಳಾದ ಕೃಷ್ಣ ಮದಾನೆ 4, ಅಂಕಿತ್ ಬೆನಿವಾಲ್​ 3, ರಾಕೇಶ್​ ಗೌಡ 3, ಸಿ ಅರುಣ್​ 2 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಯೋಧ ತಂಡದ ಪರ ಶ್ರೀಕಾಂತ್​ ಜಾಧವ್​ 8, ರಿಷಾಂಕ್​ ದೇವಾಡಿಗ 8, ಮೋನು ಗೋಯಟ್​ 4, ಡಿಫೆಂಡರ್​ ಸುಮಿತ್​ 5, ನಿತೇಶ್​ ಕುಮಾರ್​ 4 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.