ಚೆನ್ನೈ (ತಮಿಳುನಾಡು): ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದು, ಇಂದು ಫೈನಲ್‌ನಲ್ಲಿ ಮಲೇಷ್ಯಾವನ್ನು ಎದುರಿಸಲಿದೆ. ಸೋಲಿಲ್ಲದ ಸರದಾರನಾಗಿ ಫೈನಲ್‌ಗೆ ಟೀಮ್ ಇಂಡಿಯಾ ಲಗ್ಗೆ ಇಟ್ಟಿದೆ. 5ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ ತಂಡ ನಾಲ್ಕನೇ ಪ್ರಶಸ್ತಿ ಗೆಲುವಿಗೆ ಎದುರು ನೋಡುತ್ತಿದೆ.
ಭಾರತ ಇದುವರೆಗೆ ಟೂರ್ನಿಯಲ್ಲಿ ಅಜೇಯವಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರೌಂಡ್ ರಾಬಿನ್ ಸುತ್ತಿನಲ್ಲಿ ಚೀನಾ, ಮಲೇಷ್ಯಾ, ದಕ್ಷಿಣ ಕೊರಿಯಾ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಭಾರತ ಜಪಾನ್ ವಿರುದ್ಧ 1-1 ರಿಂದ ಡ್ರಾ ಮಾಡಿಕೊಂಡರು. ಸೆಮಿಸ್‌ನಲ್ಲಿ ಜಪಾನ್ ತಂಡವನ್ನು 5-0 ಅಂತರದಿಂದ ಸೋಲಿಸಿ ಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.
-
Two nations on the cusp of greatness will battle it out to determine the Champion of Champions in the Hero Asian Champions Trophy Chennai 2023.
— Hockey India (@TheHockeyIndia) August 12, 2023 " class="align-text-top noRightClick twitterSection" data="
🏟️ Mayor Radhakrishnan Hockey Stadium
⏰ 12th August 2023, 6:00 PM IST onwards.
📺 Catch all the action LIVE on Star Sports First,… pic.twitter.com/lDMNqWD57y
">Two nations on the cusp of greatness will battle it out to determine the Champion of Champions in the Hero Asian Champions Trophy Chennai 2023.
— Hockey India (@TheHockeyIndia) August 12, 2023
🏟️ Mayor Radhakrishnan Hockey Stadium
⏰ 12th August 2023, 6:00 PM IST onwards.
📺 Catch all the action LIVE on Star Sports First,… pic.twitter.com/lDMNqWD57yTwo nations on the cusp of greatness will battle it out to determine the Champion of Champions in the Hero Asian Champions Trophy Chennai 2023.
— Hockey India (@TheHockeyIndia) August 12, 2023
🏟️ Mayor Radhakrishnan Hockey Stadium
⏰ 12th August 2023, 6:00 PM IST onwards.
📺 Catch all the action LIVE on Star Sports First,… pic.twitter.com/lDMNqWD57y
ಒಂಬತ್ತನೇ ಶ್ರೇಯಾಂಕದ ತಂಡವಾದ ಮಲೇಷ್ಯಾ ರೌಂಡ್ ರಾಬಿನ್ ಸುತ್ತಿನಲ್ಲಿ ಭಾರತದ ವಿರುದ್ಧ ಮಾತ್ರ ಸೋಲು ಕಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಸೆಮಿಸ್‌ನಲ್ಲಿ ಅವರು ಹಾಲಿ ಚಾಂಪಿಯನ್ ಕೊರಿಯಾವನ್ನು 6-2 ಅಂತರದಿಂದ ಸೋಲಿಸಿ ಮೊದಲ ಫೈನಲ್‌ಗೆ ಮಲೇಷ್ಯಾ ಪ್ರವೇಶ ಪಡೆದುಕೊಂಡಿದೆ. ಈ ಮೊದಲು ಮಲೇಷ್ಯಾ ತಂಡ 5 ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ಪ್ರಸ್ತುತ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಏಳನೇ ಆವೃತ್ತಿ ನಡೆಯುತ್ತಿದ್ದು, ಇದರಲ್ಲಿ ಭಾರತ ಐದನೇ ಬಾರಿಗೆ ಫೈನಲ್ ಪ್ರವೇಶ ಪಡೆಯುತ್ತಿದೆ. ಇದರಲ್ಲಿ ಈಗಾಗಲೇ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2011 ರ ಚೊಚ್ಚಲ ಆವೃತ್ತಿ, 2016 ಮತ್ತು 2018 ರಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. 2018ರಲ್ಲಿ ಭಾರತ ಮತ್ತು ಪಾಕಿಸ್ತಾನ ಜಂಟಿ ಚಾಂಪಿಯನ್ ಆಗಿದ್ದವು. ಇದಾದ ನಂತರ ಭಾರತ ಮತ್ತೆ ಪ್ರಶಸ್ತಿಗೆ ಮುತ್ತಿಡುವ ತವಕದಲ್ಲಿದೆ.
ಭಾರತ ತಂಡದ ನಾಯಕ ಡ್ರ್ಯಾಗ್-ಫ್ಲಿಕ್ ಸ್ಪೆಷಲಿಸ್ಟ್ ಹರ್ಮನ್‌ಪ್ರೀತ್ ಸಿಂಗ್ ಎಂಟು ಗೋಲು ಗಳಿಸಿದ್ದು ಪಂದ್ಯಾವಳಿಯಲ್ಲಿ ಅಂಕ ಕಲೆ ಹಾಕಿದ ಆಟಗಾರ ಆಗಿದ್ದಾರೆ. ಮಲೇಷ್ಯಾ ಪರ ಟಾಪ್ ಸ್ಕೋರರ್ ಫಿರ್ಹಾನ್ ಅಶಾರಿ ನಾಲ್ಕು ಗೋಲು ಗಳಿಸಿದ್ದಾರೆ. ಭಾರತವು ಈ ಪಂದ್ಯಾವಳಿಯಲ್ಲಿ ಆಕ್ರಮಣಕಾರಿ ಮಾಸ್ಟರ್‌ಕ್ಲಾಸ್ ಪ್ರದರ್ಶನ ನೀಡಿದ್ದು, 25 ಗೋಲುಗಳನ್ನು ಬಾರಿಸಿದೆ. ಒಂದು ತಂಡದ ಅತಿ ಹೆಚ್ಚು ಗೋಲು ಇದಾಗಿದೆ. ಅವುಗಳಲ್ಲಿ 15 ಪೆನಾಲ್ಟಿ ಕಾರ್ನರ್‌ಗಳ ಮೂಲಕ ಬಂದಿದೆ. ಮಲೇಷ್ಯಾ 18 ಗೋಲುಗಳನ್ನು ಗಳಿಸಿದ್ದು, ಆರು ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದೆ.
ಎರಡೂ ತಂಡಗಳು ಒಟ್ಟು ನಾಲ್ಕು ಬಾರಿ ಒಲಿಂಪಿಕ್ಸ್‌ನಲ್ಲಿ ಮುಖಾಮುಖಿಯಾಗಿದ್ದು, ಭಾರತ ನಾಲ್ಕರಲ್ಲೂ ಗೆಲುವು ದಾಖಲಿಸಿದೆ. ಏಷ್ಯನ್ ಗೇಮ್ಸ್ನಲ್ಲಿ 12 ಬಾರಿ ಎದುರಾಗಿದ್ದು, ಭಾರತ 10 ಪಂದ್ಯಗಳನ್ನು ಗೆದ್ದು ಒಂದು ಸೋಲು, ಒಂದು ಡ್ರಾ ಸಾಧಿಸಿದೆ. ವಿಶ್ವಕಪ್ನ ನಾಲ್ಕು ಮುಖಾಮುಖಿಯಲ್ಲಿ ಭಾರತ ಮೂರನ್ನು ಗೆದ್ದು ಒಂದರಲ್ಲಿ ಸೋತಿದೆ. ಏಷ್ಯಾಕಪ್‌ನಲ್ಲಿ ಮಲೇಷ್ಯಾ ವಿರುದ್ಧ ಭಾರತ ಒಂಬತ್ತು ಪಂದ್ಯಗಳನ್ನು ಆಡಿದ್ದು, ಏಳರಲ್ಲಿ ಗೆದ್ದು, ಎರಡು ಡ್ರಾ ಮಾಡಿಕೊಂಡಿದೆ.
ಚೆನ್ನೈನ ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ಇಂದು ರಾತ್ರಿ 8:30ಕ್ಕೆ ಪಂದ್ಯ ಆರಂಭವಾಗಲಿದ್ದು, ಸ್ಟಾರ್ಸ್ಪೋರ್ಟ್ ಮತ್ತು ಫ್ಯಾನ್ ಕೋಡ್ನಲ್ಲಿ ನೇರ ಪ್ರಸಾರ ಲಭ್ಯವಿರಲಿದೆ.
ಇದನ್ನೂ ಓದಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪೈನಲ್ಗೆ ಭಾರತ ಲಗ್ಗೆ.. ಇಂದು ಮಲೇಷ್ಯಾ ವಿರುದ್ಧ ಹಣಾಹಣಿ!