ನವದೆಹಲಿ: ಇಂದಿನಿಂದ ಟೋಕಿಯೋ ಒಲಿಂಪಿಕ್ ಆರಂಭವಾಗುತ್ತಿದ್ದು, ಭಾರತೀಯ ಕ್ರೀಡಾಪಟುಗಳು ಈಗಾಗಲೇ ಜಪಾನ್ ತಲುಪಿದ್ದಾರೆ. ಈ ನಡುವೆ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರ ಜೊತೆ ಫಿಸಿಯೋ ಕಳುಹಿಸುವಂತೆ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಗೆ ಮನವಿ ಮಾಡಿದ್ದಾರೆ.
ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಹೌದು ಆಕೆ ಮೌಖಿಕವಾಗಿ ಈ ಮನವಿ ಮಾಡಿಕೊಂಡಿದ್ದಾರೆ. ಐಒಎ ಮತ್ತು ಎಸ್ಎಐಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ಈ ಹಂತದಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಬಹುದು, ನಾವೇನು ಪರಿಹಾರ ನೀಡಬಹುದು ಎಂಬುದನ್ನು ನೋಡುತ್ತಿದ್ದೇವೆ ಎಂದಿದ್ದಾರೆ.
ಇವರಲ್ಲದೇ ಮೂರು ದಿನಗಳ ಹಿಂದೆ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಸಹ ಜಪಾನ್ಗೆ ಅವರ ಪರ್ಸನಲ್ ಕೋಚ್ ಕಳುಹಿಸಿಕೊಡುವಂತೆ ಮನವಿ ಮಾಡಿದ್ದರು. ಆದರೆ, ಈ ಮನವಿ ಕುರಿತು ಈವರೆಗೆ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ. ಆದರೆ, ಫೆಡರೇಶನ್ ಕಾರ್ಯದರ್ಶಿ ಅರುಣ್ ಕುಮಾರ್ ಪ್ರತಿಕ್ರಿಯಿಸಿ, ಮನಿಕಾ ಬಾತ್ರಾ ತಮ್ಮ ಕೋಚ್ ಅವರನ್ನ ಜಪಾನ್ಗೆ ಕಳುಹಿಸಲು ಮನವಿ ಮಾಡಿದ್ದು ನಿಜ ಎಂದಿದ್ದಾರೆ.
ಓದಿ: Tokyo Olympics -2021: ಆರ್ಚರಿ ವಿಭಾಗದಲ್ಲಿ ದೀಪಿಕಾ ಕುಮಾರಿಗೆ 9ನೇ ಸ್ಥಾನ