ಟೋಕಿಯೊ: ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು ಸುರಕ್ಷಿತವಾಗಿ ನಡೆಸಬಹುದೆಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಹೇಳಿದ್ದಾರೆ. ಮುಂದಿನ ವರ್ಷ ಸುರಕ್ಷಿತ ಸ್ಥಳಗಳನ್ನು ಗುರುತಿಸಿ, ಕಡಿಮೆ ಜನ ಸಂದಣಿಯಿರುವ ಸ್ಥಳಗಳಲ್ಲಿ ನಡೆಸಬಹುದು ಎಂದು ಹೇಳಿದ್ದಾರೆ.
ಕೋವಿಡ್ ಲಾಕ್ಡೌನ್ ಬಳಿಕ ಮೊದಲ ಬಾರಿಗೆ ಜಪಾನ್‌ಗೆ ಭೇಟಿ ನೀಡಿರುವ ಐಒಸಿ ಅಧ್ಯಕ್ಷ ಥಾಮಸ್ ಬ್ಯಾಚ್, ಸುರಕ್ಷಿತ ಸ್ಥಳಗಳಲ್ಲಿ ಮುಂಜಾಗ್ರತ ಕ್ರಮವಹಿಸಿ ಕ್ರೀಡಾಕೂಟಗಳನ್ನು ಆಯೋಜಿಸಬಹುದೆಂದು ಹೇಳಿದ್ದಾರೆ.
![Tokyo Olympics to have 'reasonable' crowd size, says IOC chief](https://etvbharatimages.akamaized.net/etvbharat/prod-images/bach_1711newsroom_1605588081_204.jpg)
ಟೋಕಿಯೊ 2020 ಪ್ರಾಜೆಕ್ಟ್ ರಿವ್ಯೂನ ಮೊದಲ ದಿನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾಚ್, ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಹೇಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವ ನಿರೀಕ್ಷೆಯಿದ್ದು ಅದಕ್ಕಾಗಿ, ಸುರಕ್ಷಿತ ಸ್ಥಳಗಳಲ್ಲಿ ಮುಂಜಾಗ್ರತ ಕ್ರಮವಹಿಸಿ ಕ್ರೀಡಾಕೂಟಗಳನ್ನು ಆಯೋಜಿಸಬಹುದು. 2021 ಜುಲೈ 23 ರಿಂದ ಆಗಸ್ಟ್ 8 ರವರಗೆ ಕ್ರೀಡಾಕೂಟ ನಡೆಸಲು ಚಿಂತನೆ ನಡೆದಿದೆ ಎಂದರು.
ಐಒಸಿ ಅಧ್ಯಕ್ಷ ಥಾಮಸ್ ಬಾಚ್, ಪ್ರಧಾನಿ ಯೋಶಿಹಿಡೆ ಸುಗಾ ಮತ್ತು ಟೋಕಿಯೊ ಗವರ್ನರ್ ಕೊಯಿಕೆ ಯುರಿಕೊ ಇಬ್ಬರನ್ನು ಭೇಟಿ ಮಾಡಿ ಕ್ರೀಡಾಕೂಟವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದರು.
ಪ್ರಧಾನ ಮಂತ್ರಿ ಸುಗಾ ಅವರು ಬಾಚ್‌ಗೆ ಭರವಸೆ ನೀಡಿದ್ದು,"ಮುಂದಿನ ಬೇಸಿಗೆಯಲ್ಲಿ ಟೋಕಿಯೊ ಕ್ರೀಡಾಕೂಟವನ್ನು ಯಶಸ್ವಿ ಮತ್ತು ಸುರಕ್ಷಿತವಾಗಿ ನಡೆಸಿ ಕೊಡುತ್ತೇವೆ ಎಂದರು.