ETV Bharat / sports

ಟೋಕಿಯೋ ಒಲಿಂಪಿಕ್ಸ್​​:11 ಕ್ರೀಡಾಪಟುಗಳು ಸೇರಿ 106 ಮಂದಿಗೆ ವಕ್ಕರಿಸಿದ ಕೊರೊನಾ

ಟೋಕಿಯೋ ಒಲಿಂಪಿಕ್​ಗೆ ಸಂಬಂಧಿಸಿದಂತೆ, 11 ಕ್ರೀಡಾಪಟುಗಳು ಸೇರಿದಂತೆ ಒಟ್ಟು 106 ಮಂದಿಗೆ ಮಹಾಮಾರಿ ವಕ್ಕರಿಸಿರುವುದು ದೃಢಪಟ್ಟಿದೆ.

Tokyo Olympics
ಟೋಕಿಯೋ ಒಲಿಂಪಿಕ್ಸ್
author img

By

Published : Jul 23, 2021, 10:23 AM IST

ಟೋಕಿಯೋ(ಜಪಾನ್​): ಟೋಕಿಯೋ ಒಲಿಂಪಿಕ್​ಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಆಟಗಾರರು ಮತ್ತು ಕ್ರೀಡಾ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಈ ನಡುವೆ19 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 106ಕ್ಕೆ ತಲುಪಿದೆ.

ಟೋಕಿಯೊ ಒಲಿಂಪಿಕ್ ಆಯೋಜಕರು ತಮ್ಮ ದೈನಂದಿನ ಕೋವಿಡ್​ ಪ್ರಕರಣಗಳ ಅಪ್ಡೇಟ್​​​ನಲ್ಲಿ, 3 ಕ್ರೀಡಾಪಟುಗಳು, ಆಟಗಳಿಗೆ ಸಂಬಂಧಿಸಿದ 10 ಸಿಬ್ಬಂದಿ, ಮಾಧ್ಯಮ ಮತ್ತು ಈವೆಂಟ್‌ಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ಕೋವಿಡ್​​ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಘೋಷಿಸಿದ್ದಾರೆ.

ಇಂದಿನ ವರದಿ ಪ್ರಕಾರ 11 ಕ್ರೀಡಾಪಟುಗಳು ಸೇರಿದಂತೆ ಒಟ್ಟು 106 ಮಂದಿಗೆ ಮಹಾಮಾರಿ ವಕ್ಕರಿಸಿರುವುದು ದೃಢಪಟ್ಟಿದೆ. ಆರೋಗ್ಯ ಸುರಕ್ಷತೆಯ ನಿಟ್ಟಿನಲ್ಲಿ, ಎಲ್ಲ ಕ್ರಮ ಕೈಗೊಳ್ಳುತ್ತಿದೆಯಾದರೂ ಇಲ್ಲಿಯವರೆಗೆ 106 ಮಂದಿಗೆ ಸೋಂಕು ತಗುಲಿದೆ.

ಸೈಕ್ಲಿಸ್ಟ್ ಮಿಚಲ್ ಷ್ಲೆಗೆಲ್, ಬೀಚ್ ವಾಲಿಬಾಲ್ ಆಟಗಾರರಾದ ಒಂಡ್ರೆಜ್ ಪೆರುಸಿಕ್ ಮತ್ತು ಮಾರ್ಕೆಟಾ ನೌಶ್, ಮತ್ತು ಟೇಬಲ್ ಟೆನಿಸ್ ಆಟಗಾರ ಪಾವೆಲ್ ಸಿರುಸೆಕ್ ಹೀಗೆ 11 ಕ್ರೀಡಾಪಟುಗಳಿಗೆ ಸೋಂಕು ತಗುಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.