ಟೋಕಿಯೋ: ಮಹಿಳೆಯರ 51ಕೆ.ಜಿ ವಿಭಾಗದ ಬಾಕ್ಸಿಂಗ್ನ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ದಿಟ್ಟ ಹೋರಾಟ ನೀಡಿದ ಹೊರತಾಗಿಯೂ ಕೂಡ 38 ವರ್ಷದ ಮೇರಿ ಕೋಮ್ 2-3 ಅಂತರದಿಂದ ಸೋಲು ಕಂಡರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೋಲಿನೊಂದಿಗೆ ತಮ್ಮ ಅಭಿಯಾನ ಮುಗಿಸಿದರು. ಆದರೆ ಇವರ ಪ್ರದರ್ಶನಕ್ಕೆ ಮಾತ್ರ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
A legend's campaign ends today 💔#IND's MC Mary Kom bids the Olympic stage adieu after a 3-2 split decision loss to Rio 2016 bronze medallist, Ingrit Valencia 🥊#StrongerTogether | #UnitedByEmotion | #Boxing | #Tokyo2020 | @MangteC pic.twitter.com/MgjKvWnbRN
— #Tokyo2020 for India (@Tokyo2020hi) July 29, 2021 " class="align-text-top noRightClick twitterSection" data="
">A legend's campaign ends today 💔#IND's MC Mary Kom bids the Olympic stage adieu after a 3-2 split decision loss to Rio 2016 bronze medallist, Ingrit Valencia 🥊#StrongerTogether | #UnitedByEmotion | #Boxing | #Tokyo2020 | @MangteC pic.twitter.com/MgjKvWnbRN
— #Tokyo2020 for India (@Tokyo2020hi) July 29, 2021A legend's campaign ends today 💔#IND's MC Mary Kom bids the Olympic stage adieu after a 3-2 split decision loss to Rio 2016 bronze medallist, Ingrit Valencia 🥊#StrongerTogether | #UnitedByEmotion | #Boxing | #Tokyo2020 | @MangteC pic.twitter.com/MgjKvWnbRN
— #Tokyo2020 for India (@Tokyo2020hi) July 29, 2021
ನಾಲ್ಕು ಮಕ್ಕಳ ತಾಯಿಯಾಗಿರುವ ಮೇರಿ ಕೋಮ್ ಈಗಾಗಲೇ ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿದ್ದಾರೆ. ಈ ಸಲದ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಗೆದ್ದು ಕೊಡುತ್ತಾರೆಂಬ ಇರಾದೆ ಇಟ್ಟುಕೊಳ್ಳಲಾಗಿತ್ತು. ಆದರೆ 16ನೇ ಸುತ್ತಿನ ಹೋರಾಟದಲ್ಲಿ ಕೊಲಂಬಿಯಾದ ಇಂಗ್ರಿಟ್ ವಲೆನ್ಸಿಯಾ ವಿರುದ್ಧ ಕಣಕ್ಕಿಳಿದಿದ್ದ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಕೊನೆ ಕ್ಷಣದಲ್ಲಿ ಸೋಲು ಕಾಣುವ ಮೂಲಕ ನಿರಾಸೆಗೊಳಗಾದರು. ಈ ವೇಳೆ ಎದುರಾಳಿ ಸವಾಲು ಮೆಟ್ಟಿ ನಿಲ್ಲುವಲ್ಲಿ ವಿಫಲಗೊಂಡಿದ್ದರಿಂದ ಮತ್ತೊಮ್ಮೆ ಪದಕ ಗೆಲ್ಲುವ ಕನಸು ಭಗ್ನಗೊಂಡಿತು.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ಭಾರತದ ಭರವಸೆಯ ಬಾಕ್ಸರ್ ಮೇರಿ ಕೋಮ್ಗೆ ನಿರಾಸೆ
ಪಂದ್ಯ ಮುಕ್ತಾಯದ ಬಳಿಕ ಎದುರಾಳಿ ತಂಡದ ಆಟಗಾರ್ತಿಯನ್ನು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿರುವ ಮೇರಿ ಕೋಮ್ ಒಂದು ಕ್ಷಣ ಅತ್ಯಂತ ಭಾವುಕರಾದರು. ಇನ್ನು ಮೇರಿ ಕೋಮ್ 2012ರ ಒಲಿಂಪಿಕ್ಸ್ನಲ್ಲಿ ಮೇರಿ ಕೋಮ್ ಪದಕ ಗೆದ್ದಿದ್ದರು. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಮೇರಿಕೋಮ್ ಉದ್ಘಾಟನಾ ಸಮಾರಂಭದ ವೇಳೆ ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದರು.