ETV Bharat / sports

ಒಲಿಂಪಿಕ್ಸ್​ 2021: ಆರ್ಚರ್​ ಅತನು ದಾಸ್​ಗೆ 31, ತರುಂದೀಪ್ ರಾಯ್​ಗೆ 45, ಪ್ರವೀಣ್ ಜಾಧವ್​ಗೆ 30ನೇ ಸ್ಥಾನ - ಟೋಕಿಯೋ ಒಲಿಂಪಿಕ್ಸ್ ಅಪ್​ಡೇಟ್​

ಪುರುಷರ ಶ್ರೇಯಾಂಕದ ಸುತ್ತಿನ ಮೊದಲಾರ್ಧದಲ್ಲಿ ಭಾರತೀಯ ಪುರುಷ ಬಿಲ್ಲುಗಾರರಾದ ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಂದೀಪ್ ರಾಯ್ ಕ್ರಮವಾಗಿ 656, 653, ಮತ್ತು 652 ಅಂಕಗಳನ್ನು ಗಳಿಸಿದ್ದಾರೆ.

Tokyo Olympics
ಅತನು ದಾಸ್
author img

By

Published : Jul 23, 2021, 12:40 PM IST

ಟೋಕಿಯೊ: ಪುರುಷರ ಶ್ರೇಯಾಂಕದ ಸುತ್ತಿನ ಮೊದಲಾರ್ಧದಲ್ಲಿ ಭಾರತೀಯ ಪುರುಷ ಆರ್ಚರ್​ ಅತನು ದಾಸ್ 329 ಅಂಕಗಳೊಂದಿಗೆ 31 ನೇ ಸ್ಥಾನವನ್ನು ಗಳಿಸಿದರೆ, ಪ್ರವೀಣ್ ಜಾಧವ್ (329 ಅಂಕಗಳು) ಮತ್ತು ತರುಂದೀಪ್ ರಾಯ್​ (323 ಅಂಕಗಳು) 30 ಮತ್ತು 45 ನೇ ಸ್ಥಾನದಲ್ಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ ಇಂದಿನಿಂದ ಆರಂಭವಾಗಲಿದ್ದು, ಮುಂಜಾನೆ ದೀಪಿಕಾ ಕುಮಾರಿ ಭಾರತವನ್ನು ಪ್ರತಿನಿಧಿಸಿ ಆಟವನ್ನು ಆರಂಭಿಸಿದ್ದಾರೆ. ಈ ಬಳಿಕ ಆಟದ ಕೊನೆಯಲ್ಲಿ ಭಾರತೀಯ ಪುರುಷ ಬಿಲ್ಲುಗಾರರಾದ ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಂದೀಪ್ ರಾಯ್ ಕ್ರಮವಾಗಿ 656, 653, ಮತ್ತು 652 ಅಂಕಗಳನ್ನು ಗಳಿಸಿದ್ದಾರೆ.

ಇದನ್ನು ಓದಿ: ಟೋಕಿಯೋ ಒಲಿಂಪಿಕ್ಸ್​​:11 ಕ್ರೀಡಾಪಟುಗಳು ಸೇರಿ 106 ಮಂದಿಗೆ ವಕ್ಕರಿಸಿದ ಕೊರೊನಾ

ದಕ್ಷಿಣ ಕೊರಿಯಾದ ಜೆ ಡಿಯೋಕ್ ಕಿಮ್ 688 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಯುಎಸ್ಎನ ವಿಶ್ವ ದಾಖಲೆ ಹೊಂದಿರುವ ಎಲಿಸನ್ ಬ್ರಾಡಿ 682 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಟೋಕಿಯೊದ ಆರಂಭಿಕ ದಿನದಂದು ಮಹಿಳೆಯರ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ 12 ತೀವ್ರ ಸೆಟ್‌ಗಳ ನಂತರ ಕೊರಿಯಾದ ಜಿನ್‌ಹೈಕ್ ಓ ಮತ್ತು ಕಿಮ್ ವೂಜಿನ್ ಕ್ರಮವಾಗಿ 681 ಮತ್ತು 678 ರನ್ ಗಳಿಸಿದರೆ, ಜಪಾನ್‌ನ ಹಿರೋಕಿ ಮ್ಯುಟೊ 678 ರನ್ ಗಳಿಸಿದರು. ದೀಪಿಕಾ ಕುಮಾರಿ ಮೊದಲಾರ್ಧದ ಕೊನೆಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಆದರೆ ಶೀಘ್ರದಲ್ಲೇ ಮತ್ತೆ ಎರಡನೇ ಸ್ಥಾನಕ್ಕೆ ಜಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.