ETV Bharat / sports

ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್​ಶಿಪ್ : ಫೈನಲ್​ ಪ್ರವೇಶಿಸಿದ 3 ಭಾರತೀಯ ಬಾಕ್ಸರ್ಸ್​ - ದುಬೈ

ಭರತ್​ ಕಿರ್ಗಿಸ್ತಾನದ ಎಮಿರ್​-ಖಾನ್​ ವಿರುದ್ಧ 5-0, ಚಮೋಲಿ ಇಷ್ಟೇ ಅಂಕಗಳ ಅಂತರದಿಂದ ಕಜಕಿಸ್ತಾನದ ಐದರ್​ ಕದಿರ್​ಖಾನ್​ ವಿರುದ್ಧ ಗೆಲುವು ಸಾಧಿಸಿದರು. ಮುಸ್ಕಾನ್​ ಕಜಕಿಸ್ತಾನದ ಯೆಲ್ಯಾನೂರ್​ ತುರ್ಗನೊವಾ ವಿರುದ್ಧ ಸರ್ವಾನುಮತದ ಗೆಲುವನ್ನು ಪಡೆದರು..

Asian junior boxing in Dubai
ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್​ಶಿಪ್
author img

By

Published : Aug 25, 2021, 3:08 PM IST

ದುಬೈ : ಭಾರತದ ಮೂವರು ಬಾಕ್ಸರ್​ಗಳು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್​ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ಪ್ರವೇಶಿಸಿದ್ದಾರೆ. ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ 48 ಕೆಜಿ ವಿಭಾಗದಲ್ಲಿ ರೋಹಿತ್ ಚಮೋಲಿ ಮತ್ತು 81+ ಕೆಜಿ ವಿಭಾಗದಲ್ಲಿ ಭರತ್​ ಜೂನ್​ ಹಾಗೂ ಹುಡುಗಿಯರ ವಿಭಾಗದಲ್ಲಿ ಮುಸ್ಕಾನ್​(46ಕೆಜಿ) ಫೈನಲ್​ ಪ್ರವೇಶಿಸಿದ್ದಾರೆ.

ಭರತ್​ ಕಿರ್ಗಿಸ್ತಾನದ ಎಮಿರ್​-ಖಾನ್​ ವಿರುದ್ಧ 5-0, ಚಮೋಲಿ ಇಷ್ಟೇ ಅಂಕಗಳ ಅಂತರದಿಂದ ಕಜಕಿಸ್ತಾನದ ಐದರ್​ ಕದಿರ್​ಖಾನ್​ ವಿರುದ್ಧ ಗೆಲುವು ಸಾಧಿಸಿದರು. ಮುಸ್ಕಾನ್​ ಕಜಕಿಸ್ತಾನದ ಯೆಲ್ಯಾನೂರ್​ ತುರ್ಗನೊವಾ ವಿರುದ್ಧ ಸರ್ವಾನುಮತದ ಗೆಲುವನ್ನು ಪಡೆದರು. ದೇವಿಕಾ ಘೋರ್ಪಡೆ(50ಕೆಜಿ), ಸುಪ್ರಿಯಾ ರಾವತ್ (66 ಕೆಜಿ) ಮತ್ತು ಆರ್ಜೂ (54 ಕೆಜಿ) 2-3ರಲ್ಲಿ ಉಜ್ಬೇಕಿಸ್ತಾನದ ಬಾಕ್ಸರ್​ಗಳ ವಿರುದ್ಧ ಸೆಮಿಫೈನಲ್​ನಲ್ಲಿ ಸೋಲು ಅನುಭವಿಸಿ ಕಂಚು ಪಡೆದರು.

ಹುಡುಗರ ಸ್ಪರ್ಧೆಯಲ್ಲಿ ಅಂಕುಶ್​(66ಕೆಜಿ) ಕೂಡ ಉಜ್ಬೆಕಿಸ್ತಾನದ ಫಾಜ್ಲಿದ್ದೀನ್​ ಎರ್ಕಿಂಬೋವ್ ವಿರುದ್ಧ ನಾಲ್ಕರ ಘಟ್ಟದಲ್ಲಿ ಸೋಲು ಕಂಡು ಕಂಚಿಗೆ ತೃಪ್ತಿಪಟ್ಟುಕೊಂಡರು. ಈ ಸ್ಪರ್ಧೆಯಲ್ಲಿ ಯೂತ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆಲ್ಲುವ ಸ್ಪರ್ಧಿ 6000 ಅಮೆರಿಕನ್ ಡಾಲರ್​, ಬೆಳ್ಳಿ ಪದಕ ಗೆದ್ದವರಿಗೆ 3000 ಮತ್ತು ಕಂಚು ಗೆದ್ದವರಿಗೆ 1,500 ಡಾಲರ್​ ಬಹುಮಾನ್ ನೀಡಲಾಗುತ್ತದೆ. ಜೂನಿಯರ್​ ಚಾಂಪಿಯನ್​ ವಿಭಾಗದಲ್ಲಿ ಚಿನ್ನಕ್ಕೆ 4000, ಬೆಳ್ಳಿಗೆ 2000 ಮತ್ತು ಕಂಚಿಗೆ 1000 ಡಾಲರ್​ ಬಹುಮಾನ ನೀಡಲಾಗುತ್ತದೆ.

ಇದನ್ನು ಓದಿ:ಏಷ್ಯನ್ ಯೂತ್ ಬಾಕ್ಸಿಂಗ್: ಸೆಮಿಫೈನಲ್​ ತಲುಪಿದ ನಾಲ್ವರು ಭಾರತೀಯ ಬಾಕ್ಸರ್​ಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.