ETV Bharat / sports

ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್​ಶಿಪ್​: ಭಾರತಕ್ಕೆ 3 ಪದಕ ಖಚಿತ ಪಡಿಸಿದ ಯುವ ಬಾಕ್ಸರ್​ಗಳು

author img

By

Published : Aug 21, 2021, 5:06 PM IST

ಚಂಡೀಗಡದ ಚಮೋಲಿ ಸಿರಿಯಾದ ಅಲ್ಹಾಸ್ಸಾನ್​, ಕಡೌಸ್​ ವಿರುದ್ಧ 5-0, ಅಂಕುಶ್​ ಕುವೈತ್​ ಬಾಕ್ಸರ್​ ಬದೇರ್​ ಶೆಹಾಬ್​ ವಿರುದ್ಧ 5-0 ಮತ್ತು ಹರಿಯಾಣದ ಸೈನಿ ಕೂಡ ಮತ್ತೊಬ್ಬ ಕುವೈತ್​ ಬಾಕ್ಸರ್​ ವಿರುದ್ಧ ಜಯ ಸಾಧಿಸಿದರು.

ASBC Asian Youth & Junior Boxing Championships
ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್​ಶಿಪ್​

ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಎಎಸ್​ಬಿಸಿ ಯೂತ್​ ಅಂಡ್​ ಜೂನಿಯರ್​ ಬಾಕ್ಸಿಂಗ್ ಚಾಂಪಿಯನ್​ಶಿಪ್​ನಲ್ಲಿ ಭಾರತದ ಮೂರು ಬಾಕ್ಸರ್​ಗಳು ಸೆಮಿಫೈನಲ್​ ಪ್ರವೇಶಿಸುವ ಮೂಲಕ ಮೂರು ಪದಕ ಖಚಿತ ಪಡಿಸಿದ್ದಾರೆ.

ರೋಹಿತ್​ ಚಮೋಲಿ(48 ಕೆಜಿ), ಅಂಕುಶ್​(66ಕೆಜಿ) ಮತ್ತು ಗೌರವ್​ ಸೈನಿ(70ಕೆಜಿ) ಶನಿವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಚಂಡೀಗಡದ ಚಮೋಲಿ ಸಿರಿಯಾದ ಅಲ್ಹಾಸ್ಸಾನ್​, ಕಡೌಸ್​ ವಿರುದ್ಧ 5-0, ಅಂಕುಶ್​ ಕುವೈತ್​ ಬಾಕ್ಸರ್​ ಬದೇರ್​ ಶೆಹಾಬ್​ ವಿರುದ್ಧ 5-0 ಮತ್ತು ಹರಿಯಾಣದ ಸೈನಿ ಕೂಡ ಮತ್ತೊಬ್ಬ ಕುವೈತ್​ ಬಾಕ್ಸರ್​ ವಿರುದ್ಧ ಜಯ ಸಾಧಿಸಿದರು.

ಆರಂಭಿಕದ ದಿನದಂದು ಜೂನಿಯರ್​ ಬಾಕ್ಸರ್​ಗಳಾದ ಆಶೀಷ್​(54ಕೆಜಿ), ಪ್ರೀತ್​ ಮಲಿಕ್(63ಕೆಜಿ) ಮತ್ತು ಅನ್ಶುಲ್(57ಕೆಜಿ) ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಜಯಬೇರಿ ಬಾರಿಸಿದ್ದರು.

67 ಕೆಜಿ ವಿಭಾಗದಲ್ಲಿ ದಕ್ಷ್ ಸಿಂಗ್​ , 75 ಕೆಜಿ ವಿಭಾಗದಲ್ಲಿ ದೀಪಕ್​, 86 ಕೆಜಿ ವಿಭಾಗದಲ್ಲಿ ಆದಿತ್ಯ ಜಂಘು, 92 ಕೆಜಿ ವಿಭಾಗದಲ್ಲಿ ಅಭಿಮನ್ಯು ಲೌರಾ ಹಾಗೂ 2021ರ ಯೂತ್​ ಚಾಂಪಿಯನ್​ಶಿಪ್​ ಕಂಚಿನ ಪದಕ ವಿಜೇತ ಬಿಶ್ವಾಮಿತ್ರಾ ಚೊಂಗ್ಥಾಮ್ ಶನಿವಾರ ಕಣಕ್ಕಿಳಿಯಲಿದ್ದಾರೆ.

ಆದರೆ, ಯಶವರ್ಧನ್​ ಸಿಂಗ್(60ಕೆಜಿ), ಉಸ್ಮಾನ್ ಮೊಹ್ಮದ್ ಸುಲ್ತಾನ್​(56ಕೆಜಿ), ನಕ್ಷ್​ ಬೆನಿವಾಲ್​(75ಕೆಜಿ) ಮತ್ತು ರಿಷಭ್​ ಸಿಂಗ್​(81ಕೆಜಿ) ತಮ್ಮ ಮೊದಲ ಸುತ್ತಿನ ಬೌಟ್​ನಲ್ಲೇ ಸೋಲು ಕಂಡರು.

ಈ ಸ್ಪರ್ಧೆಯಲ್ಲಿ ವಯಸ್ಸಿನ ಆಧಾರಿತ ಗುಂಪಿನಲ್ಲಿ ಚಿನ್ನ ಗೆಲ್ಲುವ ಸ್ಪರ್ಧಿ 6000 ಅಮೆರಿಕನ್ ಡಾಲರ್​, ಬೆಳ್ಳಿ ಪದಕ ಗೆದ್ದವರಿಗೆ 3000 ಮತ್ತು ಕಂಚು ಗೆದ್ದವರಿಗೆ 1,500 ಡಾಲರ್​ ಬಹುಮಾನ್ ನೀಡಲಾಗುತ್ತದೆ.

ಜೂನಿಯರ್​ ಚಾಂಪಿಯನ್​ ವಿಭಾಗದಲ್ಲಿ ಚಿನ್ನಕ್ಕೆ 4000 , ಬೆಳ್ಳಿಗೆ 2000 ಮತ್ತು ಕಂಚಿಗೆ 1000 ಡಾಲರ್​ ಬಹುಮಾನ ನೀಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.