ETV Bharat / sports

ಅರ್ಜೆಂಟೀನಾ ಸೋತಾಗ ಕಣ್ಣೀರು ಹಾಕಿದ್ದ ಅಭಿಮಾನಿಗೆ ಕತಾರ್​ಗೆ ಹಾರುವ ಭಾಗ್ಯ! - ಲಿಯೋನೆಲ್​ ಮೆಸ್ಸಿಯ ಅರ್ಜೆಂಟೀನಾ ತಂಡ

ಫಿಫಾ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಸೋಲು ಕಂಡಾಗ ಕೇರಳದ ಪುಟ್ಟ ಅಭಿಮಾನಿ ಕಣ್ಣೀರು ಹಾಕಿದ ವಿಡಿಯೋ ಸಂಚಲನ ಉಂಟು ಮಾಡಿತ್ತು. ಈಗ ಅದೇ ಅಭಿಮಾನಿ ಕತಾರ್​ಗೆ ಹಾರಿ ತಂಡವನ್ನು ಚಿಯರ್​ ಮಾಡಲಿದ್ದಾರೆ.

Kerala boy to fly to Qatar meet Messi
ಅರ್ಜೆಂಟೀನಾ ಸೋತಾಗ ಕಣ್ಣೀರು ಹಾಕಿದ್ದ ಅಭಿಮಾನಿ
author img

By

Published : Nov 29, 2022, 9:23 PM IST

ಕಾಸರಗೋಡು(ಕೇರಳ): ಅಭಿಮಾನವೇ ಹಾಗೆ. ನೆಚ್ಚಿನ ಆಟಗಾರ, ತಂಡ ಸೋತಲ್ಲಿ ಮನಸ್ಸು ನೊಂದು ಕಣ್ಣೀರಾಗುತ್ತದೆ. ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನಲ್ಲಿ ಮೊದಲ ಪಂದ್ಯದಲ್ಲೇ ವಿಶ್ವಶ್ರೇಷ್ಠ ತಂಡವಾದ ಅರ್ಜೆಂಟೀನಾ, ಸೌದಿ ಅರೇಬಿಯಾ ವಿರುದ್ಧ ಸೋತಿದ್ದಕ್ಕೆ ಕೇರಳದ ಪುಟ್ಟ ಅಭಿಮಾನಿ ಕಣ್ಣೀರು ಹಾಕಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಆ ಅಭಿಮಾನಿ ನೇರವಾಗಿ ತನ್ನ ಕನಸಿನ ತಂಡದ ಆಟಗಾರರನ್ನು ಭೇಟಿಯಾಗಲು ಕತಾರ್​ಗೆ ಹಾರಲಿದ್ದಾನೆ.

ಕಾಸರಗೋಡಿನ 13 ವರ್ಷದ ಬಾಲಕ ನಿಬ್ರಾಸ್​, ವಿಶ್ವಶ್ರೇಷ್ಠ ಫುಟ್ಬಾಲಿಗ ಲಿಯೋನೆಲ್​ ಮೆಸ್ಸಿಯ ಅರ್ಜೆಂಟೀನಾ ತಂಡದ ಕಟ್ಟಾಭಿಮಾನಿ. ವಿಶ್ವಕಪ್​ನ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಅರ್ಜೆಂಟೀನಾ ಸೋಲುಂಡಿದ್ದು ವಿಶ್ವವೇ ಅಚ್ಚರಿಗೊಳಗಾಗಿತ್ತು. ಇದು ತಂಡದ ಅಭಿಮಾನಿಗಳಿಗೆ ಇನ್ನಿಲ್ಲದ ಶಾಕ್​ ನೀಡಿತ್ತು. ಕೇರಳದ ಕಾಸರಗೋಡಿನ ನಿಬ್ರಾಸ್​ ಕೂಡ ಸೋಲನ್ನು ಅರಗಿಸಿಕೊಳ್ಳಲಾಗದೇ ಕಣ್ಣೀರು ಹಾಕಿದ್ದ. ಮುಂದಿನ ಪಂದ್ಯಗಳಲ್ಲಿ ತಂಡ ಗೆಲ್ಲಲಿದೆ. ಮೆಸ್ಸಿ ಹ್ಯಾಟ್ರಿಕ್​ ಗೋಲು ಬಾರಿಸಲಿದ್ದಾನೆ ಎಂಬ ನಿಬ್ರಾಸ್​ ಕಣ್ಣೀರಿನ ಅಭಿಮಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ನಿಬ್ರಾಸ್​ಗೆ ಒಲಿದ ಕತಾರ್​ ಟೂರ್​: ಇದು ಪಯ್ಯನ್ನೂರ್​ ಮೂಲದ ಸ್ಮಾರ್ಟ್​ ಟ್ರಾವೆಲ್​ ಏಜೆನ್ಸಿಯ ಮುಖ್ಯಸ್ಥರ ಗಮನ ಸೆಳೆದಿತ್ತು. ಬಾಲಕಾಭಿಮಾನಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದ್ದಲ್ಲದೇ, ಆತನ ನೆಚ್ಚಿನ ತಂಡದ ಆಟವನ್ನು ಮೈದಾನದಲ್ಲೇ ವೀಕ್ಷಿಸಲು ವ್ಯವಸ್ಥೆ ಮಾಡಿದೆ. ಅಲ್ಲದೇ, ಅರ್ಜೆಂಟೀನಾ ತಂಡದ ಎಲ್ಲ ಆಟಗಾರರ ಭೇಟಿ ಮಾಡಿಸಲೂ ಏಜೆನ್ಸಿ ಅವಕಾಶ ಮಾಡಿಕೊಟ್ಟಿದೆ.

ಇದು ಪುಟ್ಟ ಅಭಿಮಾನಿಯ ಸಂತಸಕ್ಕೆ ಪಾರವೇ ಇಲ್ಲ ಎಂಬಂತೆ ಮಾಡಿದೆ. ತನ್ನನ್ನು ಕತಾರ್​ಗೆ ಕಳುಹಿಸಲು ಸ್ಮಾರ್ಟ್​ ಟ್ರಾವೆಲ್​ ಮುಂದಾಗಿದೆ. ಇದು ಸಂತಸದ ವಿಚಾರ. ನನ್ನ ಕನಸಿನ ಆಟಗಾರ ಲಿಯೋನೆಲ್​ ಮೆಸ್ಸಿಯನ್ನು ಹತ್ತಿರದಿಂದ ಭೇಟಿಯಾಗುವ ಕನಸು ಈಡೇರುವ ಸಮಯ ಬಂದಿದೆ ಎಂದು ನಿಬ್ರಾಸ್​ ಈಟಿವಿ ಭಾರತಕ್ಕೆ ಹೇಳಿಕೆ ನೀಡಿದ್ದಾನೆ. ವಿಶ್ವಕಪ್​ನಲ್ಲಿ ಅರ್ಜೆಂಟೀನಾ ತಂಡ ಫೈನಲ್​ಗೆ ಬಂದರೆ ಬಾಲಕ ನಿಬ್ರಾಸ್​ ಕೇರಳದ ಅಭಿಮಾನಿಗಳ ಪರವಾಗಿ ತಂಡವನ್ನು ಮೈದಾನದಲ್ಲಿ ಹುರಿದುಂಬಿಸಲಿದ್ದಾನೆ ಎಂದು ಸ್ಮಾರ್ಟ್​ ಟ್ರಾವೆಲ್​ ಏಜೆನ್ಸಿ ಹೇಳಿದೆ.

ಓದಿ: ಉರುಗ್ವೆ ವಿರುದ್ಧ ಗೆದ್ದು ಬೀಗಿದ ಪೋರ್ಚುಗಲ್​; ರೊನಾಲ್ಡೋ ತಂಡಕ್ಕೆ 2-0 ಅಂತರದ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.