ಚೆನ್ನೈ (ತಮಿಳುನಾಡು) : 4ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದ ಹಾಕಿ ಟೀಂ ಇಂಡಿಯಾವನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶ್ಲಾಘಿಸಿದ್ದಾರೆ. ಜೊತೆಗೆ ವಿಜೇತ ತಂಡಕ್ಕೆ 1.1 ಕೋಟಿ ರೂಪಾಯಿ ನಗದು ಬಹುಮಾನವನ್ನೂ ಘೋಷಿಸಿದ್ದಾರೆ.
ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡವು ಮಲೇಷ್ಯಾವನ್ನು 4-3 ಗೋಲುಗಳ ಅಂತರದಿಂದ ಸೋಲಿಸಿ ಇತಿಹಾಸ ಬರೆಯಿತು. ಟೀಂ ಇಂಡಿಯಾಗೆ ಪ್ರಶಸ್ತಿ ವಿತರಿಸಿದ ಸಿಎಂ ಸ್ಟಾಲಿನ್ ಅವರು ಬಳಿಕ Xನಲ್ಲಿ (ಹಿಂದಿನ ಟ್ವಿಟರ್) ಅಭಿನಂದಿಸಿ, ಪ್ರಶಸ್ತಿ ಘೋಷಣೆ ಮಾಡಿದ್ದಾರೆ.
ಅದ್ಭುತ ಹೋರಾಟದ ಮೂಲಕ 4ನೇ ಏಷ್ಯಾ ಚಾಂಪಿಯನ್ಶಿಪ್ ಪ್ರಶಸ್ತಿ ಜಯಿಸಿದ ಭಾರತ ಹಾಕಿ ತಂಡಕ್ಕೆ ಅಭಿನಂದನೆಗಳು. ಇದೊಂದು ಗಮನಾರ್ಹ, ಸಾಹಸ ಮತ್ತು ಸಮರ್ಪಣಾ ಭಾವದ ಪಂದ್ಯವಾಗಿತ್ತು. ಕ್ರೀಡೆ ಮತ್ತು ಪ್ರೀತಿಗೆ ಹೆಸರಾದ ಚೆನ್ನೈನಲ್ಲಿ ಟೂರ್ನಿ ಯಶ ಕಂಡಿದ್ದು, ಸಂತಸ ತಂದಿದೆ. ಟೂರ್ನಿಯನ್ನು ಚೆನ್ನೈನಲ್ಲಿ ಆಯೋಜಿಸಲು ಅನುವು ಮಾಡಿಕೊಟ್ಟ ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಧನ್ಯವಾದಗಳು. ಕ್ರೀಡಾಕೂಟ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸಚಿವರು, ಕ್ರೀಡಾ ಇಲಾಖೆ ಮತ್ತು ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ.
-
Congratulations to #TeamIndia on clinching their 4th #AsianChampionsTrophy title with a fighting comeback!
— M.K.Stalin (@mkstalin) August 12, 2023 " class="align-text-top noRightClick twitterSection" data="
A remarkable feat that showcases their dedication and prowess.#Chennai, known for its sports-loving spirit, has been a splendid host. Grateful to Hon'ble @ianuragthakur… pic.twitter.com/fel9aqLIAt
">Congratulations to #TeamIndia on clinching their 4th #AsianChampionsTrophy title with a fighting comeback!
— M.K.Stalin (@mkstalin) August 12, 2023
A remarkable feat that showcases their dedication and prowess.#Chennai, known for its sports-loving spirit, has been a splendid host. Grateful to Hon'ble @ianuragthakur… pic.twitter.com/fel9aqLIAtCongratulations to #TeamIndia on clinching their 4th #AsianChampionsTrophy title with a fighting comeback!
— M.K.Stalin (@mkstalin) August 12, 2023
A remarkable feat that showcases their dedication and prowess.#Chennai, known for its sports-loving spirit, has been a splendid host. Grateful to Hon'ble @ianuragthakur… pic.twitter.com/fel9aqLIAt
ಕೋಟಿ ಪ್ರಶಸ್ತಿ ಘೋಷಣೆ: ಇದೇ ವೇಳೆ ಕೆಚ್ಚೆದೆಯ ಹೋರಾಟ ನಡೆಸಿ ಕೊನೆಯಲ್ಲಿ ಗೆಲುವು ತನ್ನದಾಗಿಸಿಕೊಂಡ ಹಾಕಿ ಟೀಂ ಇಂಡಿಯಾವನ್ನು ಸಿಎಂ ಸ್ಟಾಲಿನ್ ಬಹುವಾಗಿ ಮೆಚ್ಚಿದ್ದಾರೆ. ಹೋರಾಟ ಮನೋಭಾವದ ತಂಡಕ್ಕೆ ಸರ್ಕಾರದಿಂದ 1.1 ಕೋಟಿ ಬಹುಮಾನ ನೀಡಲಾಗುವುದು ಎಂದು Xನಲ್ಲಿ ಘೋಷಿಸಿದ್ದಾರೆ.
ಹಾಕಿ ಇಂಡಿಯಾದಿಂದ ಬಹುಮಾನ: ಇತ್ತ ಹಾಕಿ ಇಂಡಿಯಾ ಕೂಡ ಆಟಗಾರರು ಮತ್ತು ಸಿಬ್ಬಂದಿಗೆ ಬಹುಮಾನ ಘೋಷಿಸಿದೆ. ಏಷ್ಯಾ ಚಾಂಪಿಯನ್ಶಿಪ್ ಗೆಲುವಿಗಾಗಿ ಭಾರತದ ಪುರುಷರ ಹಾಕಿ ತಂಡದ ಪ್ರತಿಯೊಬ್ಬ ಸದಸ್ಯನಿಗೆ 3 ಲಕ್ಷ ಮತ್ತು ಸಹಾಯಕ ಸಿಬ್ಬಂದಿಗೆ 1.50 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹಾಕಿ ಇಂಡಿಯಾ ಅಧ್ಯಕ್ಷ ಡಾ.ದಿಲೀಪ್ ಟಿರ್ಕಿ ಪ್ರಕಟಿಸಿದರು.
ಮಾಜಿ ಹಾಕಿ ಆಟಗಾರನಾಗಿ ನನಗೆ ಈ ಗೆಲುವು ಎಂದಿಗೂ ಸ್ಮರಣೀಯ. ಮೈದಾನದಲ್ಲಿ ಕೇವಲ ಗೆಲುವಿಗಿಂತ ರೋಚಕ ವಿಕ್ಟರಿ ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ. ಇದು ನಮ್ಮ ಉತ್ಸಾಹವನ್ನು ಹೆಚ್ಚಿಸುವ, ಸಮರ್ಪಣಾ ಮನೋಭಾವ ಮತ್ತು ಟೀಮ್ ವರ್ಕ್‌ಗೆ ಸಾಕ್ಷಿಯಾಗಿದೆ. ಚೆನ್ನೈನಲ್ಲಿ ನಡೆದ ರೋಚಕ ಫೈನಲ್ನಲ್ಲಿ ಹಾಕಿ ಇಂಡಿಯಾದ ಹೋರಾಟ ಮರೆಯಲಾಗದು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ACT victory: ಹಾಕಿ ಇಂಡಿಯಾಗೆ ಪ್ರಧಾನಿ ಮೋದಿ, ಕ್ರೀಡಾ ಸಚಿವರ ಬಹುಪರಾಕ್, ಪಾಕಿಸ್ತಾನ ದಾಖಲೆ ಉಡೀಸ್