ETV Bharat / sports

ಇತಿಹಾಸ ಸೃಷ್ಟಿಸಿದ ಸೂರಜ್​​: ವಿಶ್ವ ಚಾಂಪಿಯನ್​​ಶಿಪ್​​ನಲ್ಲಿ ಭಾರತಕ್ಕೆ ಚಿನ್ನ ಗೆದ್ದ 16ರ ಪೋರ

author img

By

Published : Jul 28, 2022, 3:06 PM IST

ಗ್ರಿಕೋ – ರೋಮನ್ ಅಂಡರ್ 17 ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತದ ಸೂರಜ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಬರೋಬ್ಬರಿ 32 ವರ್ಷಗಳ ಬಳಿಕ ಈ ಸಾಧನೆ ಮಾಡಿ ಹೊಸ ಇತಿಹಾಸ ರಚಿಸಿದ್ದಾರೆ.

Suraj Vashisht
Suraj Vashisht

ರೋಮ್​​(ಇಟಲಿ): ಅಂಡರ್​​-17 ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಭಾರತದ ಯುವ ಕುಸ್ತಿಪಟು ಸೂರಜ್​​​ ಐತಿಹಾಸಿಕ ಸಾಧನೆ ಮಾಡಿದ್ದಾರೆ. 55 ಕೆಜಿ ವೈಟ್​ ಕ್ಲಾಸ್​ ಕುಸ್ತಿ ವಿಭಾಗದಲ್ಲಿ ಭಾರತದ ಸೂರಜ್​​ ವಸಿಷ್ಟ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಬರೋಬ್ಬರಿ 32 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಾರೆ.

Suraj Vashisht
ವಿಶ್ವ ಚಾಂಪಿಯನ್​​ಶಿಪ್​​ನಲ್ಲಿ ಭಾರತಕ್ಕೆ ಚಿನ್ನ ಗೆದ್ದ 16ರ ಪೋರ

ಗ್ರಿಕೋ – ರೋಮನ್​ U-17 ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸೂರಜ್ ವಸಿಷ್ಠ್ ಈ ಸಾಧನೆ ಮಾಡಿದ್ದಾರೆ. 16 ವರ್ಷದ ಸೂರಜ್ 55kg ವೈಟ್ ಕ್ಲಾಸ್ ವಿಭಾಗದಲ್ಲಿ ಯುರೋಪಿಯನ್ ಚಾಂಪಿಯನ್ ಫರಿಮಾ ಮುಸ್ತಫೆವ್ ಅವರನ್ನು 11-0 ಅಂತರದಿಂದ ಸೋಲಿಸಿ ವಿಶೇಷ ಸಾಧನೆ ಮಾಡಿ ಮೆರೆದಿದ್ದಾರೆ.

ಈ ಮೂಲಕ ಭಾರತಕ್ಕೆ ಬರೋಬ್ಬರಿ 32 ವರ್ಷಗಳ ಬಳಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಹಿಂದೆ 1990ರಲ್ಲಿ ಭಾರತದ ಪಪ್ಪೂ ಯಾದವ್ ಚಿನ್ನ ಗೆದ್ದಿದ್ದರು. ಇದಾದ ಬಳಿಕ ಭಾಗಿಯಾಗಿದ್ದ ಯಾವುದೇ ಕುಸ್ತಿಪಟು ಫೈನಲ್​ಗೆ ಲಗ್ಗೆ ಹಾಕಿರಲಿಲ್ಲ.

  • SURAJ 🇮🇳 is India's first Greco-Roman U17 world champion in 32 years with his 55kg 🥇 at #WrestleRome

    India's last champion at this level was Pappu YADAV in 1990 pic.twitter.com/kSwWnDPMId

    — United World Wrestling (@wrestling) July 26, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: IND vs WI 3rd ODI: ವಿಂಡೀಸ್ ವಿರುದ್ಧದ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ಹರಿಯಾಣದ ರೋಹ್ಟಕ್ ಜಿಲ್ಲೆಯ ರಿತಾಲ್​ನ ಸೂರಜ್​ ಫೈನಲ್​ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆರಂಭದಿಂದಲೂ ಎದುರಾಳಿ ಮೇಲೆ ಹಿಡಿತ ಸಾಧಿಸಿ, ಯಾವುದೇ ಪಾಯಿಂಟ್ ಬಿಟ್ಟುಕೊಡಲಿಲ್ಲ. ಹೀಗಾಗಿ, ಎರಡು ಸುತ್ತಿನಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ. ಅಂಡರ್​​ 19 ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿರುವ ಸೂರಜ್​​ ಮಾತನಾಡಿ, ಸಿನಿಯರ್​ ವಿಶ್ವ ಟೈಟನ್​ ಗೆಲ್ಲುವ ಕನಸು ಸಹ ಇದೆ ಎಂದು ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.