ETV Bharat / sports

Intercontinental Cup 2023: ವನವಾಟು ಮಣಿಸಿದ ಭಾರತ.. ಗೋಲ್​ ಗಳಿಸಿ ಶುಭ ಸುದ್ದಿ ಹಂಚಿಕೊಂಡ ಚೆಟ್ರಿ - ಅಂತಾರಾಷ್ಟ್ರೀಯ ಫುಟ್​ಬಾಲ್​

ಇಂಟರ್​ ಕಾಂಟಿನೆಂಟಲ್ ಕಪ್‌​ನಲ್ಲಿ ಗೋಲ್​ ಗಳಿಸಿ ಸಂಭ್ರಮಿಸುವಾಗ ಸುನಿಲ್​ ಚೆಟ್ರಿ ತಾವು ತಂದೆಯಾಗುತ್ತಿರುವ ಶುಭ ಸಮಾಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ​

Sunil Chhetri
ಸುನೀಲ್​ ಚೆಟ್ರಿ
author img

By

Published : Jun 13, 2023, 5:06 PM IST

ಭುವನೇಶ್ವರ್ (ಒಡಿಶಾ): ಭಾರತ ಫುಟ್ಬಾಲ್​ ತಂಡದ ನಾಯಕ ಸುನೀಲ್​ ಚೆಟ್ರಿ ತಾನು ತಂದೆ ಆಗಲಿರುವ ವಿಚಾರವನ್ನು ವಿಭಿನ್ನವಾಗಿ ತಿಳಿಸಿದ್ದಾರೆ. ಅವರು ತಿಳಿಸಿರುವ ವಿಧಾನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಇಂಟರ್​ ಕಾಂಟಿನೆಂಟಲ್ ಕಪ್‌ 2023 ನಡೆಯುತ್ತಿರುವ ವೇಳೆ ಗೋಲ್​ ಗಳಿಸಿದ ಚೆಟ್ರಿ ವಿಭಿನ್ನ ಸಂಭ್ರಮದ ಮೂಲಕ ಪತ್ನಿಯ ಗರ್ಭಾವಸ್ಥೆಯ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ನಡೆಯುತ್ತಿರುವ ಇಂಟರ್‌ ಕಾಂಟಿನೆಂಟಲ್ ಕಪ್‌ನಲ್ಲಿ ಭಾರತವು ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಆಟದ 81 ನೇ ನಿಮಿಷದಲ್ಲಿ ಚೆಟ್ರಿಯ ಮ್ಯಾಜಿಕ್‌ ಗೋಲ್​ನಿಂದ ವನವಾಟು ವಿರುದ್ಧ 1-0 ಅಂತರದಿಂದ ಗೆಲುವು ದಾಖಲಿಸಿದೆ.

ಈ ಗೆಲುವು ಭಾರತದ ಅಭಿಮಾನಿಗಳಿಗೆ ಸಂತಸವನ್ನು ಕೊಟ್ಟರೆ, ಅವರ ಸಂಭ್ರಮಾಚರಣೆಯೂ ಅಭಿಮಾನಿಗಳ ಹೃದಯ ಗೆದ್ದಿದೆ ಎಂದೇ ಹೇಳಬಹುದು. ಎಡಗಾಲಿನಿಂದ ಒದ್ದ ಚೆಂಡು ನೇರವಾಗಿ ಗೋಲನ್ನು ಪ್ರವೇಶಿಸುತ್ತದೆ. ನಂತರ ಬಾಲ್​ನತ್ತ ಓಡಿಹೋದ ಚೆಟ್ರಿ ಬಾಲ್​ನ್ನು ಕೈಯಲ್ಲಿ ಎತ್ತಿಕೊಂಡು ಟೀಶರ್ಟ್​ನ ಒಳಗೆ ಹಾಕಿ ಹೊಟ್ಟೆಯ ಬಾಗಕ್ಕೆ ಇಟ್ಟುಕೊಂಡರು.

ನಂತರ ಪಂದ್ಯ ವೀಕ್ಷಣೆಗೆ ಬಂದಿದ್ದ ಮಡತಿಯತ್ತ ಕೈ ಬೀಸಿ ಫ್ಲೈಯಿಂಗ್​ ಕಿಸ್ ಕೊಟ್ಟರು. ಇದಕ್ಕೆ ಡಗೌಟ್​ನಲ್ಲಿ ನಿಂತಿದ್ದ ಅವರ ಮಡದಿ ಸಹ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಪಂದ್ಯದ ನಂತರ, ಛೆಟ್ರಿ ಅವರು ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಘೋಷಿಸಿದರು, "ನಾನು ಮತ್ತು ನನ್ನ ಹೆಂಡತಿ ಮಗುವಿನ ನಿರೀಕ್ಷೆಯಲ್ಲಿದ್ದೇವೆ, ನಾನು ಇದನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅಭಿಮಾನಿಗಳ ಅಶೀರ್ವಾದವನ್ನು ಬೇಡುತ್ತೇನೆ" ಎಂದಿದ್ದಾರೆ.

ಛೆಟ್ರಿಯ ಹೊಡೆತವು ಭಾರತವನ್ನು ಇಂಟರ್‌ ಕಾಂಟಿನೆಂಟಲ್ ಕಪ್ 2023ರ ಫೈನಲ್‌ಗೆ ಪ್ರವೇಶ ಪಡೆಯುವಂತೆ ಮಾಡಿದೆ. ಪಂದ್ಯ ಗೋಲು ರಹಿತವಾಗಿ ಡ್ರಾದಲ್ಲಿ ಕೊನೆಗೊಳ್ಳುವ ಸಾಧ್ಯತೆ ಇತ್ತು. ಭಾರತ ಮತ್ತು ವನವಾಟು ನಡುವೆ ತುರುಸಿನ ಹೋರಾಟ 80 ನಿಮಿಷದ ವರೆಗೆ ಏರ್ಪಟ್ಟಿತ್ತು. ಆದರೆ, 81ನೇ ನಿಮಿಷದಲ್ಲಿ ಭಾರತದ ಅನುಭವಿ ಸ್ಟ್ರೈಕರ್‌ ಗೋಲ್​ ಗಳಿಸುವಲ್ಲಿ ಯಶಸ್ವಿಯಾದರು. ಈ ಗೆಲುವು ಭಾರತ ತಂಡವು ಅವರ ತವರು ನೆಲದಲ್ಲಿ ಸತತ ಏಳನೇ ಗೆಲುವನ್ನು ದಾಖಲಿಸಿತು. ಕಳೆದ ಏಳು ಪಂದ್ಯಗಳಲ್ಲಿ ಭಾರತ ಆರು ಪಂದ್ಯಗಳನ್ನು ಗೆದ್ದು ಫೈನಲ್​ನತ್ತ ಲಗ್ಗೆ ಇಟ್ಟಿದೆ.

ಈ ಪಂದ್ಯದಲ್ಲಿ ಗೋಲ್​ ಬಾರಿಸುವ ಮೂಲಕ ಚೇಟ್ರಿ ಅವರು ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ 81ನೇ ಗೋಲು ಗಳಿಸಿದ ದಾಖಲೆ ಮಾಡಿದರು. ಈ ಮೂಲಕ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್​ ದಾಖಲಿಸಿದ ಪಟ್ಟಿಯಲ್ಲಿ ಚೆಟ್ರಿ ಮೂರನೇ ಸ್ಥಾನ ಪಡೆದಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚೇಟ್ರಿ ಅವರಿಗೆ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಶುಭಾಶಯ ತಿಳಿಸಿದ್ದಾರೆ.

ಗುರುವಾರ ಭಾರತ-ಲೆಬೆನಾನ್ ಮತ್ತು ವನವಾಟು-ಮಂಗೋಲಿಯಾ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಗೆದ್ದವರು ಜೂನ್​ 18 ಭಾನುವಾರದಂದು ನಡೆಯುವ ಫೈನಲ್​ನಲ್ಲಿ ಸೆಣಸಲಿದ್ದಾರೆ.

ಇದನ್ನೂ ಓದಿ: Lionel Messi detained: ​ಫುಟ್ಬಾಲ್​ ತಾರೆ​ ಲಿಯೋನೆಲ್​ ಮೆಸ್ಸಿ ಬಂಧಿಸಿದ ಚೀನಾ ಪೊಲೀಸರು.. ಕಾರಣ ಇದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.