ಜರ್ಮನಿ: 2 ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಜಯಿಸಿರುವ ಕಿಡಂಬಿ ಶ್ರೀಕಾಂತ್ 1,80,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ.
7ನೇ ಶ್ರೇಯಾಂಕದ ಸಿಂಧು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್ನ ಬುಸಾನನ್ ಒಂಗ್‌ಬಮ್ರುಂಗಫನ್ ವಿರುದ್ಧ 21-8, 21-7ರ ಅಂತರದಲ್ಲಿ ಯಾವುದೇ ಪೈಪೋಟಿಯಿಲ್ಲದೆ ಜಯ ಸಾಧಿಸಿದರು. ಈ ಮೂಲಕ ವಿಶ್ವದ 11ನೇ ಶ್ರೇಯಾಂಕದ ಥಾಯ್ ಶಟ್ಲರ್ ವಿರುದ್ಧ 15ನೇ ಜಯ ಸಾಧಿಸಿದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಟೂರ್ನಿಯಲ್ಲಿ 8ನೇ ಶ್ರೇಯಾಂಕ ಪಡೆದಿರುವ ಶ್ರೀಕಾಂತ್ ಫ್ರಾನ್ಸ್ನ ಬ್ರೈಸ್ ಲೆವೆರ್ಡ್ಜ್ ವಿರುದ್ಧ 21-10, 13-21, 21-7ರಲ್ಲಿ ಜಯ ಸಾಧಿಸಿದರು. ಇದು ಫ್ರಾನ್ಸ್ ಶಟ್ಲರ್ ವಿರುದ್ಧ ಶ್ರೀಕಾಂತ್ಗೆ ಸಿಕ್ಕ ಸತತ 4ನೇ ಜಯವಾಗಿದೆ.
2019ರ ಚಾಂಪಿಯನ್ ಮುಂದಿನ ಸುತ್ತಿನಲ್ಲಿ ಸ್ಪೇನ್ನ ಬೀಟ್ರಿಜ್ ಕೊರೆಲ್ಸ್ ಅಥವಾ ಚೀನಾದ ಜಾಂಗ್ ಯಿ ಮ್ಯಾನ್ ವಿರುದ್ಧ, ಶ್ರೀಕಾಂತ್ ಚೀನಾದ ಲು ಗುವಾಂಗ್ ಜು ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಮಿಕ್ಸೆಡ್ ಡಬಲ್ಸ್ನಲ್ಲಿ ಸಾಯ್ ಪ್ರತೀಕ್ ಮತ್ತು ಸಿಕ್ಕಿ ರೆಡ್ಡಿ ಜೋಡಿ ಅಗ್ರಸ್ಥಾನ ಪಡೆದಿರುವ ಥಾಯ್ ಜೋಡಿ ಡೆಚಪೋಲ್ ಪುವರನುಕ್ರೊ ಮತ್ತು ಸಪ್ಸಿರೀ ವಿರುದ್ಧ 19-21-8-21ರಲ್ಲಿ ಸೋಲು ಅನುಭವಿಸಿದರು.
ಇದನ್ನೂ ಓದಿ:ಮಹಿಳೆಯರ ಏಕದಿನ ರ್‍ಯಾಂಕಿಂಗ್: ಲ್ಯಾನಿಂಗ್ಗೆ 2ನೇ ಸ್ಥಾನ, ಮಿಥಾಲಿ-ಮಂಧಾನ ಕುಸಿತ