ETV Bharat / sports

ನನ್ನ ಹೆಸರು ಬಳಸಿಕೊಂಡು ವಿವಾದ ಸೃಷ್ಟಿಸಬೇಡಿ: ನದೀಮ್ ವಿರುದ್ಧದ ನೆಟ್ಟಿಗರ ಟೀಕೆಗೆ ನೀರಜ್​ ಬೇಸರ - Pakistan's Arshad Nadeem

ನಿಮ್ಮ ಹಿತಾಸಕ್ತಿಗಳು ಮತ್ತು ಪ್ರಚಾರವನ್ನು ಹೆಚ್ಚಿಸಿಕೊಳ್ಳಲು ದಯವಿಟ್ಟು ನನ್ನನ್ನು ಮತ್ತು ನನ್ನ ಕಮೆಂಟ್‌ಗಳನ್ನು ಮಾಧ್ಯಮವಾಗಿ ಬಳಸಬೇಡಿ ಎಂದು ನಾನು ಎಲ್ಲರಲ್ಲೂ ವಿನಂತಿಸುತ್ತೇನೆ. ಕ್ರೀಡೆಗಳು ನಮಗೆ ಒಗ್ಗಟ್ಟು ಮತ್ತು ಒಂದಾಗುವಿಕೆ ಕಲಿಸುತ್ತದೆ. ನನ್ನ ಇತ್ತೀಚಿನ ಕಮೆಂಟ್​ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳು ನನಗೆ ನಿರಾಸೆ ತರಿಸಿದೆ " ಎಂದು ಚೋಪ್ರಾ ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.

Chopra trashes javelin controversy
ನೀರಜ್ ಚೋಪ್ರಾ
author img

By

Published : Aug 26, 2021, 5:57 PM IST

ಪಾಣಿಪತ್​: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್​ ಚೋಪ್ರಾ, ಪಾಕಿಸ್ತಾನದ ಜಾವೆಲಿನ್​ ಥ್ರೋವರ್​ ಅರ್ಷದ್ ನದೀಮ್​ ತಮ್ಮ ಜಾವಲಿನ್​ಅನ್ನು ಟ್ಯಾಂಪರಿಂಗ್ ಮಾಡಲು ಯತ್ನಿಸಿದ್ದರು ಎಂಬ ಊಹಾಪೋಹಗಳನ್ನು ತಿರಸ್ಕರಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನ ಜಾವೆಲಿನ್​ ಫೈನಲ್​ ವೇಳೆ ಚೋಪ್ರಾ ಮೊದಲ ಅವಕಾಶವನ್ನು ಆತುರವಾಗಿ ಎಸೆದಿದ್ದರು. ಇದಕ್ಕೆ ಸಂದರ್ಶವೊಂದರಲ್ಲಿ ಪ್ರತಿಕ್ರಿಯಿಸಿದ ಅವರು ನನ್ನ ಮೊದಲ ಎಸೆತದ ಸಂದರ್ಭದಲ್ಲಿ ನನ್ನ ಜಾವೆಲಿನ್​ ಕಾಣಿಸುತ್ತಿರಲಿಲ್ಲ, ಅದು ತಕ್ಷಣ ಪಾಕಿಸ್ತಾನ ಅರ್ಷದ್ ನದೀಮ್ ಅವರ ಕೈಯಲ್ಲಿ ಕಾಣಿಸಿತು. ಆಗಲೇ ತಡವಾಗಿದ್ದರಿಂದ ಅದನ್ನು ಅವರಿಂದ ಕೇಳಿ ಪಡೆದು ಆತುರವಾಗಿ ನನ್ನ ಮೊದಲ ಪ್ರಯತ್ನವನ್ನು ಮುಗಿಸಿದ್ದೆ ಎಂದು ಅವರು ತಿಳಿಸಿದ್ದರು.

ಈ ಹೇಳಿಕೆಯನ್ನು ಬಳಸಿಕೊಂಡ ಕೆಲವು ನೆಟ್ಟಿಗರು ಪಾಕಿಸ್ತಾನದ ಅರ್ಷದ್​​, ನೀರಜ್​ ಅವರ ಜಾವೆಲಿನ್ ​ಅನ್ನು ಟ್ಯಾಂಪರಿಂಗ್ ಮಾಡಲು ಪ್ರಯತ್ನಿಸಿದ್ದರು. ಆದರೆ, ನೀರಜ್​ಗೆ ಕೈಯಲ್ಲಿ ಸಿಕ್ಕಿಬಿದ್ದರು ಎಂದೆಲ್ಲಾ ಕಮೆಂಟ್​ ಮಾಡಿದ್ದರು. ಇನ್ನೂ ಕೆಲವರು ಫೈನಲ್ಸ್​ ವೇಳೆ ಚೋಪ್ರಾ ನದೀಮ್​ರಿಂದ ಜಾವಲಿನ್ ಪಡೆಯುತ್ತಿರುವ ವಿಡಿಯೋವನ್ನು ಬಳಸಿ ನದೀಮ್​ ಅವರನ್ನು ಟೀಕಿಸಿದ್ದರು.

  • मेरी आप सभी से विनती है की मेरे comments को अपने गंदे एजेंडा को आगे बढ़ाने का माध्यम न बनाए। Sports हम सबको एकजूट होकर साथ रहना सिखाता हैं और कमेंट करने से पहले खेल के रूल्स जानना जरूरी होता है 🙏🏽 pic.twitter.com/RLv96FZTd2

    — Neeraj Chopra (@Neeraj_chopra1) August 26, 2021 " class="align-text-top noRightClick twitterSection" data=" ">

ಆದರೆ, ಇದರ ಬಗ್ಗೆ ಸ್ಪಷ್ಟನೆ ನೀಡಿರುವ ನೀರಜ್, "ನಿಮ್ಮ ಹಿತಾಸಕ್ತಿಗಳು ಮತ್ತು ಪ್ರಚಾರವನ್ನು ಹೆಚ್ಚಿಸಿಕೊಳ್ಳಲು ದಯವಿಟ್ಟು ನನ್ನನ್ನು ಮತ್ತು ನನ್ನ ಕಮೆಂಟ್‌ಗಳನ್ನು ಮಾಧ್ಯಮವಾಗಿ ಬಳಸಬೇಡಿ ಎಂದು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಕ್ರೀಡೆಗಳು ನಮಗೆ ಒಗ್ಗಟ್ಟು ಮತ್ತು ಒಂದಾಗುವಿಕೆಯನ್ನು ಕಲಿಸುತ್ತದೆ. ನನ್ನ ಇತ್ತೀಚಿನ ಕಮೆಂಟ್​ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳು ನನಗೆ ನಿರಾಸೆ ತರಿಸಿದೆ " ಎಂದು ಚೋಪ್ರಾ ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.

ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಜಾವೆಲಿನ್​ ಪಟು

ಯಾವುದೇ ಎಸೆತಗಾರ ಸ್ಪರ್ಧೆಯಲ್ಲಿ ಯಾರದೇ ಜಾವೆಲಿನ್​ ಅನ್ನಾದರೂ ಎಸೆಯಬಹುದು, ಇದಕ್ಕೆ ಯಾವುದೇ ನಿಯಮಗಳಿಲ್ಲ ಎಂದು 23 ವರ್ಷದ ನೀರಜ್ ನದೀಮ್ ತಮ್ಮ ಜಾವೆಲಿನ್​ ಕದಿಯಲು ಅಥವಾ ಇನ್ಯಾವುದೇ ದುಷ್ಕೃತ್ಯ ಎಸಗಲು ಪ್ರಯತ್ನಿಸಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಚಿಕ್ಕದನ್ನು ದೊಡ್ಡದು ಮಾಡಬೇಡಿ

ನನ್ನ ಇತ್ತೀಚಿನ ಹೇಳಿಕೆ ಬಗ್ಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ಸಂದರ್ಶನವೊಂದರಲ್ಲಿ ನಾನು ಪಾಕಿಸ್ತಾನದ ಅರ್ಷದ್​ ನದೀಮ್​ ನನ್ನ ಜಾವೆಲಿನ್​ ಉಪಯೋಗಿಸುತ್ತಿದ್ದರು ಎಂದು ನಾನು ಹೇಳಿದ್ದೆ. ಇಂತಹ ಚಿಕ್ಕ ವಿಷಯವನ್ನು ದೊಡ್ಡ ವಿವಾದವನ್ನಾಗಿ ಮಾಡಲಾಗಿದೆ.

ನಾವು ನಮ್ಮ ವೈಯಕ್ತಿಕ ಜಾವಲಿನ್​ಅನ್ನು ರ್ಯಾಕ್​ನಲ್ಲಿ ಇಟ್ಟಿರುತ್ತೇವೆ. ಅದು ನಿಯಮವಾಗಿದೆ. ನದೀಮ್​ ಅಲ್ಲಿ ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರು ನನ್ನ ಜಾವೆಲಿನ್​ನಲ್ಲಿ ತಮ್ಮ ಎಸೆತಕ್ಕಾಗಿ ಸಿದ್ಧರಾಗುತ್ತಿದ್ದರು. ಆ ಸಂದರ್ಭದಲ್ಲಿ ನನ್ನ ಅವಕಾಶ ಬಂದಿದ್ದರಿಂದ ನಾನು ಅವರನ್ನು ಜಾವೆಲಿನ್ ಕೇಳಿ ಪಡೆದುಕೊಂಡೆ. ಇದೊಂದು ದೊಡ್ಡ ವಿಚಾರವಲ್ಲ" ಎಂದು ಚೋಪ್ರಾ ತಿಳಿಸಿದ್ದಾರೆ.

ಸಣ್ಣ ವಿಷಯವನ್ನು ವಿವಾದ ಮಾಡ್ತಿರುವುದು ದುಃಖ ತಂದಿದೆ

ಆದರೆ, ಜನರು ನನ್ನ ಹೆಸರನ್ನು ಬಳಸಿಕೊಂಡು ವಿವಾದ ಸೃಷ್ಟಿಸುತ್ತಿರುವುದು ನನಗೆ ದುಃಖ ತಂದಿದೆ. ದಯವಿಟ್ಟು ನನ್ನನ್ನು ಇದರಲ್ಲಿ ಸಿಲುಕಿಸಬೇಡಿ ಎಂದು ಎಲ್ಲರಲ್ಲಿ ನಾನು ಮನವಿ ಮಾಡುತ್ತೇನೆ. ಕ್ರೀಡೆ ಎಲ್ಲರನ್ನೂ ಒಂದು ಗೂಡಿಸುತ್ತದೆ. ಎಲ್ಲ ದೇಶಗಳ ಜಾವಲಿನ್​ ಥ್ರೋವರ್​ಗಳು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಹಾಗಾಗಿ ನನ್ನ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಕೆಲಸಗಳನ್ನು ಮಾಡಬೇಡಿ ಎಂದು ವಿಡಿಯೋವನ್ನು ಮುಗಿಸಿದ್ದಾರೆ.

ಇದನ್ನು ಓದಿ:ಒಲಿಂಪಿಕ್ಸ್​ನಲ್ಲಿ​ ನೀರಜ್​ ಚೋಪ್ರಾ ಚಿನ್ನ ತಪ್ಪಿಸಲು ಯತ್ನಿಸಿದ್ರಾ ಪಾಕ್​ ಪ್ಲೇಯರ್​? ಚೋಪ್ರಾ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.