ETV Bharat / sports

ಕೊರಿಯನ್ ಓಪನ್​: ಸಿಂಧು, ಶ್ರೀಕಾಂತ್​ ಶುಭಾರಂಭ; 2ನೇ ಸುತ್ತಿಗೆ ಚಿರಾಗ್-ಸಾತ್ವಿಕ್​ ಜೋಡಿ - ಕೊರಿಯನ್​ ಓಪನ್​​ ಸೂಪರ್​ 500 ಬ್ಯಾಡ್ಮಿಂಟನ್​ ಟೂರ್ನಮೆಂಟ್

ಬುಧವಾರ ನಡೆದ ಪಂದ್ಯದಲ್ಲಿ 2 ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅಮೆರಿಕದ ಲಾರೆನ್​ ಲ್ಯಾಮ್​ ವಿರುದ್ಧ 21-15, 21-14ರಲ್ಲಿ ಮತ್ತು ಶ್ರೀಕಾಂತ್​ ಮಲೇಷ್ಯಾದ ವಿಶ್ವದ 35ನೇ ಶ್ರೇಯಾಂಕಿತ ಡರೇನ್ ಲೀವ್​ ವಿರುದ್ಧ 22-20, 21-11ರ ಅಂತರದಲ್ಲಿ ಗೆಲುವು ಸಾಧಿಸಿದರು.

Sindhu, Srikanth sail into Korea Open second round
ಪಿವಿ ಸಿಂಧು -ಕಿಡಂಬಿ ಶ್ರೀಕಾಂತ್
author img

By

Published : Apr 6, 2022, 4:17 PM IST

ಸಂಚಿಯಾನ್: ಭಾರತದ ಅಗ್ರ ಶಟ್ಲರ್​ಗಳಾದ ಪಿ.ವಿ.ಸಿಂಧು ಮತ್ತು ಕಿಡಂಬಿ ಶ್ರೀಕಾಂತ್​ ಕೊರಿಯನ್​ ಓಪನ್​​ ಸೂಪರ್​ 500 ಬ್ಯಾಡ್ಮಿಂಟನ್​ ಟೂರ್ನಮೆಂಟ್​​ನ ಸಿಂಗಲ್ಸ್ ವಿಭಾಗದಲ್ಲಿ ಜಯ ಸಾಧಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ 2 ಒಲಿಂಪಿಕ್ ಪದಕಗಳ ವಿಜೇತೆ ಪಿ.ವಿ.ಸಿಂಧು ಅಮೆರಿಕದ ಲಾರೆನ್​ ಲ್ಯಾಮ್​ ವಿರುದ್ಧ 21-15, 21-14ರಲ್ಲಿ ವಿಜಯಿಯಾದರು. ಇನ್ನೊಂದು ಪಂದ್ಯದಲ್ಲಿ ಶ್ರೀಕಾಂತ್​ ಮಲೇಷ್ಯಾದ ವಿಶ್ವದ 35ನೇ ಶ್ರೇಯಾಂಕಿತ ಡರೇನ್ ಲೀವ್​ ವಿರುದ್ಧ 22-20, 21-11ರ ಅಂತರದಲ್ಲಿ ಗೆಲುವು ದಾಖಲಿಸಿದರು.

ಟೂರ್ನಿಯಲ್ಲಿ 3ನೇ ಶ್ರೇಯಾಂಕ ಪಡೆದಿರುವ ಸಿಂಧು ಮುಂದಿನ ಸುತ್ತಿನಲ್ಲಿ ಜಪಾನ್​ನ ಆಯ ಒಹೋರಿ ವಿರುದ್ಧ ಸೆಣಸಾಡಲಿದ್ದಾರೆ. ಸಿಂಧು ಇತ್ತೀಚೆಗೆ ನಡೆದಿದ್ದ ಸ್ವಿಸ್​ ಓಪನ್​​ ಟೈಟಲ್ ಜಯಿಸಿದ್ದರು. ಇದೀಗ ಮತ್ತೊಂದು ಪ್ರಶಸ್ತಿ ಗೆಲ್ಲುವತ್ತ ಮುನ್ನುಗ್ಗುತ್ತಿದ್ದಾರೆ. ವಿಶ್ವ ಚಾಂಪಿಯನ್​ಶಿಪ್ ಬೆಳ್ಳಿ ಪದಕ ವಿಜೇತ ಶ್ರೀಕಾಂತ್​ 2ನೇ ಸುತ್ತಿನ ಪಂದ್ಯದಲ್ಲಿ ಇಸ್ರೇಲ್​ನ ಮಿಶಾ ಜಿಲ್ಬೆರ್ಮನ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಸಾತ್ವಿಕ್ ಸಾಯಿರಾಜ್​-ಚಿರಾಗ್ ಶೆಟ್ಟಿಗೆ ಗೆಲುವು: ಭಾರತದ ಡಬಲ್ಸ್​ ವಿಭಾಗದ ಅಗ್ರ ಜೋಡಿ ಸಾತ್ವಿಕ್​ ಸಾಯಿರಾಜ್​​​ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮೊದಲ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಟೇ ಯಂಗ್ ಶಿನ್ ಮತ್ತು ವಾಂಗ್ ಚಾನ್ ವಿರುದ್ಧ 21-16, 21-15ರಲ್ಲಿ ಜಯ ಸಾಧಿಸಿದ್ದಾರೆ. ಅರ್ಜುನ್​ ಮತ್ತು ಧ್ರುವ್​ ಜೋಡಿ ವಾಕ್​ ಓವರ್​ ಪಡೆಯುವ ಮೂಲಕ ಸುಲಭವಾಗಿ ದ್ವಿತೀಯ ಸುತ್ತು ಪ್ರವೇಶಿಸಿದರು.

ಇದನ್ನೂ ಓದಿ:ಐಪಿಎಲ್​ನಲ್ಲಿ ಶತಕದ ಜಯ ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.