ETV Bharat / sports

ಚೀನಾದ ಹಾನ್‌ ಯುಯೆ ಸೋಲಿಸಿ, ಸೆಮಿಸ್‌ಗೆ ಎಂಟ್ರಿ ಕೊಟ್ಟ ಸಿಂಧು - ಸೆಮಿಸ್‌ಗೆ ಎಂಟ್ರಿ ಕೊಟ್ಟ ಸಿಂಧು

ಸಿಂಗಾಪುರದಲ್ಲಿ ನಡೆಯುತ್ತಿರುವ ಓಪನ್ ಸೂಪರ್ 500 ಟೂರ್ನಮೆಂಟ್‌ನಲ್ಲಿ ಪಿವಿ ಸಿಂಧು ಚೀನಾದ ಆಟಗಾರ್ತಿಯನ್ನು ಸೋಲಿಸಿ, ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಸಿಂಧು
ಸಿಂಧು
author img

By

Published : Jul 15, 2022, 3:49 PM IST

ಸಿಂಗಾಪುರ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಶುಕ್ರವಾರ ಸಿಂಗಾಪುರದಲ್ಲಿ ನಡೆಯುತ್ತಿರುವ ಓಪನ್ ಸೂಪರ್ 500 ಟೂರ್ನಮೆಂಟ್‌ನಲ್ಲಿ ಗೆಲುವು ಸಾಧಿಸಿ, ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಚೀನಾದ ಪ್ರತಿಸ್ಪರ್ಧಿ ಹಾನ್ ಯುಯೆ ಅವರ ಪ್ರಬಲ ಸವಾಲನ್ನು ಮೆಟ್ಟಿ ನಿಂತಿದ್ದಾರೆ. ಪಿ.ವಿ ಸಿಂಧು 17-21, 21-11, 21-19 ಸೆಟ್​ಗಳ ಅಂತರದಿಂದ ಗೆಲುವು ಸಾಧಿಸಿ ವಿಕ್ರಮ ಮೆರೆದಿದ್ದಾರೆ.

ಸಿಂಧು ಈಗ ಚೀನಾ ವಿರುದ್ಧ 3-0 ಮುನ್ನಡೆ ಸಾಧಿಸಿದ್ದಾರೆ. ಮೇನಲ್ಲಿ ಥಾಯ್ಲೆಂಡ್ ಓಪನ್ ಟೂರ್ನಮೆಂಟ್​ ನಂತರ ಇದು ಸಿಂಧು ಅವರ ಮೊದಲ ಸೆಮಿಫೈನಲ್ ಪ್ರವೇಶವಾಗಿದೆ. ಬರ್ಮಿಂಗ್ಹ್ಯಾಮ್​ನಲ್ಲಿ ನಡೆಯುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಗೆಲುವು ಸಾಧಿಸಲು ಸಾಧ್ಯವಾಗುತ್ತದೆಯೇ ಎಂಬುದನ್ನು ನೋಡಬೇಕು.

ಇದನ್ನೂ ಓದಿ: ‘ದೃಢವಾಗಿರಿ, ಈ ಸಮಯ ಕಳೆದುಹೋಗುತ್ತದೆ’: ಕೊಹ್ಲಿಗೆ ಧೈರ್ಯ ತುಂಬಿದ ಪಾಕ್ ಕ್ರಿಕೆಟಿಗ

ಇತರ ಇಬ್ಬರು ಭಾರತೀಯರಾದ ಅನುಭವಿ ಸೈನಾ ನೆಹ್ವಾಲ್ ಮತ್ತು ಎಚ್‌ಎಸ್ ಪ್ರಣೋಯ್ ಕೂಡ ಪಂದ್ಯಾವಳಿಯಲ್ಲಿ ಕೊನೆಯ ನಾಲ್ಕು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.