ಭುವನೇಶ್ಚವರ್ (ಒಡಿಶಾ): ಭಾರತದ ಅಗ್ರ ಶಾಟ್‌ಪುಟ್ ಪಟು ತೇಜಿಂದರ್ ಪಾಲ್ ಸಿಂಗ್ ತೂರ್ ಸೋಮವಾರ ಮತ್ತೊಮ್ಮೆ ದಾಖಲೆ ನಿರ್ಮಿಸಿದ್ದಾರೆ. ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್‌ಷಿಪ್‌ನ ಅಂತಿಮ ದಿನದಂದು ಶಾಟ್‌ಪುಟ್ ಬಾಲ್ ಅನ್ನು 21.77 ಮೀಟರ್ ದೂರ ಎಸೆದು ತಮ್ಮದೇ ಹೆಸರಲ್ಲಿದ್ದ ಹಳೆಯ ಏಷ್ಯನ್ ದಾಖಲೆಯನ್ನು ಮುರಿದು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು.
-
News Flash: Tejinder Pal Toor creates new Asian Record in Shotput 🔥🔥🔥
— India_AllSports (@India_AllSports) June 19, 2023 " class="align-text-top noRightClick twitterSection" data="
➡️ With attempt of 21.77m at the Inter State Championships, he broke his own earlier National record of 21.49m.
➡️ And yes, he has qualified for World Athletics Championships (mark: 21.40m) pic.twitter.com/FNnjGvKAaz
">News Flash: Tejinder Pal Toor creates new Asian Record in Shotput 🔥🔥🔥
— India_AllSports (@India_AllSports) June 19, 2023
➡️ With attempt of 21.77m at the Inter State Championships, he broke his own earlier National record of 21.49m.
➡️ And yes, he has qualified for World Athletics Championships (mark: 21.40m) pic.twitter.com/FNnjGvKAazNews Flash: Tejinder Pal Toor creates new Asian Record in Shotput 🔥🔥🔥
— India_AllSports (@India_AllSports) June 19, 2023
➡️ With attempt of 21.77m at the Inter State Championships, he broke his own earlier National record of 21.49m.
➡️ And yes, he has qualified for World Athletics Championships (mark: 21.40m) pic.twitter.com/FNnjGvKAaz
ಪಂಜಾಬ್ ಅನ್ನು ಪ್ರತಿನಿಧಿಸುವ 28 ವರ್ಷದ ತೇಜಿಂದರ್ ಪಾಲ್ 2021ರಲ್ಲಿ ಪಟಿಯಾಲದಲ್ಲಿ ನಡೆದ ಶಾಟ್‌ಪುಟ್ ಪಂದ್ಯವಳಿಯಲ್ಲಿ 21.49 ಮೀ ದೂರ ಎಸೆದು ಏಷ್ಯನ್ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಶಾಟ್ಪುಟ್ನ ಮೂರನೇ ಎಸೆತದಲ್ಲಿ 21.77ಮೀ ದೂರ ಎಸೆದು ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ಈ ಋತುವಿನಲ್ಲಿ ವಿಶ್ವದ ಒಂಬತ್ತನೇ ಅತ್ಯುತ್ತಮ ಪ್ರದರ್ಶನ ಇದಾಗಿದೆ.
ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಥ್ರೋ 21.40 ಮೀ, ಜೊತೆಗೆ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು 19 ಮೀ. ಥ್ರೋ ನಿಗದಿ ಪಡಿಸಲಾಗಿತ್ತು. ಮೂರನೇ ಸುತ್ತಿನಲ್ಲಿ 21.77 ಥ್ರೋ ಮೂಲಕ ಅವರು ಈ ಎರಡು ಪಂದ್ಯಾವಳಿಗಳಿಗೆ ಅರ್ಹತೆ ಪಡೆದಿದ್ದಾರೆ.
ಏಷ್ಯನ್ ಗೆಮ್ಸ್ ಚಿನ್ನದ ಪದಕ ವಿಜೇತ ತೇಜಿಂದರ್ ತಮ್ಮ ಆರಂಭಿಕ ಥ್ರೋ 21.09 ಮೀ ಮೂಲಕ ಮೊದಲ ಸುತ್ತಿನಲ್ಲೇ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು. ಬಳಿಕ ತಮ್ಮದೆ ಏಷ್ಯನ್ ದಾಖಲೆ ಮುರಿಯಲು ಎರಡನೇ ಥ್ರೋನಲ್ಲಿ ಪ್ರಯತ್ನಿಸಿದರು. ಆದರೆ, ಎರಡನೇ ಎಸೆತವು ಫೌಲ್ ಆಯಿತು. ಅಂತಿಮವಾಗಿ ಮೂರನೇ ಪ್ರಯತ್ನದಲ್ಲಿ ತಮ್ಮ ಹಿಂದಿನ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾದರು. ಕರಣ್ವೀರ್ ಸಿಂಗ್ 19.78ಮೀ ಥ್ರೋ ಮೂಲಕ ಎರಡನೇ ಸ್ಥಾನ ಪಡೆದು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತೇಜಿಂದರ್ ತೂರ್, "ತರಬೇತಿ ವೇಳೆ 21.49 ಮೀ ದೂ ಥ್ರೋ ಮಾಡಲು ರೂಪಿಸಿಕೊಂಡಿದ್ದ ಯೋಜನೆ ಯಶಸ್ವಿಯಾಗಿದೆ. ನನ್ನ ಮುಂದಿನ ಯೋಜನೆ 22 ಮೀ ದೂರದ ಥ್ರೋ ಆಗಿದೆ" ಎಂದು ತಮ್ಮ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಮತ್ತೊಂದೆಡೆ 100 ಮೀ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ ಚಿನ್ನದ ಪದಕ ಗೆದ್ದ ಟೂರ್ನಿಯ ಅತ್ಯುತ್ತಮ ಮಹಿಳಾ ಅಥ್ಲೀಟ್ ಆಗಿ ಹೊರಹೊಮ್ಮಿದರು.
ಪುರುಷರ ಲಾಂಗ್ ಜಂಪ್ ಪಂದ್ಯಾವಳಿಯಲ್ಲಿ ಸ್ಟಾರ್ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಅವರು ತಮ್ಮ ನಾಲ್ಕನೇ ವೃತ್ತಿಜೀವನದ ಅತ್ಯುತ್ತಮ 8.29 ಮೀಟರ್‌ಗಳ ಜಂಪ ಮಾಡುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಕೇರಳವನ್ನು ಪ್ರತಿನಿಧಿಸುತ್ತಿರುವ 24ರ ಹರೆಯದ ಶ್ರೀಶಂಕರ್ ಎರಡನೇ ಸುತ್ತಿನಲ್ಲಿ 8.03ಮೀಟರ್‌ಗಳೊಂದಿಗೆ ಆರಂಭಿಕರಾಗಿ ದಿನದ ಅತ್ಯುತ್ತಮ ಸಾಧನೆ ಮಾಡಿದರು. ನಂತರ ಅವರ ಮುಂದಿನ ನಾಲ್ಕು ಜಿಗಿತಗಳು ಫೌಲ್ ಆಗಿದ್ದವು.
ಇನ್ನು ತಮಿಳುನಾಡಿನ ಜೆಸ್ವಿನ್ ಆಲ್ಡ್ರಿನ್ 7.98 ಮೀ ಅತ್ಯುತ್ತಮ ಜಂಪ್ದೊಂದಿಗೆ ಎರಡನೇ ಸ್ಥಾನ ಪಡೆದರು. ಈ ಮೂಲಕ ಏಷ್ಯನ್ ಗೇಮ್ಸ್ ಅರ್ಹತಾ ಮಾರ್ಕ್ ಅನ್ನು 7.95 ಮೀ ಮೀರಿ ಜಂಪ್ ಮಾಡಿ ಏಷ್ಯನ್ ಗೇಮ್ಸ್ ಲಾಂಗ್ ಜಂಪ್ಗೆ ಸುಲಭವಾಗಿ ಅರ್ಹತೆ ಪಡೆದರು.
ಮಹಿಳೆಯರ ಲಾಂಗ್ ಜಂಪ್ನಲ್ಲಿ ಕೇರಳದ ಆನ್ಸಿ ಸೋಜನ್ ಚಿನ್ನದ ಪದಕ ಗೆದ್ದಿದ್ದಾರೆ. ಐದನೇ ಸುತ್ತಿನಲ್ಲಿ 6.51 ಮೀ. ಜಂಪ್ ಮೂಲಕ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು.
ಜಾವೆಲಿನ್ ಥ್ರೋ ಪಂದ್ಯಾವಳಿಯಲ್ಲಿ ಮೂವರು ಅಥ್ಲೀಟ್‌ಗಳಾದ ಉತ್ತರ ಪ್ರದೇಶದ ರೋಹಿತ್ ಯಾದವ್, ಒಡಿಶಾದ ಕಿಶೋರ್ ಕುಮಾರ್ ಜೆನಾ ಮತ್ತು ಉತ್ತರ ಪ್ರದೇಶದ ಶಿವಪಾಲ್ ಸಿಂಗ್ ಏಷ್ಯನ್ ಗೇಮ್ಸ್ ಅರ್ಹತೆ ಪಡೆದಿದ್ದಾರೆ.
ಇದನ್ನೂ ಓದಿ: Fencing: ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭವಾನಿ ದೇವಿಗೆ ಐತಿಹಾಸಿಕ ಕಂಚು